ಹರಿಹರ: ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾಗ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ 48 ಚೀಲ ಪ್ಯಾಕೆಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಪ್ರಶಾಂತ್ ನಗರದ ಚಾನಲ್ ರಸ್ತೆ ಸಮೀಪ ತಾಲೂಕಿನ ಬಾನುವಳ್ಳಿ ಗ್ರಾಮದ ಅಬ್ಬು ಸಾಲೇಹ, ಯೂನಸ್ ಖಾನ್ ಮತ್ತು ಬಷೀರ್ ಎಂಬುವರು ಡಿ.29ರಂದು ರಾತ್ರಿ 8 ಗಂಟೆ ಸುಮಾರಿನಲ್ಲಿ ಪಡಿತರ ಅಕ್ಕಿಯನ್ನು ಗೂಡ್ಸ್ ವಾಹನದಲ್ಲಿ ಲೋಡ್ ಮಾಡುತ್ತಿದ್ದಾರೆ ಎಂದು ತಾಲೂಕಿನ ಹೊಳೆ ಸಿರಿಗೆರೆ ಗ್ರಾಮದ ಸಮಾಜ ಸೇವಕ ರಾಮಕೃಷ್ಣ ಎಂಬುವರು ನೀಡಿದ ಮಾಹಿತಿ ಆಧಾರದ ಮೇಲೆ ಆಹಾರ ಇಲಾಖೆಯ ಆಹಾರ ನಿರೀಕ್ಷಕ ಎಂ.ನಜರುಲ್ಲಾ ಮತ್ತು ಸಿಬ್ಬಂದಿಗಳು ದಾಳಿ ನಡೆಸಿ ಸುಮಾರು 35 ರಿಂದ 40 ಕೆ.ಜಿ. ತೂಕದ 48 ಚೀಲ ಪ್ಯಾಕೇಟ್‌ಗಳಲ್ಲಿದ್ದ 1920 ಕೆ.ಜಿ. ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.
Read also : ಪುಟ್ಟಣ್ಣ ಕಣಗಾಲ್ ಕನ್ನಡ ಸಂಸ್ಕೃತಿಯ ನೇಕಾರರು: ಕೆ.ವಿ.ಪಿ
ಪ್ರತಿ ಕೆ.ಜಿ.ಗೆ 18 ರೂ.ನಂತೆ ಇದರ ಮೌಲ್ಯ 34560 ರೂ. ಆಗಿದೆ. ಆಹಾರ ಇಲಾಖೆ ಅಧಿಕಾರಿಗಳು ಮೂವರು ಆರೋಪಿಗಳು ಮತ್ತು 48 ಚೀಲ ಅಕ್ಕಿ ಪ್ಯಾಕೇಟ್‌ಗಳು ಮತ್ತು ಗೂಡ್ಸ್ ವಾಹನವನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಈ ಕುರಿತು ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
