ದಾವಣಗೆರೆ,ಆ.14 : ಅಂಚೆ ಇಲಾಖೆಯು ಶಾಲಾ ಮಕ್ಕಳಲ್ಲಿ ಅಂಚೆ ಚೀಟಿ ಸಂಗ್ರಹಣಾ ಕರೆಯನ್ನು ಉತ್ತೇಜಿಸಲು ದೀನ್ ದಯಾಳ್ ಸ್ಪರ್ಶ ಯೋಜನೆಯಡಿಯಲ್ಲಿ ವಿದ್ಯಾರ್ಥಿವೇತನಕ್ಕಾಗಿ 6 ನೇ ತರಗತಿಯಿಂದ 9 ನೇ ತರಗತಿವರೆಗೆ ಓದುತ್ತಿರುವ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
SPARSH (ಸ್ಪರ್ಶ) ಯೋಜನೆಯು ಅಂಚೆ ಚೀಟಿಗಳನ್ನು ಸಂಗ್ರಹಿಸುವ ಸಾಮಥ್ರ್ಯ ಮತ್ತು ಸಂಶೋಧನೆಯನ್ನು ಉತ್ತೇಜಿಸಲು ನೀಡುವ ವಿದ್ಯಾರ್ಥಿವೇತನ ಶೈಕ್ಷಣಿಕ ಪಠ್ಯಕ್ರಮವನ್ನು ಬಲಪಡಿಸುವ ಮತ್ತು ಪೂರಕವಾಗುವಂತೆ ಚಿಕ್ಕವಯಸ್ಸಿನ ಮಕ್ಕಳಲ್ಲಿ ಅಂಚೆಚೀಟಿ ಸಂಗ್ರಹವನ್ನು ಸುಸ್ಥಿರ ರೀತಿಯಲ್ಲಿ ಉತ್ತೇಜಿಸುವುದೇ ಈ ವಿದ್ಯಾರ್ಥಿವೇತನದ ಉದ್ದೇಶವಾಗಿದೆ.
ಈ ಹವ್ಯಾಸವು ಅವರಿಗೆ ಜ್ಞಾನಾರ್ಜನೆ ವಿಶ್ರಾಂತಿ ಮತ್ತು ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ. 2025-26 ಶೈಕ್ಷಣಿಕ ವರ್ಷದಲ್ಲಿ 60% ಅಂಕಗಳನ್ನು ಹೊಂದಿರುವ ಮತ್ತು ಅಂಚೆಚೀಟಿ ಸಂಗ್ರಹಣಾ ಠೇವಣಿ ಖಾತೆಯನ್ನು ಹೊಂದಿರುವ ಕ್ಲಬ್ ಅಂಚೆಚೀಟಿ ಸಂಗ್ರಹಣಾ ಸದಸ್ಯತ್ವ ಹೊಂದಿರುವ ಮತ್ತು ಅಂಚೆಚೀಟಿ ಸಂಗ್ರಹವನ್ನು ಹವ್ಯಾಸವಾಗಿ ಅನುಸರಿಸುವ 6 ರಿಂದ 9 ನೇ ತರಗತಿಯ ವಿದ್ಯಾರ್ಥಿಗಳಿಗೆ ವಾರ್ಷಿಕವಾಗಿ ರೂ 6000/ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ.
Read also : ಕುರುಬ ಸಮಾಜ, ಸಿಎಂ ಸಿದ್ದರಾಮಯ್ಯ ಅವಹೇಳನ : ಆರೋಪಿಗಳ ಬಂಧನಕ್ಕೆ ಎಸ್.ಟಿ.ಅರವಿಂದ್ ಆಗ್ರಹ
ಮೊದಲ ಹಂತದಲ್ಲಿ ಅಂಚೆಚೀಟಿ ಸಂಗ್ರಹಣಾ ರಸಪ್ರಶ್ನೆ ಸ್ಪರ್ಧೆಯ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಮುಂದಿನ ಹಂತದಲ್ಲಿ ಅಂಚೆ ಇಲಾಖೆ ನೀಡುವ ಅಂಚೆ ಚೀಟಿ ಸಂಗ್ರಹಣಾ ಯೋಜನೆಯಲ್ಲಿ ಸ್ಪರ್ಧಿಸಿ ಯಶಸ್ವಿಯಾದ ವಿದ್ಯಾರ್ಥಿಗಳನ್ನು SPARSH (ಸ್ಪರ್ಶ) ಯೋಜನೆಯ ವಿಧ್ಯಾರ್ಥಿವೇತನಕ್ಕಾಗಿ ಆಯ್ಕೆ ಮಾಡಲಾಗುತ್ತದೆ.