ದಾವಣಗೆರೆ : ವೃದ್ಧೆಯ ಸರಗಳ್ಳತನ ಮಾಡಿದ್ದ ಆರೋಪಿತರನ್ನು ಪೊಲೀಸರು ಪ್ರಕರಣ ದಾಖಲಾಗಿ 24 ಗಂಟೆಯಲ್ಲಿ ಬಂಧಿಸಿದ್ದಾರೆ.
ಹೊನ್ನಾಳ್ಳಿ ತಾಲೂಕಿನ ಹುಣಸಘಟ್ಟ ಗ್ರಾಮದ ದರ್ಶನ್ ಹೆಚ್.ಬಿ, (22), ವಿನಯ್ ಎ.ಆರ್ ಬಂಧಿತರು.
ಹೊನ್ನಾಳಿ ತಾಲ್ಲೂಕು ಹುಣಸಘಟ್ಟ ಗ್ರಾಮದ ಉಮೇಶ ಎನ್.ಜಿ ತಮ್ಮ ತಾಯಿ ಪಾರ್ವತಮ್ಮ ಅಡಿಕೆ ತೋಟದಲ್ಲಿ ಒಬ್ಬರೇ ಹುಲ್ಲು ಕೀಳುತ್ತಿರುವಾಗ ಯಾರೋ ಒಬ್ಬ ವ್ಯಕ್ತಿಯು ಕೊರಳಲಿದ್ದ 40 ಗ್ರಾಂ ತೂಕದ ಬಂಗಾರದ ಸರವನ್ನು ಬಲವಂತವಾಗಿ ಕಿತ್ತುಕೊಂಡು ಪಕ್ಕದ ತೋಟದಲ್ಲಿ ವಾಚ್ ಮಾಡಲು ನಿಂತಿದ್ದ ಇನ್ನೊಬ್ಬ ವ್ಯಕ್ತಿಯ ಜೊತೆಗೆ ಒಂದು ಬೈಕಿನಲ್ಲಿ ಕಲ್ಲಹಳ್ಳಿ ಕಡೆಗೆ ಹೋಗಿರುತ್ತಾರೆ ಎಂದು ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಎಸ್ಪಿ ಉಮಾ ಪ್ರಶಾಂತ, ಎಎಸ್ಪಿ ಪರಮೇಶ್ವರ ಎ ಹೆಗಡೆ, ಚನ್ನಗಿರಿ ಉಪ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಸ್ಯಾಮ್ ವರ್ಗೀಸ್ ಮಾರ್ಗದರ್ಶನದಲ್ಲಿ ಹಾಗೂ ಹೊನ್ನಾಳಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸುನೀಲ್ ಕುಮಾರ್ ಹೆಚ್ ನೇತೃತ್ವದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.
Read also : ಅಲ್ಪಸಂಖ್ಯಾತ ಸಮುದಾಯದವರ ಸರಳ ವಿವಾಹಕ್ಕೆ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನ
ಆರೋಪಿತರಿದ ಸರಗಳ್ಳತನ ಮಾಡಿದ್ದ ರೂ. 3 ಲಕ್ಷ ಮೌಲ್ಯದ ಒಟ್ಟು 30 ಗ್ರಾಂ ತೂಕದ ಬಂಗಾರದ ಕೊರಳ ಚೈನ್ ಮತ್ತು ಕೃತ್ಯಕ್ಕೆ ಬಳಸಿದ ರೂ. 30,000/- ಮೌಲ್ಯದ ಒಂದು ಮೋಟಾರ್ ಸೈಕಲ್ಲನ್ನು ವಶಕ್ಕೆ ಪಡೆದಿದ್ದಾರೆ.ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
