ದಾವಣಗೆರೆ (Davanagere): ವಿಶ್ವಬ್ಯಾಂಕ್ ಟಾಸ್ಕ್ ಫೋರ್ಸ್ ತಂಡದ ಪ್ರತಿನಿಧಿಗಳಾದ ಕ್ರಿಸ್ಟೋಫರ್ ವೆಲ್ಸಿಯನ್, ಮರಿಯಪ್ಪ ಕುಳ್ಳಪ್ಪ ಹಾಗೂ ಕರ್ನಾಟಕ ಸುಸ್ಥಿರ ಗ್ರಾಮೀಣ ನೀರು ಸರಬರಾಜು ಕಾರ್ಯಕ್ರಮದ ಯೋಜನಾ ನಿರ್ದೇಶಕರಾದ ಜಾಫರ್ ಶರೀಫ್ ಸುತಾರ್ ಅವರುಗಳೊಂದಿಗೆ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ತಮ್ಮ ಗೃಹಕಚೇರಿಯಲ್ಲಿ ಶುಕ್ರವಾರ ಜಲಜೀವನ್ ಮಿಷನ್ ಕಾರ್ಯಚಟುವಟಿಕೆಗಳ ಕುರಿತು ಸಭೆ ನಡೆಸಿದರು.
ಜಲಜೀವನ್ ಮಿಷನ್ ದಿನದ 24 ಗಂಟೆ ಶುದ್ದಕುಡಿಯುವ ನೀರು ಪೂರೈಕೆ ಮಾಡುವ ಮಹತ್ವದ ಯೋಜನೆಯಾಗಿದೆ ಹಾಗೂ ಗ್ರಾಮಗಳು ಸ್ವಾವಲಂಬನೆಯತ್ತ ಸಾಗಲು ಸಾಧ್ಯ ಆದ್ದರಿಂದ ಸಭೆಯಲ್ಲಿ ಜಿಲ್ಲೆಯ ಪ್ರಗತಿ ಕುರಿತು ಮಾತನಾಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಸುರೇಶ್ ಬಿ ಇಟ್ನಾಳ್,ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾದ ಉಮಾ ಪ್ರಶಾಂತ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.