ದಾವಣಗೆರೆ : ಪ್ರತಿದಿನ ನಾಲ್ಕು ಗೋಡೆಗಳ ಮಧ್ಯೆ ಪಾಠ ಪ್ರವಚನದಲ್ಲಿ ಕಾಲಕಳೆಯುತ್ತಿದ್ದ ವಿದ್ಯಾರ್ಥಿಗಳು ಚಂದದ ದಿರಸು, ಪೇಟತೊಟ್ಟು ಸಾಂಸ್ಕøತಿಕಕಾರ್ಯಕ್ರಮದಲ್ಲಿ ಸಂಗೀತಕ್ಕೆತಕ್ಕಂತೆ ಹೆಜ್ಜೆ ಹಾಕುತ್ತಕುಣಿದು ಕುಪ್ಪಳಿ ಸಂತಸ ಪಡುತ್ತಿದ್ದ ದೃಶ್ಯಗಳು ವಿಶ್ವವಿದ್ಯಾನಿಲಯದಲ್ಲಿ ಕಂಡು ಬಂತು.
ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳ ಸ್ನೇಹಕೂಟ2024-25 ರಿಂದಏರ್ಪಡಿಸಲಾಗಿದ್ದ ಸಾಂಸ್ಕøತಿಕ ಸೌರಭಕಾರ್ಯಕ್ರಮ ನಡೆಸಲಾಯಿತು, ಕುಲಪತಿ ಪ್ರೊ.ಬಿ.ಡಿ.ಕುಂಬಾರ ಸರಸ್ವತಿ ದೇವಿಯ ಪ್ರತಿಮೆಗೆ ಪುಷ್ಪರ್ಚನೆ ಮಾಡುವ ಮೂಲಕ ಸಂಸ್ಕøತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮಕ್ಕೆ ಚಾಲನೆ ಸಿಗುತ್ತಿದ್ದಂತೆ ವಿದ್ಯಾರ್ಥಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಸಂಗೀತಕ್ಕಾಗಿಡಿಜಿ ವ್ಯವಸ್ಥೆ ಮಾಡಲಾಗಿತ್ತು. ಹಾಡಿಗೆತಕ್ಕಹಾಗೆ ವಿದ್ಯಾರ್ಥಿಗಳು ಹಾಗೂ ವಿಶ್ವವಿದ್ಯಾಲಯದಸಿಬ್ಬಂದಿ ಹೆಜ್ಜೆ ಹಾಕುತ್ತ ಆಡಳಿತ ಭವನದಿಂದಜ್ಞಾನ ಸೌಧಕಟ್ಟಡದವರೆಗೂ ಮೆರವಣಿಗೆ ಮೂಲಕ ಸಾಗಿದರು.
ಮಧ್ಯಾಹ್ನ ವೇದಿಕೆ ಕಾರ್ಯಕ್ರಮ ನಡೆಸಲಾಯಿತು. ನಂತರಎಲ್ಲಾ ವಿಭಾಗಗಳಿಂದ ಪ್ರತ್ಯೇಕ ನೃತ್ಯ, ಸಂಗೀತ, ಸಂಸ್ಕøತಿ ಕಾರ್ಯಕ್ರಮ ನಡೆಸಿಕೊಡಲಾಯಿತು. ನೃತ್ಯ, ಸಂಗೀತ ಇನ್ನಿತರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳಿಗೆ ಸಹಪಾಠಿಗಳು ಕರತಾಳನ ಮಾಡುವ ಮೂಲಕ ಪ್ರೋತ್ಸಾಹ ನೀಡಿದರು. ವಿಶ್ವವಿದ್ಯಾಲಯದ ಎಲ್ಲಾ ವಿಭಾಗದ ವಿದ್ಯಾರ್ಥಿಗಳು ಈ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಿದ್ದರು.
Read also : ದಾವಣಗೆರೆ | ಮೀನುಗಾರಿಕೆ ಫಲಾನುಭವಿ ಆಧಾರಿತ ಯೋಜನೆಗಳಿಗೆ ಅರ್ಜಿ ಆಹ್ವಾನ