ದಾವಣಗೆರೆ : ಕಟ್ಟಡ ಕಾರ್ಮಿಕರ ಕಲ್ಯಾಣ ಅಭಿವೃದ್ಧಿ ಮಂಡಳಿಯಿಂದ ಕಾರ್ಮಿಕರಿಗೆ ನೀಡುವ ಸೌಲಭ್ಯಗಳ ವಿತರಣೆಯಲ್ಲಿ ವಿಳಂಬವಾಗುತ್ತಿದ್ದು, ಕಾರ್ಮಿಕ ಸಚಿವ ಸಂತೋಷ್ ಲಾಡ್ ಇದಕ್ಕೆ ತಕ್ಷಣ ಗಮನಹರಿಸಬೇಕೆಂದು ರಾಜ್ಯ ಕಟ್ಟಡ ಕಟ್ಟುವ, ಕ್ವಾರಿ ಒಡೆಯುವ ಮತ್ತು ಇತರೆ ಅಸಂಘಟಿತ ಕಾರ್ಮಿಕರ ಯೂನಿಯನ್ ಜಿಲ್ಲಾಧ್ಯಕ್ಷ ವಾಸು ಆವರಗೆರೆ ಒತ್ತಾಯಿಸಿದ್ದಾರೆ.
60 ವರ್ಷ ಮೇಲ್ಪಟ್ಟ ಕಾರ್ಮಿಕರಿಗೆ ಪಿಂಚಣಿ ಸಕಾಲದಲ್ಲಿ ತಲುಪುತ್ತಿಲ್ಲ ಮತ್ತು ಪ್ರಸ್ತುತ ರೂ. 3,000 ಪಿಂಚಣಿಯನ್ನು ರೂ.5,000ಕ್ಕೆ ಹೆಚ್ಚಿಸಬೇಕು. ಮದುವೆ ಸೌಲಭ್ಯವನ್ನು ರೂ.60,000 ರಿಂದ ರೂ.1 ಲಕ್ಷಕ್ಕೆ, ನೈಸರ್ಗಿಕ ಮರಣದ ಪರಿಹಾರವನ್ನು ರೂ.75,000 ರಿಂದ ರೂ.2 ಲಕ್ಷಕ್ಕೆ ಹೆಚ್ಚಿಸಬೇಕು. ವಿದ್ಯಾರ್ಥಿ ವೇತನ ಮತ್ತು ಆಸ್ಪತ್ರೆ ವೆಚ್ಚದ ಹಣವೂ ವಿಳಂಬವಾಗುತ್ತಿದೆ. ಈ ಸೌಲಭ್ಯಗಳಿಗೆ ಬಜೆಟ್‌ನಲ್ಲಿ ಹಣ ಮೀಸಲಿಡಬೇಕು.
ಕಟ್ಟಡ ಕಾರ್ಮಿಕರು ಎಲ್ಲರಿಗೂ ಮನೆಗಳನ್ನು ಕಟ್ಟಿಕೊಡುತ್ತಿದ್ದರೂ, ಅವರಿಗೆ ಮನೆ ಇಲ್ಲದಿರುವುದು ದುರಂತ. ಆದ್ದರಿಂದ, ಎಲ್ಲಾ ಜಿಲ್ಲೆಗಳಲ್ಲಿ ಸರ್ವೇ ನಡೆಸಿ, ಮನೆಯಿಲ್ಲದ ಕಾರ್ಮಿಕರಿಗೆ ಆಶ್ರಯ ಮನೆಗಳು ಅಥವಾ ಕ್ವಾರ್ಟರ್ಸ್ ಕಟ್ಟಿಸಬೇಕು. ಕಾರ್ಮಿಕರ ಕಲ್ಯಾಣಕ್ಕಾಗಿ ಈ ಸೌಲಭ್ಯಗಳನ್ನು ಹೆಚ್ಚಿಸಿ, ಇತಿಹಾಸ ನಿರ್ಮಿಸುವಂತೆ ಸಂತೋಷ್ ಲಾಡ್ ಅವರಲ್ಲಿ ಕೋರಿಕೊಂಡಿದ್ದಾರೆ.
Read also : ದಾವಣಗೆರೆ | ಕಾರ್ಮಿಕ ಸಚಿವ ಸಂತೋಷ ಲಾಡ್‍ಗೆ ಸನ್ಮಾನ