ದಾವಣಗೆರೆ, ಸೆ. 10, 2025: ಕರ್ನಾಟಕ ಸರ್ಕಾರದಿಂದ ಸ್ಥಾಪಿತವಾದ ದಾವಣಗೆರೆ ವೃತ್ತಿ ರಂಗಭೂಮಿ ರಂಗಾಯಣವು ತನ್ನ ರಂಗಚಟುವಟಿಕೆಗಳನ್ನು ತೀವ್ರಗೊಳಿಸಲು 12 ಕಲಾವಿದರನ್ನು ಆಯ್ಕೆ ಮಾಡಿಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಿದೆ. ಜಿಲ್ಲಾಡಳಿತ ಭವನದಲ್ಲಿರುವ ರಂಗಾಯಣವು ನಾಟಕ ಸಿದ್ಧತೆ, ರಂಗತರಬೇತಿ, ರಂಗಪ್ರದರ್ಶನ ಮತ್ತು ರಂಗಶಿಬಿರಗಳಂತಹ ಸಂಪೂರ್ಣ ರಂಗಚಟುವಟಿಕೆಗಳಲ್ಲಿ ತೊಡಗಿದೆ.
ಆಯ್ಕೆಯ ನಿಬಂಧನೆಗಳು:
1. ಅರ್ಹತೆ: 20 ರಿಂದ 35 ವರ್ಷ ವಯಸ್ಸಿನ ಮಹಿಳೆಯರು ಸೇರಿದಂತೆ 12 ಕಲಾವಿದರನ್ನು ಗೌರವ ಸಂಭಾವನೆ ಆಧಾರದಲ್ಲಿ ಆಯ್ಕೆ ಮಾಡಲಾಗುವುದು.
2. ರಂಗ ಪರಿಣತಿ : ರಂಗಭೂಮಿ ಪರಿಣತಿಯೇ ಪ್ರಮುಖ ಅರ್ಹತೆ. ರಂಗಶಿಕ್ಷಣದ ಡಿಪ್ಲೋಮಾ/ಪ್ರಮಾಣಪತ್ರ ಅಪೇಕ್ಷಣೀಯವಾದರೂ ಕಡ್ಡಾಯವಲ್ಲ. ರಂಗಪ್ರಯೋಗಗಳಲ್ಲಿ ಭಾಗವಹಿಸಿದವರಿಗೆ ಆದ್ಯತೆ.
3. ಪಾರಂಪರಿಕ ಕಲೆ: ಪಾರಂಪರಿಕ ಕಲೆಯ ಕುಟುಂಬದಿಂದ ಬಂದವರಿಗೆ ಆದ್ಯತೆ.
4. ಸಂಭಾವನೆ : ಆಯ್ಕೆಯಾದ ಕಲಾವಿದರಿಗೆ ತಿಂಗಳಿಗೆ 15,000 ರೂ. ಗೌರವ ಸಂಭಾವನೆ.
5. ತಾತ್ಕಾಲಿಕ ಆಯ್ಕೆ : ಈ ಆಯ್ಕೆ ಸಂಪೂರ್ಣವಾಗಿ ತಾತ್ಕಾಲಿಕವಾಗಿದ್ದು, ಖಾಯಂ ಹುದ್ದೆಗಳಲ್ಲ.
6. ನಡವಳಿಕೆ : ತರಬೇತಿ ಅವಧಿಯಲ್ಲಿ ಅನಪೇಕ್ಷಿತ ನಡವಳಿಕೆ ಕಂಡುಬಂದರೆ ಕಲಾವಿದರನ್ನು ತೆಗೆದುಹಾಕುವ ಅಧಿಕಾರ ರಂಗಾಯಣ ಹಾಗೂ ರಂಗಸಮಾಜಕ್ಕೆ ಇದೆ.
7. ನಿಯಮಗಳಿಗೆ ಬದ್ಧತೆ : ಆಯ್ಕೆಯಾದ ಕಲಾವಿದರು ರಂಗಾಯಣದ ನಿಯಮಗಳಿಗೆ ಬದ್ಧರಾಗಿರಬೇಕು.
8. ಪಾರದರ್ಶಕ ಆಯ್ಕೆ : ರಂಗಾಯಣ ನಿರ್ದೇಶಕರ ಅಧ್ಯಕ್ಷತೆಯಲ್ಲಿ ರಂಗಸಮಾಜದ ಉಪಸಮಿತಿಯು ಪಾರದರ್ಶಕವಾಗಿ ಆಯ್ಕೆ ನಡೆಸಲಿದೆ.
