ದಾವಣಗೆರೆ : ನ್ಯಾಮತಿ ಹಲವು ಕಡೆ ಮಾಡಿದ್ದ ಸಾಲ ತೀರಿಸಲಾಗದೆ ನ್ಯಾಮತಿಯ ಒಡೆಯರ ಹತ್ತೂರು ಗ್ರಾಮದ ರೈತ ಬಸವಣ್ಯಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ವಿಷ ಸೇವಿಸಿದ್ದರು, ಕುಟುಂಬದವರು ಆಸ್ಪತ್ರೆಗೆ ದಾಖಲಿಸಿದ್ದರು. ಮಂಗಳವಾರ ಮೃತ-ಪಟ್ಟಿದ್ದಾರೆ.
Read also : ಪರಿವರ್ತಕ (ಟಿಸಿ) ಆಯಿಲ್ ದುರ್ಬಳಕೆ ಆರೋಪ : ಉಗ್ರಾಣ ಪಾಲಕ ಅಮಾನತ್ತು
‘ಮನೆ ನಿರ್ವಹಣೆ ಮತ್ತು ಜಮೀನಿನ ಕೆಲಸ ಕಾರ್ಯಗಳಿಗೆ ಕೊಳವೆ ಬಾವಿಗಳನ್ನು ಕೊರೆಯಿಸಲು ವಿವಿಧ ಕಡೆ ಅಂದಾಜು 2.20 ಲಕ್ಷ ಸಾಲ ಮಾಡಿದ್ದರು. ಅದನ್ನು ತೀರಿಸಲು ಆಗದೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಕುಟುಂಬದವರು ನ್ಯಾಮತಿ ಠಾಣೆಗೆ ದೂರು ನೀಡಿದ್ದಾರೆ.
ಪೊಲೀಸ್ ಇನ್‌ಸ್ಪೆಕ್ಟರ್ ಎನ್.ಎಸ್. ರವಿ ಪ್ರಕರಣ ದಾಖಲಿಸಿದ್ದಾರೆ.