ದಾವಣಗೆರೆ (Davanagere) : ಪರಿಶಿಷ್ಟ ಪಂಗಡದ ರೈತರಿಗೆ 2018-19ನೇ ಸಾಲಿನ ಭಾರತದ ಸಂವಿಧಾನ ಅನುಚ್ಛೇದ 275/1 ರಡಿ ಪರಿಶಿಷ್ಟ ವರ್ಗದವರ ಅಭಿವೃದ್ಧಿ ಕಾರ್ಯಕ್ರಮದಡಿ ಪಾಲಿ, ನೆರಳು ಪರದೆ ಕಾರ್ಯಕ್ರಮಕ್ಕೆ ಫಲಾನುಭವಿವಂತಿಕೆ ನೀಡಲು ಸಿದ್ದರಿರುವ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ರೂ.2,11,000/- ಗಳನ್ನು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ, ದಾವಣಗೆರೆ ರವರ ಹೆಸರಿನಲ್ಲಿ ಡಿ.ಡಿ. ಮೂಲಕ ಫಲಾನುಭವಿ ವಂತಿಕೆ ಭರಿಸಲು ಸಿದ್ಧರಿರುವ ಆಸಕ್ತ ಅರ್ಜಿದಾರಿಂದ ಇದೇ ಮೇ.23 ರ ಒಳಗಾಗಿ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳು, ಕೊಠಡಿ ಸಂಖ್ಯೆ:45, ಡಿ.ಸಿ ಕಚೇರಿ, ದಾವಣಗೆರೆ, ಇಲ್ಲಿ ಅರ್ಜಿಯನ್ನು ಪಡೆಯಬಹುದು.
Read also : ನಸುಕಿನ ಜಾವ ರೌಡಿಶೀಟರ್‌ಗಳ ನಿವಾಸಕ್ಕೆ ಪೊಲೀಸರ ದಾಳಿ, ಕೃತ್ಯಗಳಲ್ಲಿ ತೊಡಗಂದತೆ ಎಚ್ಚರಿಕೆ
ಅರ್ಜಿದಾರರು ಪರಿಶಿಷ್ಟ ಪಂಗಡಕ್ಕೆ ಸೇರಿದ್ದು ಸಣ್ಣ ಮತ್ತು ಅತಿ ಸಣ್ಣ ರೈತರಾಗಿ, ನೀರಾವರಿ ಸೌಲಭ್ಯ ಹೊಂದಿರಬೇಕು, ಫಲಾನುಭವಿಗಳ ವಾರ್ಷಿಕ ಆದಾಯ ರೂ.1.50 ಲಕ್ಷಗಳ ಒಳಗಡೆ ಇರಬೇಕು, ವಿದ್ಯುತ್ ಮಾರ್ಗ, ಸಂಪರ್ಕ ಹೊಂದಿರುವ ಕುರಿತು ಮಾಹಿತಿ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ, ದಾವಣಗೆರೆ ರವರ ಹೆಸರಿನಲ್ಲಿ ರೂ.2,11,000/-ಗಳನ್ನು ಡಿ.ಡಿ ಪಾವತಿಸಿದ ಚಲನ್, ಫಲಾನುಭವಿಯ ಹೆಸರಿನಲ್ಲಿರುವ ಪ್ರಸಕ್ತ ಸಾಲಿನ ಪಹಣಿ ಹೊಂದಿರಬೇಕು, ಅರ್ಜಿದಾರರು ಹಾಗೂ ಅವರ ಅವಲಂಬಿತ ಕುಟುಂಬ ಸದಸ್ಯರು ಸರ್ಕಾರಿ ನೌಕರಿಯಲ್ಲಿರಬಾರದು, ಘಟಕ ಸದುಪಯೋಗಪಡಿಸಿಕೊಳ್ಳುವ ಬಗ್ಗೆ ಪ್ರಮಾಣ ಪತ್ರ ಮುಚ್ಚಳಿಕೆ ಪತ್ರ ನೀಡಬೇಕು, ಅರ್ಜಿದಾರರಾಗಲೀ, ಕುಟುಂಬದ ಸದಸ್ಯರಾಗಲೀ ಯಾವುದೇ ಇಲಾಖೆ ನಿಗಮದಿಂದ ಈ ಹಿಂದೆ ಯಾವುದೇ ಯೋಜನೆಯಡಿ ಸೌಲಭ್ಯವನ್ನು ಪಡೆದಿರಬಾರದೆಂದು ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.