ಮಗುವಿನ ಬಯೋಮೆಟ್ರಿಕ್ ಅಪ್‌ಡೇಟ್ ಅನ್ನು ಸಮಯಕ್ಕೆ ಸರಿಯಾಗಿ ಮಾಡದಿದ್ರೆ UIDAI ನಿಮ್ಮ ಮಗುವಿನ ಆಧಾರ್ ಕಾರ್ಡ್ ನಿಷ್ಕ್ರಿಯಗೊಳಿಸುವ ಅಧಿಕಾರ ಹೊಂದಿದೆ. ಅಪ್‌ಡೇಟ್ ಆಗಿರದ ಆಧಾರ್ ಇಲ್ಲದೆಯೇ, ಮಗುವಿಗೆ ಶಾಲಾ ಪ್ರವೇಶ, ಪರೀಕ್ಷಾ ನೋಂದಣಿ, ವಿದ್ಯಾರ್ಥಿವೇತನ, ಸಬ್ಸಿಡಿ ಅಥವಾ DBTನಂತಹ ಯಾವುದೇ ಸರ್ಕಾರಿ ಸೌಲಭ್ಯಗಳ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಹೀಗಾಗಿ ಪ್ರತಿಯೊಂದು ಸರ್ಕಾರಿ ಯೋಜನೆಗೆ ಮಾನ್ಯತೆ ಪಡೆಯಲು ಅಪ್‌ಡೇಟ್ ಆಗಿರುವ ಆಧಾರ್ ಕಾರ್ಡ್ ಅಗತ್ಯ ಎಂದು UIDAI ತಿಳಿಸಿದೆ.
ಅಸಲಿ & ನಕಲಿ ಆಧಾರ್ ಕಾರ್ಡ್.. ಪತ್ತೆ ಹಚ್ಚುವುದು ಹೇಗೆ?
ಅಸಲಿ & ನಕಲಿ ಆಧಾರ್ ಕಾರ್ಡ್‌ಗಳ ನಡುವೆ ವ್ಯತ್ಯಾಸವನ್ನು ಗುರುತಿಸಬಹುದು. UIDAI ವಿಶೇಷ ಸುರಕ್ಷಿತ ಕ್ಯೂಆರ್ ಕೋಡ್ ಅನ್ನು ಪರಿಚಯಿಸಿದೆ. ಇದರಲ್ಲಿ ಹೆಸರು, ಫೋಟೋ, ಜನ್ಮ ದಿನಾಂಕ & ಡಿಜಿಟಲ್ ಸಹಿಯಂತಹ ಮಾಹಿತಿ ಇರುತ್ತದೆ. ನೀವು ನಕಲಿ ಕಾರ್ಡ್ ಅನ್ನು ಸ್ಕ್ಯಾನ್ ಮಾಡಿದಾಗ, ‘QR ಕೋಡ್ ಅನ್ನು ಪರಿಶೀಲಿಸಲಾಗಿಲ್ಲ’ ಎಂದು ತೋರಿಸುತ್ತದೆ. ಇದಕ್ಕಾಗಿ, ನೀವು ‘ಆಧಾರ್ QR ಸ್ಕ್ಯಾನರ್’ ಅಥವಾ ‘mAadhaar’ ಅಪ್ಲಿಕೇಶನ್‌ನೊಂದಿಗೆ QR ಅನ್ನು ಸ್ಕ್ಯಾನ್ ಮೂಲಕ ತಮ್ಮ ಗುರುತನ್ನು ಪರಿಶೀಲಿಸಬಹುದು.
Read also : ಆಸಕ್ತಿ ಇರುವ ಕ್ಷೇತ್ರಗಳಲ್ಲಿ ಸಾಧನೆ ಮಾಡಿ : ದೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