ದಾವಣಗೆರೆ: ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿ-ಶಿಕ್ಷಕರ ಕಾರ್ಯಕ್ಷಮತೆ ಶಿವ ಸ್ವರೂಪಿಯಾಗಿ, ಕ್ಷಕಿರಣದೋಪಾದಿಯಲ್ಲಿ ಯಾರು ಕರ್ಮ ಅಥವಾ ಕಾಯಕವನ್ನು ಮಾಡುವರೋ ಅವರೇ ಶಿಕ್ಷಕರು ಎಂದು ವಿಶ್ರಾಂತ ಉಪನ್ಯಾಸಕರಾದ ಸುಮತಿ ಜಯಪ್ಪ ಸಲಹೆ ನೀಡಿದರು.
ನಗರದ ಪಿ.ಜೆ.ಬಡಾವಣೆಯಲ್ಲಿರುವ ಈಶ್ವರಮ್ಮ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿಕ್ಷಕ ಎಂದರೆ ‘ಶಿಸ್ತು ಕ್ಷಮಾಗುಣ, ಕರುಣೆ ಹೊಂದಿರುವವರು, ಅಜ್ಞಾನದ ಕತ್ತಲೆಯನ್ನು ಓಡಿಸಿ, ಸುಜ್ಞಾನದ ಬೆಳಕನ್ನು ನೀಡುವವರು ಗುರುಗಳಾಗಿದ್ದಾರೆ ಎಂದರು.
ಇAಜಿನಿಯರ್ ಕಬ್ಬಿಣ, ಸಿಮೆಂಟ್ ನೋಡಿದರೆ, ಲಾಯರ್ ಅಪರಾಧಿಗಳನ್ನು ನೋಡುತ್ತಾರೆ. ಆದರೆ ಶಿಕ್ಷಕರು ಮುದ್ದು ಮಕ್ಕಳನ್ನು ನೋಡುತ್ತಾರೆ. ಮುಗ್ಧ ಮನಸ್ಸಿನ ಮಕ್ಕಳ ಜೊತೆಗಿದ್ದು ಅವರನ್ನು ಸನ್ಮಾರ್ಗದಲ್ಲಿ ಮುನ್ನಡೆಸುವ ಶ್ರೇಷ್ಠವಾದ, ಪವಿತ್ರವಾದ ವೃತ್ತಿ ಶಿಕ್ಷಕ ವೃತ್ತಿಯಾಗಿದೆ ಎಂದು ತಿಳಿಸಿದರು.
ಡಾ.ರಾಧಾಕೃಷ್ಣನ್‌ರವರು ಶ್ರೇಷ್ಠ ಶಿಕ್ಷಕರಾಗಿದ್ದು, ಭಾರತದ ಉನ್ನತ ಸ್ಥಾನವಾದ ರಾಷ್ಟçಪತಿ ಹುದ್ದೆಗೇರಿದವರು. ಅಂತಹ ಮಹಾನ್ ವ್ಯಕ್ತಿಯ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತಿದೆ. ಮಕ್ಕಳು ಬೆಳೆದು ಯಾವುದೇ ಹುದ್ದೆಯಲ್ಲಿದ್ದರೂ ವಿದ್ಯೆ ಕಲಿಸಿದ ಶಿಕ್ಷಕರನ್ನು ಎಂದೂ ಮರೆಯಬಾರದು ಎಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು.
ಶಿಕ್ಷಕರು ಹೇಳಿದ ಮಾತು ಮಂತ್ರವಾಗಬೇಕು. ಶಿಕ್ಷಕರು ಸಹ ಮಕ್ಕಳಿಗಾಗಿ ತಮ್ಮ ತನು, ಮನ, ಜ್ಞಾನವನ್ನು ಅರ್ಪಿಸಬೇಕು. ಶಿಕ್ಷಕರು ತಮ್ಮ ವೃತ್ತಿಯನ್ನು ತಾವು ಬೋಧಿಸುವ ವಿಷಯವನ್ನು ಮತ್ತು ತಮ್ಮ ಮುಂದಿರುವ ಮಕ್ಕಳನ್ನು ಪ್ರೀತಿಸಬೇಕು. ಗುರು-ಶಿಷ್ಯರ ಬಾಂಧವ್ಯ ಮಧುರವಾದುದು. ಶಿಕ್ಷಕರು ಬದಲಾದ ಕಾಲಘಟ್ಟಕ್ಕನುಗುಣವಾಗಿ ತಮ್ಮಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಶಿಕ್ಷಕರು ಸದಾ ವಿದ್ಯಾರ್ಥಿಯಂತೆ ಅಧ್ಯಯನ ಶೀಲರಾಗಿರಬೇಕೆಂದರು.

