ಹರಿಹರ: ಪ್ರವಾದಿ ಮುಹಮ್ಮದ್‌ರವರ ಸರ್ವಕಾಲಿಕ ಬೋಧನೆಗಳನ್ನು ಪ್ರಚುರಪಡಿಸಲು ಜಮಾ ಅತೆ ಇಸ್ಲಾಮಿ ಹಿಂದ್ ಮತ್ತು ರಾಬಿತಾ-ಎ-ಮಿಲ್ಲತ್ ವತಿಯಿಂದ ತಾಲ್ಲೂಕಿನಲ್ಲಿ ಸೆ.3 ರಿಂದ 14ರ ವರೆಗೆ ‘ನ್ಯಾಯದ ಹರಿಕಾರ ಪ್ರವಾದಿ ಮುಹಮ್ಮದ್’ ಶೀರ್ಷಿಕೆಯಡಿ ಸೀರತ್ ಅಭಿಯಾನ-2025 ಹಮ್ಮಿಕೊಳ್ಳಲಾಗಿದೆ ಎಂದು ಅಭಿಯಾನದ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಮಾನ್ ಇಖ್ರಾ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರವಾದಿ ಮುಹಮ್ಮದ್ (ಸ)ರ ನ್ಯಾಯ ಮತ್ತು ಮಾನವೀಯತೆಯ ಸಂದೇಶಗಳನ್ನು ನಾಡಿನ ಜನತೆಗೆ ತಲುಪಿಸುವುದು ಮತ್ತು ಪ್ರವಾದಿಯವರ ಬಗೆಗಿನ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವುದು ಹಾಗೂ ವಿವಿಧ ಧರ್ಮೀಯರ ನಡುವಿನ ಪರಸ್ಪರ ಸಂಬAಧಗಳನ್ನು ಬಲಪಡಿಸುವುದು ಈ ಅಭಿಯಾನದ ಉದ್ದೇಶವಾಗಿದೆ ಎಂದರು.
ಸೆ.3 ರಂದು ಬೆಳಿಗ್ಗೆ 11ಕ್ಕೆ ಗುತ್ತೂರು ಕಾಲೋನಿಯ ವ್ರದ್ಧಾಶ್ರಮದಲ್ಲಿ ನಿವಾಸಿಗಳಿಗೆ ಹಾಗೂ ಸೆ.4ಕ್ಕೆ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು, ಹಂಪಲು ವಿತರಣೆ, ಸೆ.5ಕ್ಕೆ ಪ್ರಶಾಂತ್ ನಗರದ ಅಲಿ ಮಸೀದಿಯಲ್ಲಿ ಮೌಲಾನಾ ಸಾಜೀದ್ ಉಮ್ರಿ ಇವರಿಂದ ಶುಕ್ರವಾರದ ವಿಶೇಷ ಪ್ರವಚನ ಹಾಗೂ ನಗರದ ಶಿವಮೊಗ್ಗ ರಸ್ತೆಯಲ್ಲಿ ಸ್ವಚ್ಚತಾ ಕಾರ್ಯ, ಕರಪತ್ರ ವಿತರಣೆ ನಡೆಯಲಿದೆ. ಸೆ.6ರಿಂದ 11ರವರೆಗೆ ಹರಿಹರ ಹಾಗೂ ಸುತ್ತಲಿನ ವಿವಿಧ ಧರ್ಮಗಳ ಮಠ, ಚರ್ಚ್, ಮಸೀದಿಗಳ ಧಾರ್ಮಿಕ ಗುರುಗಳನ್ನು ಭೇಟಿ ಮಾಡಿ ಪ್ರವಾದಿ ಮುಹಮ್ಮದ್‌ರವರ ಜೀವನ ಗಾಥೆಯ ಪುಸ್ತಕ ನೀಡಲಾಗುವುದು.
ಸೆ.12 ರಂದು ಸಂಜೆ 7 ರಿಂದ 9ರವರೆಗೆ ನಗರದ ಪ್ರಶಾಂತ್ ನಗರದ ಪ್ಯಾರಡೈಸ್ ಕಲ್ಯಾಣ ಮಂಟಪದಲ್ಲಿ ಪ್ರವಾದಿ ಮುಹಮ್ಮದ್‌ರವರ ಜೀವನಗಾಥೆಯ ಕುರಿತು ಜಮಾಅತೆ ಇಸ್ಲಾಮಿ ಹಿಂದ್ ಸಂಸ್ಥೆಯ ರಾಜ್ಯ ಕಾರ್ಯದರ್ಶಿ ಮೌಲಾನಾ ಅಬ್ದುಲ್‌ಗಫಾರ್ ಹಾಮೀದ್ ಉಮ್ರಿ ಹಾಗೂ ವಿವಿಧ ಧಾರ್ಮಿಕ ಗುರುಗಳಿಂದ ವಿಶೇಷ ಪ್ರವಚನ ಕಾರ್ಯಕ್ರಮ ನಡೆಯಲಿದೆ.
