ದಾವಣಗೆರೆ : ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಾಳುಗಳು ಕ್ರೀಡಾ ಮನೋಭಾವದಿಂದ ಶಾಂತಿ ಮತ್ತು ಸೌಹಾರ್ದತೆಯಿಂದ ಪಂದ್ಯಗಳಲ್ಲಿ ಪಾಲ್ಗೊಳ್ಳಬೇಕು ಎಂದು ಸರ್ದಾರ್ ಸೇವಾಲಾಲ್ ಮಹಾಸ್ವಾಮೀಜೀ ಹೇಳಿದರು.
ನಗರದ ಟ್ರೆಡಿಷನಲ್ ಶೋಟಾಕಾನ್ ಕರಾಟೆ ಡು ಕರ್ನಾಟಕದ ವತಿಯಿಂದ ನಗರದ ಜಯದೇವ ಸರ್ಕಲ್‍ನಲ್ಲಿರುವ ಮುರುಘರಾಜೇಂದ್ರ ಮಠದಲ್ಲಿ ಪ್ರಥಮ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್‍ಶಿಪ್ -2025 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ಪರ್ಧಿಗಳಿಗೆ ಸೋಲು, ಗೆಲುವು ಮುಖ್ಯವಾಗಿರುವುದಿಲ್ಲ. ಕ್ರೀಡಾ ಮನೋಭಾವವೇ ಮುಖ್ಯವಾಗಿರಬೇಕು ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ನಾಗರಾಜ್ ಜಿ. ಸಾವಳಗಿ ಮಾತನಾಡಿ, ಆತ್ಮವಿಶ್ವಾಸ ಮತ್ತು ಭಾವನಾತ್ಮಕ ಸ್ಥಿರತೆಯನ್ನು ಹೆಚ್ಚಿಸಲು ಮಾನಸಿಕ ಹಾಗೂ ದೈಹಿಕ ಶಿಸ್ತನ್ನು ಕಾಪಾಡಲು ಕರಾಟೆ ಅತ್ಯಂತ ಹೆಚ್ಚು ಪರಿಣಾಮಕಾರಿಯಾಗಿದೆ. ರಾಷ್ಟ್ರಮಟ್ಟದಲ್ಲಿ ಕರಾಟೆ ಚಾಂಪಿಯನ್ ಶಿಪ್ ನಡೆಯುತ್ತಿರುವುದು ಅತ್ಯಂತ ಶ್ಲಾಘನೀಯ ಕಾರ್ಯವಾಗಿದೆ ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್ಎಚ್ ಅರುಣ ಕುಮಾರ್ ಮಾತನಾಡಿ, ಕರಾಟೆಯನ್ನು ವ್ಯಕ್ತಿಗಳು ತಮ್ಮ ಆತ್ಮ ರಕ್ಷಣೆಗಾಗಿ ಮತ್ತು ಸಂರಕ್ಷಣೆಗಾಗಿ ಇದನ್ನು ಅಭ್ಯಾಸ ಮಾಡಬೇಕಾಗಿದೆ ಎಂದು ಅಭಿಪ್ರಾಯಿಸಿದರು.
ಕರಾಟೆ ಪಂದ್ಯಾವಳಿಗಳನ್ನು ಆಯೋಜಿಸುವುದರ ಮೂಲಕ ಸಂಘಟಕರು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಇಂತಹ ಪಂದ್ಯಾವಳಿಗಳನ್ನು ಏರ್ಪಡಿಸುವುದರ ಮೂಲಕ ಕ್ರೀಡೆಗಳನ್ನು ಉಳಿಸಿ ಬೆಳೆಸಲು ಸಾಧ್ಯವಿದೆ ಎಂದರು.
ಆವರಗೆರೆಯ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಹೊಡೆಯುವ ಕ್ವಾರಿ ಕಾರ್ಮಿಕರ ಫೆಡರೇಷನ್ ರಾಜ್ಯ ಸಮಿತಿಯ ಅಧ್ಯಕ್ಷ ಹೆಚ್.ಜಿ. ಉಮೇಶ್ ಮಾತನಾಡಿದರು.
Read also : ದಾವಣಗೆರೆ|ಪ್ರಾಮಾಣಿಕ ಸೇವೆಯಿಂದ ಯಶಸ್ಸು: ಪ್ರೊ.ಸುಚಿತ್ರಾ
ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆಯನ್ನು ಏರ್ಪಡಿಸುವುದರ ಮೂಲಕ ಸಂಘಟಕರು ದಾವಣಗೆರೆ ನಗರಕ್ಕೆ ಹೆಸರನ್ನು ತಂದಿದ್ದಾರೆ. ಪಂದ್ಯಾವಳಿಗಳನ್ನು ಏರ್ಪಡಿಸುವುದರ ಹಿಂದೆ ಸಂಘಟಕರ ಅಪಾರ ಪರಿಶ್ರಮವಿದೆ. ಇಂತಹ ಕಾರ್ಯಕ್ರಮಗಳು ಮುಂದಿನ ದಿನಗಳಲ್ಲಿ ಸಹ ಸಂಘಟಿಸುವುದು ಅತ್ಯಂತ ಅವಶ್ಯಕವಾಗಿದೆ ಎಂದು ತಿಳಿಸಿದರು.
ಆಯೋಜಕರಾದ ಸೆನ್‍ಸಾಯಿ ಆವರಗೆರೆ ಅಣ್ಣಪ್ಪ, ಸೆನ್‍ಸಾಯಿ ನಾಗರಾಜ್ ನಾಯ್ಕ, ಕುಬೇರ್‍ನಾಯ್ಕ, ಹೆಚ್. ದುಗ್ಗಪ್ಪ, ಹೆಚ್. ಮಂಜುನಾಥ್, ಆವರಗೆರೆ ಮೋಹನ್, ಶಾಮಿಯಾನ ನಾಗರಾಜ್, ಹನುಮಂತಪ್ಪ, ಗಣೇಶ್ ಗದಗ, ಪುಟ್ಟಪ್ಪ, ಎಸ್. ಗಂಗಪ್ಪ, ಅಂಜಿನಪ್ಪ ಅಣಜಿ ಮುಂತಾದವರು ಭಾಗವಹಿಸಿದ್ದರು.