ಮ್ಯೂಚುಯಲ್ ಫಂಡ್ ಅಂದರೇನು ಇದನ್ನು ಹೇಗೆ ಹೂಡಿಕೆ ಮಾಡಬೇಕು ಎಂಬುದರ ಬಗ್ಗೆ ಈ ಲೇಖನದಲ್ಲಿ ತಿಳಿಸುವ ಪ್ರಯತ್ನ ಮಾಡುತ್ತಿದ್ದೇನೆ. ಸ್ನೇಹಿತರೆ, ಅನೇಕ ಜನಗಳಿಂದ ಹಣವನ್ನು ಸಂಗ್ರಹ ಮಾಡಿ ಆ ಒಟ್ಟಾದ ಹಣವನ್ನು ಶೇರ್ ಮಾರುಕಟ್ಟೆ, ಬಾಂಡ್, ಡಿಬೆಂಚರ್ ,ಇನ್ನೂ ಮುಂತಾದ ಆರ್ಥಿಕ ಸಾಧನಗಳಲ್ಲಿ ಹೂಡಿಕೆ ಮಾಡುವ ಒಂದು ವ್ಯವಸ್ಥೆಗೆ ಮ್ಯುಚುವಲ್ ಫಂಡ್ ಎಂದು ಕರೆಯುತ್ತಾರೆ.
ಇದನ್ನು ವೃತ್ತಿಪರ, ಅನುಭವಿ ( ಫಂಡ್ ಮ್ಯಾನೇಜರ್ ) ನಿರ್ವಹಣೆ ಮಾಡುತ್ತಾರೆ. ಇವರು ಅನೇಕ ವರ್ಷಗಳಿಂದ ಆರ್ಥಿಕ ಕ್ಷೇತ್ರದಲ್ಲಿ ಅನೇಕ ಸ್ತರಗಳಲ್ಲಿ ಕೆಲಸ ಮಾಡಿ ಅನುಭವ ಪಡೆದಿರುತ್ತಾರೆ. ಹೀಗೆ ಅನೇಕ ಜನಗಳಿಂದ ಸಂಗ್ರಹಿಸಿದ ಹಣವನ್ನು ಈ ಫಂಡ್ ಮ್ಯಾನೇಜರ್ ಹೂಡಿಕೆ ಮಾಡಿ ಅವರ ಅನುಭವದಿಂದ ಉತ್ತಮ ಲಾಭ ಮಾಡಿಕೊಡುತ್ತಾರೆ ಯಾರಿಗೆ ಸ್ಟಾಕ್ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಅನುಭವ ಅಥವಾ ಮಾಹಿತಿ ಇರುವುದಿಲ್ಲವೋ ಅವರು ಈ ಮ್ಯುಚುವಲ್ಲಿ ಫಂಡ್ಗಳಲ್ಲಿ ಹೂಡಿಕೆ ಮಾಡಿ ಒಳ್ಳೆಯ ಲಾಭವನ್ನು ಗಳಿಸಬಹುದು.
ಇದರಲ್ಲಿ ಎಷ್ಟು ವಿಧಗಳು
- ಇಕ್ಟಿಟಿ ಫಂಡ್ (Equity fund) ಅಂದರೆ ಇದರಲ್ಲಿ ಲಾಭ ಹೆಚ್ಚು ಹಾಗೆಯೇ ರಿಸ್ಕು ಹೆಚ್ಚಿರುತ್ತದೆ (High Risk-High profit).
- ಎರಡನೆಯದು ಡೆಟ್ ಫಂಡ್ (Debt Fund) ಇದರಲ್ಲಿ ಲಾಭ ನಿಶ್ಚಿತವಾಗಿರುತ್ತದೆ ಅಂದರೆ ಕಡಿಮೆ ಲಾಭ, ರಿಸ್ಕ್ ತುಂಬಾ ಕಡಿಮೆ ಇರುತ್ತದೆ (Low Risk – Low Profit).
- ಮೂರನೆಯದಾಗಿ ಹೈಬ್ರಿಡ್ ಫಂಡ್ಸ್ ಇದು ಇಕ್ವಿಟಿ ಮತ್ತು ಡೆಡ್ ಎರಡರ ಮಿಶ್ರಣವಾಗಿದೆ. ಇಲ್ಲಿ ಲಾಭ ಮಧ್ಯಮ, ರಿಸ್ಕ್ ಮಧ್ಯಮ ವಾಗಿರುತ್ತದೆ (Medium Risk – Medium profit)
ಇದೀಗ ಇದರಲ್ಲಿ ಎಷ್ಟು ವಿಧದಲ್ಲಿ ಹೂಡಿಕೆ ಮಾಡಬಹುದು ಎಂಬುದರ ಬಗ್ಗೆ ತಿಳಿಯೋಣ. ಮೊದಲನೆಯದಾಗಿ ಎಸ್ಐಪಿ(SIP) ಅಂದರೆ ಸಿಸ್ಟಮಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್ ಇದರಲ್ಲಿ ಪ್ರತಿ ತಿಂಗಳು ಹಣವನ್ನು ನಿಯಮಿತವಾಗಿ ಹೂಡಿಕೆ ಮಾಡುವುದು. ಉದಾಹರಣೆಗೆ ತಿಂಗಳಿಗೆ 5000 ದಂತೆ ಐದು, ಹತ್ತು ಅಥವಾ ನಿಮಗೆ ಎಷ್ಟು ವರ್ಷ ಆಗುತ್ತದೆಯೋ ಅಷ್ಟು ವರ್ಷ ಕಟ್ಟುತ್ತಾ ಹೋಗುವುದು. ಎರಡನೆಯದು ಒಂದು ಭಾರಿ ಮಾತ್ರ (Lumpsum)ಹೂಡಿಕೆ ಮಾಡುವುದು .ಮುಂದಿನ ಸಂಚಿಕೆಯಲ್ಲಿ ಮತ್ತಷ್ಟು ವಿಷಯ ಹಂಚಿಕೊಳ್ಳೋಣ.
ಮುರುಳಸಿದ್ಧಯ್ಯ ಕೆ ಆರ್
ವೃತ್ತಿಪರ ಮ್ಯುಚುವಲ್ ಫಂಡ್ ಡಿಸ್ಟ್ರಿಬ್ಯೂಟರ್ .
Mobile: 9620104888