ದಾವಣಗೆರೆ : ಸಂತೆಬೆನ್ನೂರು ಕೆನರಾ ಬ್ಯಾಂಕಿನಲ್ಲಿ ಮಹಿಳೆ ಬ್ಯಾಗನಿಂದ ಹಣ ಕಳ್ಳತನ ಮಾಡಿದ್ದ ಇಬ್ಬರು ಅಂತರ ರಾಜ್ಯ ಆರೋಪಿಗಳನ್ನು ಸಂತೆಬೆನ್ನೂರು ಪೊಲೀಸರು ಬಂಧಿಸಿದ್ದಾರೆ.
ಮಧ್ಯಪ್ರದೇಶದ ಪ್ರಿಯಾಂಕ ಸಿಸೋಡಿಯಾ, ಪ್ರಿಯಾಂಕ ಬಂಧಿತ ಆರೋಪಿಗಳು. ಸ್ವಪ್ನಾ ತಪ್ಪಿಸಿಕೊಂಡಿದ್ದ ಪತ್ತೆಗೆ ಕಾರ್ಯಚರಣೆ ನಡೆದಿದೆ.
ಗಿರಿವಿ ಇಟ್ಟಿದ್ದ ಬಂಗಾರದ ಒಡವೆ ಬಿಡಿಸುವ ಸಂದರ್ಭದಲ್ಲಿ ಮಹಿಳೆ ಗಮನ ಬೇರೆಡಿಗೆ ಸೆಳೆದು ಸುಮಾರು 01 ಲಕ್ಷದಷ್ಟು ಹಣವನ್ನು ಕಳ್ಳತನ ಮಾಡಿ ಪರಾರಿಯಾಗಲು ಯತ್ನಿಸಿದ್ದರು. ಈ ವೇಳೆ ಇಬ್ಬರನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ವಿಚಾರಣೆ ಮಾಡಿ ಆರೋಪಿತರಿಂದ ಕಳವು ಆಗಿದ್ದ ಸುಮಾರು 1.00.000 ರೂ ನಗದು ಹಣವನ್ನು ವಶಕ್ಕೆ ಪಡೆದಿದ್ದಾರೆ.
Read also : ಹರಿಹರ | ನಾಡಬಂದ್ ಷಾವಲಿ ದರ್ಗಾದ ಕಾಣಿಕೆ ಹುಂಡಿ ಹಣ ಕಳ್ಳತನ : ದೂರು ದಾಖಲು
ಎಎಸ್ಪಿ ಮಂಜುನಾಥ , ಚನ್ನಗಿರಿ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಸ್ಯಾಮ್ ವರ್ಗಿಸ್, ಸಂತೆಬೆನ್ನೂರು ವೃತ್ತ ನಿರೀಕ್ಷಕ ಲಿಂಗನಗೌಡ ನೆಗಳೂರು ಮಾರ್ಗದರ್ಶನದಲ್ಲಿ, ಸಂತೆಬೆನ್ನೂರು ಪೊಲೀಸ್ ಠಾಣೆಯ ಪಿ.ಎಸ್.ಐ, ಜಗದೀಶ್ ಜಿ, ರವರ ನೇತೃತ್ವದಲ್ಲಿ ಠಾಣೆಯ ಸಿಬ್ಬಂದಿ ಚನ್ನವೀರಪ್ಪ ಪಿ.ಎಸ್.ಐ ರವಿ ಟಿ ಎ.ಎಸ್.ಐ ವೀರಭದ್ರಪ್ಪ, ರುದ್ರಪ್ಪ ಶ್ರೀನಿವಾಸ ಮಂಜುನಾಥ, ಮಾರುತಿ, ರಾಘವೇಂದ,್ರ ಸಂತೋಷ್, ಸಂತೋಷ್ ಪಾಟೀಲ್, ಹಾಲೇಶ್ ಇವರನ್ನು ಎಸ್ಪಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.