ಕತೆಗಾರರಾಗಿ ಮೆಹಂದಿ ಹೂಗಳನ್ನು ಕನ್ನಡಿಗರ ಮುಂದಿಟ್ಟ ಬಿ.ಶ್ರೀನಿವಾಸರ ಮಹತ್ವದ’ಖಾಲಿಗೋಡೆಯ ಗುರುತಿಲ್ಲದ ಚಿತ್ರಗಳು’ ಕೃತಿಗೆ ರಾಷ್ಟ್ರೀಯ ಪುಸ್ತಕ ಪುರಸ್ಕಾರ ಲಭಿಸಿದೆ.
ಅನ್ನದ ಅಗಳು,ಧೂಳು,ಕಾಗದದ ಚೂರು,ಆಟಿಕೆ ಸಾಮಾನು,ಮನುಷ್ಯನ ಕಿಡ್ನಿ ಇವುಗಳಲ್ಲಿ ಜೀವ ಸಾಕ್ಷ್ಯ ಹುಡುಕುವ ಸೂಕ್ಷ್ಮ ಕಥೆಗಾರ ಶ್ರೀನಿವಾಸ್ ಧೂಳನ್ನೇ ಅಕ್ಷರಗಳನ್ನಾಗಿಸಿದ ಮಹತ್ವದ ಲೇಖಕ. ಅಷ್ಟೇ ಅಲ್ಲ,ಅಕ್ಷರಗಳನ್ನು ಬಂಡಾಯ ಮತ್ತು ದಮನಿತರ ಧ್ವನಿಯಾಗಿಯೂ ಚಿತ್ರಿಸಬಲ್ಲ ಶಕ್ತ ಕಥೆಗಾರ.
ವೃತ್ತಿಯಲ್ಲಿ ದಾವಣಗೆರೆಯ ಪ್ರಧಾನ ಜಿಲ್ಲಾ ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀನಿವಾಸರಿಗೆ ಕನಕ ಶರೀಫ ಪ್ರಶಸ್ತಿ,ಪ್ರಜಾವಾಣಿ ಕಥಾ ಪುರಸ್ಕಾರ,ಕ.ಸಾ.ಪ.ಕಥಾ ಪುರಸ್ಕಾರ,ಸಂಕ್ರಮಣ ಕಾವ್ಯ,ಸಿಂಚನ ಪ್ರಶಸ್ತಿ,ನಿರಂತರ ಸಾಹಿತ್ಯ ಪುರಸ್ಕಾರಗಳೂ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿರುತ್ತಾರೆ.
ಡಿಸೆಂಬರ್ 20 ಮತ್ತು 21 ನೇ ತಾರೀಖಿನಂದು ರಾಯಚೂರಿನಲ್ಲಿ ಜರುಗಲಿರುವ 11 ನೆಯ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನವನ್ನು ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ಉದ್ಘಾಟಿಸಲಿದ್ದು,ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಲೇಖಕ ಡಾ.ಕುಂ.ವೀರಭದ್ರಪ್ಪ ಪ್ರಶಸ್ತಿ ಪ್ರದಾನ ಮಾಡುವರು.
Read also ಬಳಕೆಯಾಗದೆ ಉಳಿದ ಸಿಎಸ್ ಆರ್ ನಿಧಿಗಳ ಕುರಿತು ಕೇಂದ್ರಕ್ಕೆ ಮಾಹಿತಿ ಕೇಳಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್
ಹಿರಿಯ ಲೇಖಕಿ ಡಾ.ಜಯದೇವಿ ಗಾಯಕವಾಡ್ ರವರು ಸಮ್ಮೇಳನದ ಸರ್ವಾಧ್ಯಕ್ಷರಾಗಿರುತ್ತಾರೆಂದು ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಅರ್ಜುನ ಗೊಳಸಂಗಿ ತಿಳಿಸಿರುತ್ತಾರೆ.
ಕಥಾ,ಕಾವ್ಯ ಸಂಕಲನ,ಅನುವಾದ,ವೈಚಾರಿಕ ಹಾಗೂ ನುಡಿಚಿತ್ರಗಳಂತಹ ಇವರ ವೈವಿಧ್ಯಮಯ ಹನ್ನೆರೆಡು ಸಾಹಿತ್ಯಿಕ ಕೃತಿಗಳು ನಾಡಿನ ಲಂಕೇಶ್ ಪ್ರಕಾಶನ, ಲಡಾಯಿ,ತಳಮಳ,ಶ್ರಮಿಕ ಪ್ರಕಾಶನಗಳಿಂದ ಪ್ರಕಟವಾಗಿವೆ.
ಪ್ರಸ್ತುತ ಪ್ರಶಸ್ತಿ ಪುರಸ್ಕೃತ ‘ಖಾಲಿ ಗೋಡೆಯ ಗುರುತಿಲ್ಲದ ಚಿತ್ರಗಳು’ಕೃತಿಯ ತಳಮಳಿಸುವ ಕಥೆಗಳನ್ನು ಕೊಪ್ಪಳದ ತಳಮಳ ಪ್ರಕಾಶನದಿಂದ ಪ್ರಕಟಿಸಲಾಗಿದೆ.
