ದಾವಣಗೆರೆ : ಸ್ವಚ್ಚ ಭಾರತ ಮಿಷನ್ -2.0 ಯೋಜನೆಯ ವಿವಿಧ ಘಟಕಗಳಾದ ಘನತ್ಯಾಜ್ಯ, ಪಾರಂಪರಿಕ ತ್ಯಾಜ್ಯ, ಸಿ&ಡಿ ತ್ಯಾಜ್ಯ ನಿರ್ವಹಣೆ, ಸ್ವಚ್ಚ -ಸರ್ವೇಕ್ಷಣ ನಗರವನ್ನು ಸ್ವಚ್ಚವಾಗಿಟ್ಟುಕೊಳ್ಳುವುದು, ಓಡಿಎಫ್, ಸ್ಟಾರ್ ರೇಟಿಂಗ್ ಮತ್ತು ಇತರೆ ವಿಷಯಗಳ ಕುರಿತು ಮನೆ ಮನೆಗೂ ಭೇಟಿ ನೀಡಿ ನೇರವಾಗಿ ಮಾತನಾಡುವುದರ ಮೂಲಕ ಐ.ಇ.ಸಿ ಚಟುವಟಿಕೆಗಳನ್ನು ನಿರ್ವಹಿಸಲು ಅರ್ಹ ಮಹಿಳಾ ಸ್ವ ಸಹಾಯ ಗುಂಪುಗಳಿಂದ 8 ಸದಸ್ಯರುಗಳನ್ನು ಮಾಸಿಕ ಗೌರವಧನ ಆಧಾರದ ಮೇಲೆ ತಾತ್ಕಾಲಿಕ ಸೇವೆ ಪಡೆದುಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಮಹಿಳಾ ಅಭ್ಯರ್ಥಿಗಳು ತಮ್ಮ ಎಲ್ಲ ಅಗತ್ಯ ದಾಖಲಾತಿಯೊಂದಿಗೆ ಜುಲೈ 22 ರ ಕಚೇರಿ ಅವಧಿಯೊಳಗಾಗಿ ನಿಗಧಿತ ಅರ್ಜಿ ನಮೂನೆಯನ್ನು ಕಚೇರಿಯಿಂದ ಪಡೆದು ಪೌರಾಯುಕ್ತರು ನಗರಸಭೆ, ಹರಿಹರ ವಿಳಾಸಕ್ಕೆ ದ್ವಿ ಪ್ರತಿಯಲ್ಲಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಆರೋಗ್ಯ ಶಾಖೆಯನ್ನು ಸಂಪರ್ಕಿಸಲು ನಗರಸಭೆ ಪೌರಯುಕ್ತರು ತಿಳಿಸಿದ್ದಾರೆ.
Read also :ನರೇಗಾ : ಸಕಾಲದಲ್ಲಿ ವೇತನವಿಲ್ಲದೇ ಬದುಕುವುದಾದರೂ ಹೇಗೆ? ಶಾಸಕ ಕೆ.ಎಸ್.ಬಸವಂತಪ್ಪ ಕೇಂದ್ರ ಸರ್ಕಾರಕ್ಕೆ ಪ್ರಶ್ನೆ