ಆಶಯ ಪ್ರಸ್ತುತ ವರ್ಷದ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿ/ನಿಯರಿಗೆ ಮುಂಚಿತವಾಗಿ ಅಭಿನಂದನೆಗಳು.
ಮಕ್ಕಳೇ ನಾನು ಹೇಳುವ ಕೆಲವು ಮಾತುಗಳನ್ನು ಶ್ರದ್ದೆ ಮತ್ತು ಅಭಿಮಾನದಿಂದ ಕೇಳಿದರೆ ಮುಂದೆ ನಿಮ್ಮ ಭವಿಷ್ಯ ಉಜ್ವಲ ವಾಗುವುದರಲ್ಲಿ ಯಾವ ಸಂದೇಹವೂ ಇಲ್ಲ.
ಮೊದಲನೆಯದಾಗಿ ಆತ್ಮವಿಶ್ವಾಸ ಮೈಗೂಡಿಸಿಕೊಳ್ಳಿ. ನಾವು ಗೆದ್ದೇ ಗೆಲ್ಲುತ್ತೇವೆಂದು ಇನ್ನು ಎರಡನೇದಾಗಿ ಹಾರ್ಡ್ ವರ್ಕ್ (ಸತತ ಪರಿಶ್ರಮ) (ಓದು-ಬರಹ) ದಿನಕ್ಕೆ ಇಂತಿಷ್ಟು ಗಂಟೆ (ತಮ್ಮ ಇಚ್ಛೆಯ ಪ್ರಕಾರ ) ತಪ್ಪದೇ ಅಧ್ಯಯನ ಮಾಡುತ್ತೇನೆಂದು ಪ್ರತಿಜ್ಞೆ ಮಾಡಿಕೊಳ್ಳಬೇಕು.
ಹನಿ ಹನಿ ಕೂಡಿದರೆ ಹಳ್ಳ, ತೆನೆ ತೆನೆ ಕೂಡಿದರೆ ರಾಶಿ ಎನ್ನುವಂತೆ ದಿನಾಲು ವೇಳೆ ಗನುಸಾರ ವಾಗಿ ಎಲ್ಲ ವಿಷಯದ ಒಂದೊಂದು ಅಥವಾ ಎರಡೆರಡು ಪ್ರಶ್ನೆ ಉತ್ತರ ಅಥವಾ ಸಮಸ್ಯೆ ಹೀಗೆ ತದೇಕಚಿತ್ತದಿಂದ ಅಧ್ಯಯನ ಮಾಡುತ್ತಾ ಹೋದರೆ ತಾವೇ ಊಹಿಸಿ……… ಆದ್ದರಿಂದ ತಜ್ಞರು ಹೇಳುತ್ತಾರೆ.
Read also : ಅತ್ಯಂತ ಎತ್ತರದ “ಕನ್ನಡ ಧ್ವಜ” ಕಂಬ ನಿರ್ಮಾಣಕ್ಕೆ ಮಂಡ್ಯ ಅಭಿ ಒಕ್ಕಲಿಗ ಆಗ್ರಹ
ಪರೀಕ್ಷೆಗೆ ನಾವು ಹೆದರಬಾರದು ಪರೀಕ್ಷೆ ನಮಗೆ ಹೆದರಬೇಕು ಎಂದು. ಪರೀಕ್ಷೆ ಹೆದರುವುದರ ಅರ್ಥ ಏನೆಂದರೆ ಪರೀಕ್ಷೆಯೇ ಭಯಪಟ್ಟು ಯಾವ ಪ್ರಶ್ನೆ ವಿದ್ಯಾರ್ಥಿಗಳಿಗೆ ಕೊಡಬೇಕೆಂದು? ಮೂರನೆಯದಾಗಿ *ಆರೋಗ್ಯವೇ ಭಾಗ್ಯ* ಎನ್ನುವಂತೆ ಆರೋಗ್ಯವನ್ನು ಚೆನ್ನಾಗಿ ಸಮತೋಲನದಲ್ಲಿ ಇಟ್ಟುಕೊಂಡರೆ ಜೀವನ ಸಾರ್ಥಕವಾಗುತ್ತದೆ.
ಈ ಮೂರು ಅಂಶ ಗಳನ್ನು ಚೆನ್ನಾಗಿ ಚಾಚು ತಪ್ಪದೇ ಪಾಲಿಸಿದರೆ ನಿಮ್ಮ ಬಾಳು ಮುಂದೆ ನಂದನವನವಾಗುತ್ತದೆ. ನಾನಿಲ್ಲಿ ಹಿಂದಿ ಪರೀಕ್ಷಾ ತೋಶಾ ಎಂಬ ಕೈಪಿಡಿಯನ್ನು ತಮ್ಮ ಮುಂದೆ ಇಡುತ್ತಿದ್ದೇನೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಹಿಂದಿ ವಿಷಯದ ಪರೀಕ್ಷೆಯ ಕಲ್ಪವೃಕ್ಷ ಎಂದರೆ ತಪ್ಪಾಗಲಾರದು.
ತಾವು ಈ ಕೈಪಿಡಿಯನ್ನು ಮನಸಿಟ್ಟು ಓದಿದರೆ ಹೆಚ್ಚೆಚ್ಚು ಅಂಕ ತೆಗೆದುಕೊಳ್ಳುವಲ್ಲಿ ಯಾವ ಸಂದೇಹವೂ ಇಲ್ಲ.ಬೆಸ್ಟ್ ಆಫ್ ಲಕ್ ಈ ಹಿಂದಿ ಕೈಪಿಡಿ ಪ್ರಕಟವಾಗುವಲ್ಲಿ ಸಾಕಷ್ಟು ನನ್ನ ಶಿಷ್ಯರು ಹಾಗೂ ನನ್ನ ಆತ್ಮೀಯ ಗೆಳೆಯರು ಸಹಕರಿಸಿದ್ದಾರೆ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ಸಹಸ್ರ ಧನ್ಯವಾದಗಳೊಂದಿಗೆ
ಎನ್ ಎಫ್ ಕಿತ್ತೂರ್ ಹಿಂದಿ ಶಿಕ್ಷಕರು.
ನೋಮಾನಿಯಾ ಸ್ಕೂಲ್ ಆಜಮ್ ನಗರ
ಬೆಳಗಾವಿ