Read also : ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕಾರ್ಯಕ್ರಮ : ಬೀದಿನಾಟಕ ಕಲಾ ತಂಡಗಳಿಗೆ ಅರ್ಜಿ ಆಹ್ವಾನ
ಸೆ.20 ರಂದು ತಾಲ್ಲೂಕಿನ ಎಕ್ಕೆಗೊಂದಿ ಹಾಗೂ ಭಾನುವಳ್ಳಿ ಗ್ರಾಮದಲ್ಲಿ ಜಮಾಅತೆ ಇಸ್ಲಾಮಿ ಹಿಂದ್‌ನ ರಾಜ್ಯ ಕಾರ್ಯದರ್ಶಿ ಅಕ್ಬರ್ ಅಲಿ ಉಡುಪಿ ಇವರಿಂದ ಗ್ರಾಮಸ್ಥರೊಂದಿಗೆ ಸೌಹಾರ್ದ ಭೇಟಿ ಕಾರ್ಯಕ್ರಮ ನಡೆಯಲಿದೆ. ಸೆ.21 ಸಂಜೆ 5ಕ್ಕೆ ನಗರದ ರಚನಾ ಕ್ರೀಡಾಕ್ಲಬ್ ಸಭಾಂಗಣದಲ್ಲಿ ನ್ಯಾಯದಹರಿಕಾರ ಪ್ರವಾದಿ ಮುಹಮ್ಮದ್‌ರವರು ಈ ವಿಷಯ ಕುರಿತು ಸರ್ವಧರ್ಮೀಯರಿಗಾಗಿ ಪ್ರವಚನ ಕಾರ್ಯಕ್ರಮ ನಡೆಯಲಿದೆ. ಜಮಾಅತೆ ಇಸ್ಲಾಮಿ ಹಿಂದ್‌ನ ರಾಜ್ಯ ಕಾರ್ಯದರ್ಶಿ ಜನಾಬ್ ಅಕ್ಬರ್ ಅಲಿ ಉಡುಪಿ ಇವರು ಪ್ರವಚನ ನೀಡುವರು.
ಪತ್ರಿಕಾಗೋಷ್ಠಿಯಲ್ಲಿ ಸ್ವಾಗತ ಸಮಿತಿಯ ಡಾ.ಗುಲಾಮ್ ನಬಿ ಸಾಬ್, ಸೈಯದ್ ಮುನೀರ್ ಅಹ್ಮದ್, ನಗರಸಭಾ ಸದಸ್ಯ ಕೆ.ಬಿ.ರಾಜಶೇಖರ್, ನಗರಸಭೆ ಮಾಜಿ ಸದಸ್ಯ ಎಂ.ಬಿ.ಅಣ್ಣಪ್ಪ, ವೈ.ಜಿ.ಅಬ್ದುಲ್ ಖಯೂಮ್, ಇಕ್ಬಾಲ್ ಸಾಬ್ ಮಕಾಂದಾರ್, ಹಿರಿಯ ಕ್ರೀಡಾಪಟು ಎಚ್.ನಿಜಗುಣ, ಎಕ್ಕೆಗೊಂದಿ ಎಚ್.ಬಿ.ರುದ್ರಗೌಡ್ರು, ಅಂಜುಮನ್-ಎ-ಇಸ್ಲಾಮಿಯ ಸಂಸ್ಥೆ ಅಧ್ಯಕ್ಷ ಆರ್.ಸಿ.ಜಾವೀದ್, ಮೊಹಮ್ಮದ್ ಫಾರೂಖ್ ಎಂ.ಎA.ಬಿ., ಹಳ್ಳಳ್ಳಿ ಶಬ್ಬೀರ್‌ಖಾನ್, ಮನ್ಸೂರ್ ಭಾನುವಳ್ಳಿ, ಆಶ್ಫಾಖ್ ಉಲ್ಲಾ, ಶಫಿಸಾಬ್ ಮಹೇಶ್ ಟ್ರಾವೆಲ್ಸ್ ಇದ್ದರು.