ಮಲೇಬೆನ್ನೂರು (Malebennur) :ಹಳ್ಳಿಹಾಳ್ ಗ್ರಾಮದ ಶ್ರೀನಿವಾಸರೆಡ್ಡಿ ಅವರ ಬಯಲು ದನದ ಕೊಟ್ಟಿಗೆ ಮನೆಯಲ್ಲಿದ್ದ ಎಮ್ಮೆ ಕರುವಿನ ಮೇಲೆ ಚಿರತೆ ದಾಳಿ ನಡೆಸಿದೆ. ಕರುವಿನ ಕುತ್ತಿಗೆಗೆ ಬಾಯಿ ಹಾಕಿ ಚಿರತೆ ರಕ್ತ ಹೀರಿದೆ. ಸುದ್ದಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆಯ ಡಿಆರ್‌ಎಪ್‌ಒ ಹಸನ್ ಭಾಷಾ ಮತ್ತು ಸಿಬ್ಬಂದಿಗಳು ತೆರಳಿ, ಇದು ಚಿರತೆ ದಾಳಿ ಎಂದು ಖಚಿತಪಡಿಸಿದ್ದಾರೆ.
ಮುಂಜಾಗೃತಾ ಕ್ರಮವಾಗಿ ರಾತ್ರಿ ವೇಳೆ ಜಾನುವಾರುಗಳನ್ನು ಬಯಲು ಕೊಟ್ಟಿಗೆಯಲ್ಲಿ ಕಟ್ಟಬೇಡಿ. ಚಿರತೆ ಹಿಡಿಯುವವರೆಗೂ ಮುಂಜಾಗೃತಾ ಕ್ರಮವಹಿಸಲು ಗ್ರಾಮಸ್ಥರಿಗೆ ತಿಳಿಸಿದ್ದಾರೆ.
ಚಿರತೆ ಸೆರೆಹಿಡಿಯಲು ಅಲ್ಲಲ್ಲಿ ಬೋನ್‌ಗಳನ್ನು ಅಳವಡಿಸಲಾಗಿದೆ. ತೀವ್ರ ಕಾರ್ಯಾಚರಣೆ ನಡೆಸುತ್ತಿದ್ದೇವೆ ಎಂದು ಡಿಆರ್‌ಎಪ್‌ಒ ಹಸನ್ ಭಾಷಾ ತಿಳಿಸಿದ್ದಾರೆ. ಚಿರತೆ ಹಾವಳಿಯಿಂದ ಗ್ರಾಮಸ್ಥರಲ್ಲಿ ಆತಂಕ ಮೂಡಿದೆ.