ದಾವಣಗೆರೆ : ಜಿಲ್ಲಾ ವಕ್ಫ್ ಮಂಡಳಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ದ್ವಿತೀಯ ದರ್ಜೆ ಸಹಾಯಕರಾದ ಜಾಕೀರ್ ಹುಸೇನ್ ಅವರು ಶಿವಮೊಗ್ಗ ಜಿಲ್ಲೆಯ ವಕ್ಫ್ ಮಂಡಳಿಯ ವಕ್ಫ್ ನಿರೀಕ್ಷಕರಾಗಿ ಪದೋನ್ನತಿ ಹೊಂದಿರುವ ಹಿನ್ನಲೆಯಲ್ಲಿ ಶುಕ್ರವಾರ ಬೀಳ್ಕೊಡುಗೆ ಸಮಾರಂಭ ನಡೆಯಿತು.

Read also : ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಮಾನ ನ್ಯಾಯ : ಹೈಕೋರ್ಟ್ ನ್ಯಾ.ರವಿ ವಿ.ಹೊಸಮನಿ

ಈ ವೇಳೆ ಜಿಲ್ಲಾ ವಕ್ಫ್ ಮಂಡಳಿ ಜಿಲ್ಲಾ ಅಧಿಕಾರಿ ಮೋಜಂ ಪಾಷಾ, ವಕ್ಫ್ ಬೋರ್ಡ್ನ ಎಲ್ಲಾ ಸಿಬ್ಬಂದಿ ಹಾಗೂ ಮುಸ್ಲಿಂ ಎಜುಕೇಶನ್ ಫಂಡ್ ಅಸೋಸಿಯೇಷನ್ ಸಿಬ್ಬಂದಿ ಮತ್ತು ಇಂಡಿಯನ್ ಮುಸ್ಲಿಂ ಲೀಗ್ ಅಧ್ಯಕ್ಷ ಟಿ.ಅತಾವುಲ್ಲಾ ಸಾಬ್, ನಸ್ರುಲಾ ್ಲ ಸಾಬ್, ದೇಶನೂರಸಾಬ್, ಸೈಯದ್ ವಜೀರ್ ಸಾಬ್, ರಿಜ್ವಾನ್ ಸಾಬ್, ರಹಮತ್ ಊರ್ ರಹಮಾನ್, ಮಹಮೂದ್ ಖಾನ್, ಹಾಜಿ ಪಟೇಲಿ ಸಮೀರ್, ವಾಜಿದ್ ಸಾಬ್, ವಕ್ಪ್ ಮಂಡಳಿ ರಾಜ್ ಸಮಿತಿ ಸದಸ್ಯ ಅಬ್ದುಲ್ ಘನಿ ತಾಹಿರ್, ಸಂತೆಬೆನ್ನೂರು. ಅಜಾಜ್ ಸಾಬ್ ಹಾಗೂ ಸ್ಮಾರ್ಟ್ ನ್ಯೂಸ್ ಸಂಪಾದಕ ಅಲ್ಲಾಭಕ್ಷಿ ಮುಂತಾದವರು ಇದ್ದರು.
