ದಾವಣಗೆರೆ ಸೆ.18: ದಾವಣಗೆರೆ ವಿಶ್ವವಿದ್ಯಾನಿಲಯದ ಶಿವಗಂಗೋತ್ರಿ ಆವರಣ ಹಾಗೂ ಚಿತ್ರದುರ್ಗ ಜಿ.ಆರ್. ಹಳ್ಳಿ ಜ್ಞಾನ ಗಂಗೋತ್ರಿ ಸ್ನಾತಕೋತ್ತರ ಅಧ್ಯಯನ ವಿಭಾಗಗಳಿಗೆ ಪ್ರಸಕ್ತ ಸಾಲಿನ ಶೈಕ್ಷಣಿಕ ಕಾರ್ಯಭಾರಕ್ಕನುಗುಣವಾಗಿ ಅತಿಥಿ ಉಪನ್ಯಾಸಕರು, ಭೋಧನಾ ಸಹಾಯಕರುಗಳನ್ನು ತಾತ್ಕಾಲಿಕವಾಗಿ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಕಲಾ ನಿಕಾಯ: ಇಂಗ್ಲೀಷ್, ಅರ್ಥಶಾಸ್ತ್ರ , ಉರ್ದು, ಇತಿಹಾಸ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಹಾಗೂ ಸಮಾಜ ಶಾಸ್ತ್ರ ವಿಭಾಗ
ನಿರ್ವಾಹಣ ನಿಕಾಯ: ಎಂ.ಬಿ.ಎ ವಿಭಾಗ, ವಿಜ್ಞಾನ ನಿಕಾಯ: ಜೀವರಸಾಯನಶಾಸ್ತ್ರ, ಅಪರಾಧ ಶಾಸ್ತ್ರ ಮತ್ತು ನ್ಯಾಯ ವಿಜ್ಞಾನ, ಗಣಕ ವಿಜ್ಞಾನ, ಎಂ.ಸಿ.ಎ ಸೂಕ್ಷ್ಮಾಣು ಜೀವಶಾಸ್ತ್ರ, ಯೋಗ ವಿಜ್ಞಾನ, ಮತ್ತು ಪ್ರಾಣಿ ಶಾಸ್ತ್ರ ವಿಭಾಗ. ಶಿಕ್ಷಣ ನಿಕಾಯ: ಶಿಕ್ಷಣ, ದೈಹಿಕ ಶಿಕ್ಷಣ ವಿಭಾಗದಲ್ಲಿನ ಹುದ್ದೆಗಳು.
Read also : ಪೋಷಣ್ ಮಾಸಾಚರಣೆ|ಪೌಷ್ಠಿಕಾಂಶ ಆಹಾರ ಸೇವನೆಗೆ ಆದ್ಯತೆ ನೀಡಿ :ನ್ಯಾ.ಮಹಾವೀರ ಮ ಕರೆಣ್ಣವರ
ಅರ್ಜಿ ನಮೂನೆ, ನಿರ್ವಹಣಾ ಶುಲ್ಕ ಹಾಗೂ ಇನ್ನಿತರೆ ವಿವರಗಳನ್ನು ವಿಶ್ವವಿದ್ಯಾನಿಲಯದ ವೆಬ್‌ಸೈಟ್: www.davangereuniversity.ac.in ನಲ್ಲಿ ಮಾಹಿತಿಯನ್ನು ಪಡೆಯಬಹುದೆಂದು ವಿಶ್ವವಿದ್ಯಾನಿಲಯದ ಕುಲಸಚಿವರು ತಿಳಿಸಿದ್ದಾರೆ.
