Bhadra dam water level today : ಮಲೆನಾಡಿನ ಭಾಗದಲ್ಲಿ ಧಾರಾಕಾರ ಮಳೆಯಿಂದ ಬಯಲು ಸೀಮೆಯ ಜನರ ಜೀವನಾಡಿಯಾದ ಭದ್ರಾಜಲಾಶಯ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ತುಂಗಾ ಮತ್ತು ಭದ್ರಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ತುಂಗಾ ಭದ್ರಾ ನದಿಯಿಂದ 70 ಸಾವಿರ ಕ್ಯುಸೆಕ್ ನೀರು ಹರಿ ಬಿಡಲಾಗಿದೆ.
Read also : ಸಂಚಾರ ನಿಯಮ ಉಲ್ಲಂಘನೆ : ಶಾಲಾ ಬಸ್, ಆಟೋಗಳಿಗೆ ದಂಡ
ಇದರಿಂದ ನದಿ ಪಾತ್ರದ ಗ್ರಾಮಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಹರಿಹರದ ಉಕ್ಕಡಗಾತ್ರಿ ಸಂರ್ಪಕಿಸುವ ಸೇತುವೆ ಮುಳುಗಡೆಯಾಗಿದೆ. ಹೊನ್ನಾಳ್ಳಿ ನದಿ ಪಾತ್ರದಲ್ಲಿ 8 ಕುಟುಂಬಗಳನ್ನು ಗಂಜಿ ಕೇಂದ್ರಗಳಿಗೆ ಸ್ಥಳಾಂತರ ಮಾಡಲಾಗಿದೆ.
ಆ.19.2025 ರಂದು 34742 ಕ್ಯೂಸೆಕ್ ನೀರಿನ ಹರಿವು ಇದ್ದು. ಭದ್ರಾ ಜಲಾಶಯದಿಂದ ಸದ್ಯ 38342 ನೀರು ಬಿಡಲಾಗುತ್ತಿದೆ. ಜಲಾಯಶದ ಇಂದಿನ ಮಟ್ಟ 184.6 ಇದ್ದು, ಜಲಾಯಶದ ಸಾಮರ್ಥ್ಯ 186 ಅಡಿಯಿದೆ. ತುಂಬಲು 1.4ಅಡಿ ಬಾಕಿಯಿದೆ. ಹಿಂದಿನ ವರ್ಷ ಇದೇ ದಿನಕ್ಕೆ 180.1 ಅಡಿಯಿದೆ.
ಭದ್ರಾ ಜಲಾಯಶದ ನೀರಿನ ಮಟ್ಟ
- ಒಳ ಹರಿವು : 34742 ಕ್ಯುಸೆಕ್
- ಹೊರ ಹರಿವು : 38342 ಕ್ಯುಸೆಕ್
- ಇಂದಿನ ಮಟ್ಟ : 184.6