ದಾವಣಗೆರೆ : ಪರವಾನಿಗೆ ಪಡೆಯದೆ ಸ್ಕಿನ್ ಮತ್ತು ಹೇರ್ ಕೇರ್ ಚಿಕಿತ್ಸೆ ಕೇಂದ್ರಗಳನ್ನು ನಡೆಸುತ್ತಿದ್ದ ಕೇಂದ್ರಗಳ ಮೇಲೆ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳು ದಿಢೀರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಒಟ್ಟು 15 ಕೇಂದ್ರಗಳಲ್ಲಿ ಮೇಲೆ ದಾಳಿ ನಡೆಸಿದ್ದು, ಅದರಲ್ಲಿ 4 ಕೇಂದ್ರಗಳು ಸ್ವಯಂ ಪ್ರೇರಿತವಾಗಿ ಬಂದ್ ಆಗಿವೆ. 6 ಕೇಂದ್ರಗಳು ಕೆಪಿಎಂಇ ಪರವಾನಿಗೆ ಪಡೆದಿವೆ. ವಿಕೇರ್, ಹೇರ್ ಓ ಕ್ರಾಫ್ಟ್, ಕಾಸ್‌ಡ್ರಾಮ್ ಹೇರ್ ಸ್ಕಿನ್ ವೆಲ್‌ನೆಸ್ ಸೆಂಟರ್, ಕೋಸ್ಮ್ ಎಸ್ಮಿಟಿಕ್ ಹೇರ್ ಅಂಡ್ ಸ್ಕಿನ್ ಸೆಂಟರ್ ಈ 4 ಕೇಂದ್ರಗಳಿಗೆ ನೋಟಿಸ್ ನೀಡಲಾಗಿದೆ. ಚಿಕಿತ್ಸೆ ನೀಡದಂತೆ ಸೂಚಿಸಲಾಗಿದೆ ಎಂದು ಡಿಹೆಚ್‌ಓ ಡಾ. ಎಸ್ ಷಣ್ಮುಖಪ್ಪ ತಿಳಿಸಿದರು.
ಅನುಮತಿ ಇಲ್ಲದೆ ಹೇರ್ ಮತ್ತು ಸ್ಕಿನ್ ಕೇರ್ ನಡೆಸುತ್ತಿರುವವ ವಿರುದ್ದ ಕ್ರಮ ಕೈಗೊಳ್ಳುವಂತೆ ಜಿಲ್ಲೆಯ ಚರ್ಮ ರೋಗ ತಜ್ಞರ ತಂಡ ಜಿಲ್ಲಾಧಿಕಾರಿ ಡಾ ಗಂಗಾಧರ್ ಸ್ವಾಮಿ ಅವರಿಗೆ ಮನವಿ ಮಾಡಿದ್ದರು. ಈ ಹಿನ್ನಲೆಯಲ್ಲಿ ಅಧಿಕಾರಿಗಳು ಹೇರ್ ಅಂಡ್ ಸ್ಕಿನ್ ಕ್ಲಿನಿಕ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಟಿ ಹೆಚ್ ಓ ದೇವರಾಜ್ ಮಾತನಾಡಿ, ಕೂದಲು ಕಸಿ ಮಾಡುವ ಕ್ಲಿನಿಕ್‌ಗಳ ಮೇಲೆ ದಾಳಿ ಮಾಡಿದ್ದೇವೆ. ಕೂದಲು ಕಸಿ ಮಾಡುವ ಕ್ಲಿನಿಕ್ ಅಲ್ಲಿ ಚರ್ಮ ರೋಗ ತಜ್ಞರು ಇರಬೇಕು, ಪ್ಲಾಸ್ಟಿಕ್ ಸರ್ಜನ್ ಇರಬೇಕು, ಅಲ್ಲದೆ ಪರವಾನಿಗೆ ಪಡೆದಿರಬೇಕು, ಅದರೆ, ಪರವಾನಿಗೆ ಇಲ್ಲದೆ ಇರುವುದರಿಂದ ನೋಟಿಸ್ ಕೊಟ್ಟಿದ್ದೇವೆ ಎಂದರು.
Read also : ಸೆ. 08, 09 ರಂದು ಆಧುನಿಕ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ
ಆಸ್ಪತ್ರೆಗಳಲ್ಲಿ ಪರವನಾಗಿ ಇಲ್ಲದೆ ಇರುವುದು, ವೈದ್ಯರೇ ಇಲ್ಲದೆ ಚಿಕಿತ್ಸೆ ನೀಡುತ್ತಿರುವುದು, ಅವಧಿ ಮೀರಿದ ಔಷಧಿಗಳು ಇರುವುದು ಕಂಡು ಅಧಿಕಾರಿಗಳು ತಾತ್ಕಾಲಿಕವಾಗಿ ಮುಚ್ಚುವಂತೆ ಸೂಚನೆ ನೀಡಿದರು.
ಈ ವೇಳೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್, ಆರ್‌ಸಿಎಚ್ ರೇಣುಕಾರಾಧ್ಯ, ಹರಿಹರ ಟಿಎಚ್‌ಓ ಡಾ.ಅಬ್ದುಲ್ ಖಾದರ ಸೇರಿದಂತೆ ಇತರೆ ಅಧಿಕಾರಿಗಳ ತಂಡ ಭೇಟಿ ನೀಡಿತ್ತು.