ದಾವಣಗೆರೆ : ಬಂಗಾರದ ಆಭರಣ ತಯಾರಕನಿಂದ ಅಭರಣದ ಸಾಮಾಗ್ರಿ ಕಿತ್ತುಕೊಂಡು ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಂಸಬಾವಿ ಪೊಲೀಸ್ ಠಾಣೆಯ ಮಾಳಪ್ಪ ಯಲ್ಲಪ್ಪ ಮತ್ತು ಸಾಗರ ಟೌನ್ ಪೊಲೀಸ್ ಠಾಣೆಯ ಪ್ರವೀಣ್ ಕುಮಾರ್ ಅವರನ್ನು ದಿನಾಂಕ:24/11/2025 ರಿಂದಲೇ ಜಾರಿಗೆ ಬರುವಂತೆ ಸೇವೆಯಿಂದ ವಜಾ ಮಾಡಲಾಗಿದೆ ಮತ್ತು ಪ್ರಕರಣದ ಎ-2 ಆರೋಪಿತ ಪ್ರವೀಣ್ ಕುಮಾರ್ ಪಿಎಸ್‍ಐ ರವರನ್ನು 24/11/2025 ರಿಂದಲೇ ಸೇವೆಯಿಂದ ಅಮಾನತ್ತುಗೊಳಿಸಿ ಇಲಾಖಾ ವಿಚಾರಣೆಗೆ ನಡೆಸಲು ಪೂರ್ವ ವಲಯ ಐಜಿಪಿ ಡಾ|| ಬಿ.ಆರ್.ರವಿಕಾಂತೇಗೌಡ ಆದೇಶ ನೀಡಿದ್ದಾರೆ.
ಪಿಎಸ್‍ಐಗಳಾದ ಮಾಳಪ್ಪ ಯಲ್ಲಪ್ಪ ಮತ್ತು ಪ್ರವೀಣಕುಮಾರ್ ಪರಿಚಯಿರುವ 3 ಜನರನ್ನು ಸೇರಿಸಿಕೊಂಡು ಕಾರವಾರದ ವಿಶ್ವನಾಥ ಅರ್ಕಸಾಲಿ ರವರಿಂದ ದಾವಣಗೆರೆಯಲ್ಲಿ 78.15 ಗ್ರಾಂ ಬಂಗಾರದ ಗಟ್ಟಿ ಹಾಗೂ ಬಂಗಾರದ ಆಭರಣದ ಸಾಮಗ್ರಿಗಳನ್ನು ಕಿತ್ತುಕೊಂಡು ದರೋಡೆ ನಡೆಸಿದ್ದರು.
Read also : ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಅರ್ಜಿ ಆಹ್ವಾನ
ಕುರಿತು ದಾವಣಗೆರೆ ಜಿಲ್ಲೆಯ ಕೆಟಿಜೆ ನಗರ ಪೊಲೀಸ್ ಠಾಣಿಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು. ಸಾರ್ವಜನಿಕರಿಗೆ ರಕ್ಷಣೆಯನ್ನು ನೀಡುವ ಮತ್ತು ನೊಂದವರಿಗೆ ನ್ಯಾಯಕೊಡಿಸುವಂತಹ ಬಹುಮಖ್ಯವಾದ ಜವಾಬ್ದಾರಿಯುತ ಪಿಎಸ್‍ಐ ಹುದ್ದೆಯಲ್ಲಿದ್ದುಕೊಂಡು ಇಂತಹ ಘೋರ ಅಪರಾಧ ಕೃತ್ಯವನ್ನು ಎಸಗಿದ ಕಾರಣ ಪ್ರಕರಣದ ಎ-1 ಆರೋಪಿ ಮಾಳಪ್ಪ ಯಲ್ಲಪ್ಪ ಚಿಪ್ಪಲಕಟ್ಟೆ ಪಿಎಸ್‍ಐ ಇನ್ನೂ ಪಿಎಸ್‍ಐ ಹುದ್ದೆಯ ಪರೀಕ್ಷಾರ್ಥ ಅವಧಿಯಲ್ಲಿರುವುದರಿಂದ ದಿನಾಂಕ:24/11/2025 ರಿಂದಲೇ ಜಾರಿಗೆ ಬರುವಂತೆ ಸೇವೆಯಿಂದ ವಜಾ ಮಾಡಲಾಗಿದೆ ಮತ್ತು ಪ್ರಕರಣದ ಎ-2 ಆರೋಪಿತ ಪ್ರವೀಣ್ ಕುಮಾರ್ ಪಿಎಸ್‍ಐ 24/11/2025 ರಿಂದಲೇ ಸೇವೆಯಿಂದ ಅಮಾನತ್ತುಗೊಳಿಸಿ ಇಲಾಖಾ ವಿಚಾರಣೆಗೆ ಆದೇಶಿಸಿದೆ.
