ದಾವಣಗೆರೆ ಆ.08: ದಾವಣಗೆರೆ ನಗರ ಉಪವಿಭಾಗ -2 ವ್ಯಾಪ್ತಿಯ 33/11 ಕೆವಿ ಯರಗುಂಟ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಫ್-15 ಕಮರ್ಷಿಯಲ್ ಫೀಡರ್ ಮಾರ್ಗದ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ನಿರ್ವಹಿಸಬೇಕಾಗಿರುವುದರಿಂದ ಆಗಸ್ಟ್ 9 ರ ಶನಿವಾರದಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
Read also : ಒಳಮೀಸಲಾತಿ ಜಾರಿಗೆ ವಿಳಂಬ : ಸಿಎಂ ವಿರುದ್ದ ಅ.15 ರಂದು ಕಪ್ಪುಬಟ್ಟೆ ಪ್ರದರ್ಶನ
ವಿದ್ಯುತ್ ಅಡಚಣೆಯಾಗುವ ಮಾರ್ಗಗಳು: ಹೊಸ ಮಸೀದಿ ಗಲ್ಲಿ, ಕುರುಬರ ಕೇರಿ, ಹಳೇಬೇತೂರು ರಸ್ತೆ, ಬಸವರಾಜ ಪೇಟೆ, ಮಹಾರಾಜ ಪೇಟೆ, ಚೌಕಿಪೇಟೆ, ದೇವಾಂಗ ಪೇಟೆ, ಎಸ್.ಕೆ.ಪಿ ರಸ್ತೆ, ವಕ್ಕಲಿಗರ ಪೇಟೆ, ವಿಜಯಲಕ್ಷ್ಮಿ ರಸ್ತೆ, ವಸಂತ ರಸ್ತೆ, ಆಜಾದ್ ನಗರ, ಬುದ್ದಬಸವ ನಗರ, ಬೆಳ್ಳೂಡಿ ಗಲ್ಲಿ, ಕಾಯಿಪೇಟೆ, ಕಾಳಿಕಾದೇವಿ ರಸ್ತೆ, ದೊಡ್ಡಪೇಟೆ, ಹಳೇಪೇಟೆ, ಹಾಗೂ ಇತರೆ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ದಾವಣಗೆರೆ ಉಪವಿಭಾಗ 2ರ ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.