9. ನಿರ್ದೇಶಕರ ನಿಯಂತ್ರಣ : ಆಯ್ಕೆಯಾದ ಕಲಾವಿದರು ರಂಗಾಯಣ ನಿರ್ದೇಶಕರ ಮತ್ತು ವಿಶೇಷಾಧಿಕಾರಿಗಳ ಆಡಳಿತಕ್ಕೆ ಒಳಪಟ್ಟಿರುತ್ತಾರೆ.
10. ತೀರ್ಮಾನ : ಆಯ್ಕೆ ಸಮಿತಿಯ ತೀರ್ಮಾನವೇ ಅಂತಿಮವಾಗಿರುತ್ತದೆ.
ಅರ್ಜಿ ಸಲ್ಲಿಕೆ:
ಆಸಕ್ತ ಕಲಾವಿದರು ತಮ್ಮ ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ದಿನಾಂಕ 19.09.2025, ಸಂಜೆ 5:30 ಗಂಟೆಯೊಳಗೆ ಕೆಳಗಿನ ವಿಳಾಸಕ್ಕೆ ತಲುಪಿಸಬೇಕು:
Read also : ಬಸವ ಸಂಸ್ಕøತಿ ಅಭಿಯಾನ : ಮೂಢನಂಬಿಕೆಗಳಿಗೂ ಧರ್ಮದ ವಸ್ತ್ರ
ವಿಳಾಸ : ವಿಶೇಷಾಧಿಕಾರಿಗಳು, ವೃತ್ತಿ ರಂಗಭೂಮಿ ರಂಗಾಯಣ, ಕೊಠಡಿ ಸಂಖ್ಯೆ: 38ಎ, ಜಿಲ್ಲಾಡಳಿತ ಭವನ, ದಾವಣಗೆರೆ-577006
ಇ-ಮೇಲ್ : dvgrangayana@gmail.com
ಸಂದರ್ಶನ:
ಸಂದರ್ಶನವು ದಿನಾಂಕ 20.09.2025 ರಂದು ಬೆಳಗ್ಗೆ 10:30 ಗಂಟೆಗೆ ವೃತ್ತಿ ರಂಗಭೂಮಿ ರಂಗಾಯಣ, ಕೊಠಡಿ ಸಂಖ್ಯೆ: 38ಎ, ಮೊದಲನೆ ಮಹಡಿ, ಜಿಲ್ಲಾಡಳಿತ ಭವನ, ದಾವಣಗೆರೆ ಇಲ್ಲಿ ನಡೆಯಲಿದೆ.
ಸಂದರ್ಶನಕ್ಕೆ ತರಬೇಕಾದ ದಾಖಲೆಗಳು:
1. ಜನ್ಮ ದಿನಾಂಕ ದೃಢೀಕರಣ ಪತ್ರ
2. ಎನ್.ಎಸ್.ಡಿ/ಡಿಪ್ಲೋಮಾ ಪ್ರಮಾಣಪತ್ರ (ತರಬೇತಿ ಹೊಂದಿದವರು)
3. ರಂಗಶಿಕ್ಷಣ ಕೇಂದ್ರದ ಅನುಭವ ಪ್ರಮಾಣಪತ್ರ (ತರಬೇತಿ ಹೊಂದಿದ್ದರೆ)
4. ರಂಗಭೂಮಿ ಅನುಭವ ಕುರಿತ ಸ್ವವಿವರ ಪತ್ರ
ರಂಗಾಯಣದ ಕರೆ:
ರಂಗಾಯಣದ ನಿಯಮಗಳಿಗೆ ಬದ್ಧರಾಗಿ ಕಲಾವಿದರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಈ ಅವಕಾಶವನ್ನು ಬಳಸಿಕೊಳ್ಳಬೇಕೆಂದು ರಂಗಾಯಣ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ವಿನಂತಿಸಿದ್ದಾರೆ.
ಸಂಪರ್ಕಕ್ಕಾಗಿ :
ವೃತ್ತಿ ರಂಗಭೂಮಿ ರಂಗಾಯಣ, ದಾವಣಗೆರೆ
ಇ-ಮೇಲ್: dvgrangayana@gmail.com
Mob : 9341010712