ದಾವಣಗೆರೆ : ನಕಲಿ ಬಂಗಾರ ನೀಡಿ, ಸುಲಿಗೆ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿರುವ ಹದಡಿ ಪೊಲೀಸರು ಬಂಧಿತರಿಂದ 5 ಲಕ್ಷ ನಗದು ವಶಕ್ಕೆ ಪಡೆದಿದ್ದಾರೆ.
ಚನ್ನಗಿರಿ ತಾಲೂಕಿನ ಚಿಕ್ಕಬಬ್ಬಿಗೆರೆ ಗ್ರಾಮದ ಮಂಜುನಾಥ ಬಂಧಿತ ಆರೋಪಿ
ತುಮಕೂರು ಜಿಲ್ಲೆಯ ಗೊರವನಹಳ್ಳಿಯ ಶ್ರೀ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಹೋಗಿದ್ದಾಗ ರಂಗನಾಥ ಎಂಬುವವರಿಗೆ ಸುರೇಶ ಹುಬ್ಬಳ್ಳಿ ವಾಸಿ ಎಂದು ಹೆಸರು ಹೇಳಿ ಓರ್ವ ವ್ಯಕ್ತಿ ಪರಿಚಯವಾಗಿದ್ದು, ನಮ್ಮ ಮನೆಯ ಪೌಂಡೇಶನ್ ತೆಗೆಯುವ ವೇಳೆ ಬಂಗಾರದ ನಾಣ್ಯಗಳು ಸಿಕ್ಕಿದ್ದು, ಒಂದು ಕೆಜಿ ಗೆ 20 ಲಕ್ಷಕ್ಕೆ ಕೊಡುವುದಾಗಿ ತಿಳಿಸಿ ರಂಗನಾಥ ಅವರ ಬಳಿ 05 ಲಕ್ಷಕ್ಕೆ 1/4 ಕೆ.ಜಿ ಕೊಡಲು ತಿಳಿಸಿ ಕುರ್ಕಿ ಗ್ರಾಮಕ್ಕೆ ಕರೆಸಿಕೊಂಡು ವಂಚನೆ ಮಾಡಿದ್ದಾನೆ ಎಂದು ಹದಡಿ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಎಎಸ್ಪಿ ಪರಮೇಶ್ವರ ಹೆಗಡೆ, ಜಿ ಮಂಜುನಾಥ, ದಾವಣಗೆರೆ ಗ್ರಾಮಾಂತರ ಉಪ ವಿಭಾಗದ ಡಿವೈಎಸ್ಪಿ ಬಸವರಾಜ್ ಬಿ.ಎಸ್ ಹಾಗೂ ಮಾಯಕೊಂಡ ವೃತ್ತ ಸಿಪಿಐ ರಾಘವೇಂದ್ರ ಕೆ ಎನ್ ಮಾರ್ಗದರ್ಶನದಲ್ಲಿ ಹದಡಿ ಪೊಲೀಸ್ ಠಾಣೆಯ ಪಿ ಎಸ್ ಐ ಶ್ರೀಶೈಲ ಪಟ್ಟಣ ಶೆಟ್ಟಿ ನೇತೃತ್ವದಲ್ಲಿ ಪಿ.ಎಸ್.ಐ ಶಕುಂತಲಾ ಹಾಗೂ ಸಿಬ್ಬಂದಿಗಳ ತಂಡ ಕಾರ್ಯಚರಣೆ ನಡೆಸಿ ಸುರೇಶ ಎಂದು ಹೇಳಿ ನಕಲಿ ಬಂಗಾರ ನೀಡಿ ವಂಚನೆ ಮಾಡಿದ್ದ ಆರೋಪಿ ಬಂಧಿಸಿ 5 ಲಕ್ಷ ವಶಕ್ಕೆ ಪಡೆದಿದ್ದಾರೆ.
ಆರೋಪಿ ಪತ್ತೆ ಮಾಡಿ ಸ್ವತ್ತನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಸಿಬ್ಬಂದಿಗಳಾದ ರವಿ , ಪ್ರಕಾಶ್, ಮಾರುತಿ, ಶ್ರೀನಿವಾಸ, ನೀಲಪ್ಪ, ಕರಿಬಸಪ್ಪ, ಮಂಜಪ್ಪ, ಸುರೇಶ, ಅಮೃತ್, ಅರುಣಕುಮಾರ, ಸಂತೋಷಕುಮಾರ, ಚನ್ನಬಸಪ್ಪ, ಲಕ್ಷ್ಮಿದೇವಿ, ಮೇಘ, ಹಾಗೂ ಅಶೋಕ, ಜಗದೀಶ ಅವರನ್ನು ಎಸ್ಪಿ ಉಮಾ ಪ್ರಶಾಂತ್ ಪ್ರಶಂಸ ವ್ಯಕ್ತಪಡಿಸಿದ್ದಾರೆ.