ದಾವಣಗೆರೆ : ಬೆಳಗಾವಿಯಲ್ಲಿ ಮಾಜಿ ಸಂಸದ ರಮೇಶ್ ಕತ್ತಿ ಬಳಸಿದ ಭಾಷೆಯಿಂದ ಸಮಸ್ತ ಬೇಡ, ವಾಲ್ಮೀಕಿ ನಾಯಕ ಸಮಾಜಕ್ಕೆ ನೋವಾಗಿದ್ದು ಇದನ್ನು ತೀವ್ರವಾಗಿ ಖಂಡಿಸುತ್ತೇವೆ ಗುರುಪೀಠದ ಪ್ರಸನಾನಂದಪುರಿ ಸ್ವಾಮೀಜಿ ಹೇಳಿದರು.
ಹರಿಹರದಲ್ಲಿ ತಾಲೂಕಿನ ರಾಜನಹಳ್ಳಿಯ ಬಳಿ ವಾಲ್ಮೀಕಿ ಗುರುಪೀಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮಾಜಿ ಸಂಸದ ರಮೇಶ್ ಕತ್ತಿ ವಾಲ್ಮೀಕಿ ಸಮಾಜದ ವಿರುದ್ಧ ಅವಹೇಳನಕಾರಿ ಮಾತನಾಡಿರುವುದು ನಮ್ಮ ಸಮುದಾಯದ ಬಗ್ಗೆ ತುಂಬಾ ನೋವು ಆಗಿದೆ. ಸಮುದಾಯದ ಮುಖ್ಯವಾಹಿನಿಯಿಂದ ದೂರ ಉಳಿದ ಕಾರಣಕ್ಕೆ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರು ಕಾನೂನಿನಲ್ಲಿ ರಕ್ಷಣೆ ನೀಡಿದ್ದಾರೆ. ಕಾನೂನು ರಕ್ಷಣೆ ಕೊಟ್ಟು 78 ವರ್ಷಗಳಾದರೂ ಸಹ ರಮೇಶ ಕತ್ತಿಯ ಮನಸ್ಥಿತಿಯ ಕೆಲವರು ಈ ರೀತಿ ವರ್ತಿಸುತ್ತಿರುವುದು ಬೇಸರ ತರಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಮಾಜದ ವಿರುದ್ಧ ಅವಹೇಳನಕಾರಿ ಪದ ಬಳಸಿದ ರಮೇಶ್ ಕತ್ತಿ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