ಎA.ಬಿ ಪದವಿ ಪೂರ್ವ ಕಾಲೇಜಿನ ನಿರ್ದೇಶಕ ಜಿ.ಎಚ್.ಕುಮಾರ್ ಮಾತನಾಡಿ, ಶಿಕ್ಷಣವೇ ಆಸ್ತಿ ಎಂಬುದನ್ನು ಬಾಲ್ಯಾವಸ್ಥೆಯಲ್ಲೇ ಕಂಡು ಕೊಳ್ಳಬೇಕು. ಗುರುಗಳು ಹೇಳಿದ ಮಾತನ್ನು ಚಾಚೂ ತಪ್ಪದೇ ಅನುಸರಿಸುತ್ತಾ ಬಂದು ವಿವಿಧ ವೃತ್ತಿಗಳಲ್ಲಿ ತೊಡಗಿದವರು ಯಶಸ್ವಿ ವ್ಯಕ್ತಿಗಳಾಗುತ್ತಾರೆ ಎಂದು ಸಲಹೆ ನೀಡಿದರು.
ಶಾಲಾಡಳಿತ ಮಂಡಳಿಯ ಅಧ್ಯಕ್ಷರಾದ ಕೆ.ಆರ್.ಸುಜಾತ ಕೃಷ್ಣ ಮಾತನಾಡಿ, ಶಿಕ್ಷಕರ ದಿನಾಚರಣೆ ಬಹಳಷ್ಟು ಅರ್ಥಪೂರ್ಣವಾಗಿ ನಡೆದಿದೆ. ಈಶ್ವರಮ್ಮ ಶಾಲೆಯ ವೈಶಿಷ್ಟ್ಯವೆಂದರೆ ಮೌಲ್ಯಧಾರಿತ ಶಿಕ್ಷಣ. ಶಾಲೆಯ ಸಂಸ್ಥಾಪಕರಾದ ಬಿ.ಆರ್. ಶಾಂತಕುಮಾರಿಯವರ ಮಾರ್ಗದರ್ಶನದಂತೆ ಶಾಲೆ ಮುನ್ನೆಡೆಯುತ್ತಿದೆ. ನಮ್ಮ ಶಾಲೆಯಲ್ಲಿ ಆಡಳಿತ ಮಂಡಳಿಯವರಿಗೂ ಶಿಕ್ಷಕರಿಗೂ ತಾಯಿ-ಮಕ್ಕಳ ಬಾಂಧವ್ಯವಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಎಲ್ಲಾ ಶಿಕ್ಷಕ ವೃಂದವರಿಗೆ ಗುರು ಕಾಣಿಕೆ ನೀಡಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಈಶ್ವರಮ್ಮ ಶಾಲಾಡಳಿತ ಮಂಡಳಿಯ ಕಾರ್ಯದರ್ಶಿ ಎ.ಆರ್.ಉಷಾರಂಗನಾಥ್, ಪ್ರಾಂಶುಪಾಲರಾದ ಕೆ.ಎಸ್.ಪ್ರಭುಕುಮಾರ್,
ಉಪ ಪ್ರಾಂಶುಪಾಲರಾದ ಜಿ.ಎಸ್.ಶಶಿರೇಖಾ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸರಿಯಾದ ದಾರಿಯಲ್ಲಿ ಮುನ್ನಡೆಸುವ ಜವಾಬ್ದಾರಿ ಶಿಕ್ಷಕರ ಮೇಲಿದೆಪ್ರತಿಯೊಬ್ಬ ವಿದ್ಯಾರ್ಥಿಯ ಮನಸ್ಸನ್ನು ಅರಿತು ಬೋಧನೆ ಮಾಡಿ ಅವರನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ. ಆಡಳಿತ ಮಂಡಳಿಯವರು ಶಿಕ್ಷಕರನ್ನು ಗೌರವಿಸುವ ರೀತಿ ಅತ್ಯಂತ ಶ್ರೇಷ್ಠವಾಗಿದೆ.-ಜಿ.ಎಚ್.ಕುಮಾರ್, ಎಂ.ಬಿ ಪದವಿ ಪೂರ್ವ ಕಾಲೇಜಿನ ನಿರ್ದೇಶಕರು.