ದಾವಣಗೆರೆ (Davanagere) ಪ್ರಸಕ್ತ ಸಾಲಿಗೆ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯಕ್ಕೆ ಪ್ರವೇಶ ಬಯಸುವ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಾಗೂ ಪ್ರವರ್ಗ-1, 2ಎ, 2ಬಿ, 3ಬಿ ಮತ್ತು ಇತರೆ ಜನಾಂಗಗಳಿಗೆ ಸೇರಿದ ವಿದ್ಯಾರ್ಥಿಗಳಿಂದ ಆನ್‍ಲೈನ್‍ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ.
ಪಿ.ಯು.ಸಿ ಮತ್ತು ಪಿ.ಯು.ಸಿ ಸಮಾನಾಂತರ ಕೋರ್ಸಿನ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ಪಡೆಯಬಹುದು.
Read also : Harihara | ಸಮ ಸಮಾಜ ನಿರ್ಮಿಸಲು ಯುವ ಜನರು ಪಣ ತೊಡಬೇಕು : ನಟ ಅಹಿಂಸಾ ಚೇತನ್
https://swd.karnataka.gov.in/ ಆನ್‍ಲೈನ್‍ನಲ್ಲಿ ಆಗಸ್ಟ್ 31 ರೊಳಗಾಗಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂ.ಸಂಖ್ಯೆ: 9482300400 ಸಂಪರ್ಕಿಸಬಹುದೆಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.