ದಾವಣಗೆರೆ : ದಾವಣಗೆರೆ ನಗರ ಉಪವಿಭಾಗ-2 ರ ವ್ಯಾಪ್ತಿಯ 66/11 ಕೆವಿ ಯರಗುಂಟ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರುಡುವ ಎಫ್-18 ದುಗಾರ್ಂಬಿಕ ಫೀಡರ್ ಹಾಗೂ ಎಫ್-8 ವಿಜಯನಗರ ಫೀಡರ್ ಮಾರ್ಗದ ವ್ಯಾಪಿಯಲ್ಲಿ ತುರ್ತು ಕಾಮಗಾರಿಯನ್ನು ನಿರ್ವಹಿಸಬೇಕಾಗಿರುವುದರಿಂದ ಆಗಸ್ಟ್ 13 ರಂದು ಬೆಳಿಗ್ಗೆ 10 ರಿಂದ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಎಫ್-18 ದುಗಾರ್ಂಬಿಕ ಫೀಡರ್ ವ್ಯಾಪ್ತಿಯ ಜಾಲಿನಗರ, ಎಂ.ಬಿ.ಕೇರಿ, ಬಾರ್‍ಲೈನ್ ರಸ್ತೆ, ಕಾಯಿಪೇಟೆ, ವಸಂತ ಟಾಕೀಸ್ ರಸ್ತೆ, ಛಲವಾದಿ ಕೇರಿ, ತಳವಾರ ಕೇರಿ, ಚಂದ್ರಮೌಳೇಶ್ವರ ರಸ್ತೆ, ಇ.ಡಬ್ಲ್ಲೂಎಸ್ ಕಾಲೋನಿ, ಹೊಂಡದ ಸರ್ಕಲ್ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
Read also : ದಾವಣಗೆರೆ|ಆ.23 ರಂದು ವಿಕಲಚೇತನರಿಗೆ ಉದ್ಯೋಗ ಮೇಳ
ಎಫ್-8 ವಿಜಯನಗರ ಫೀಡರ್ ವ್ಯಾಪ್ತಿಯ ದೇವರಾಜ್ ಅರಸ್ ಬಡಾವಣೆ, ಸಿ.ಬ್ಲಾಕ್ ಮತ್ತು ಬಿ.ಬ್ಲಾಕ್, ಸ್ವಿಮ್ಮಿಂಗ್ ಪೂಲ್ ಏರಿಯಾ, ಪೆÇೀಸ್ಟ್ ಆಫೀಸ್ ಕ್ವಾಟರ್ಸ್, ವಿಜಯನಗರ ಬಡಾವಣೆ, ಶಿಬಾರ್ ರಸ್ತೆ, ಆರ್.ಟಿ ಓ ಕಚೇರಿ, ಎಸ್.ಪಿ ಕಚೇರಿ, ರಾಜೀವ್ ಗಾಂಧಿ ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.