ದಾವಣಗೆರೆ ಡಿ.16 : ಕೆಯುಐಡಿಎಫ್‍ಸಿ ಇಲಾಖೆಯ ವತಿಯಿಂದ ದಾವಣಗೆರೆ ನಗರದಲ್ಲಿ 24/7 ಜಲಸಿರಿ ಯೋಜನೆಯನ್ನು ಕೈಗೊಳ್ಳಲಾಗಿದ್ದು ಅದರಂತೆ ರಾಜನಹಳ್ಳಿ ಜಾಕ್‍ವೆಲ್ ನಿಂದ ಬಾತಿ ನೀರು ಶುದ್ಧೀಕರಣ ಘಟಕಕ್ಕೆ ನೀರನ್ನು ಸರಬರಾಜು ಮಾಡುವ ಪೈಪ್‍ಲೈನ್ ದುರಸ್ತಿ ಕಾರ್ಯವನ್ನು ದಿನಾಂಕ:17-12-2025 ರಿಂದ 19-12-2025 ರವರೆಗೆ ಕೈಗೊಳ್ಳಲು ಉದ್ದೇಶಿಸಿದ್ದು ಸದರಿ ದಿನಗಳಂದು ದಾವಣಗೆರೆ ನಗರಕ್ಕೆ ಸರಬರಾಜು ಆಗುವ 24/7 ಕುಡಿಯುವ ನೀರಿನ ವಿತರಣೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ದಾವಣಗೆರೆ ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Read also : ಉಮಾ ಮಹೇಶ್ವರ ಜಾತ್ರೆ:ಸಾವಿರಾರು ಯುವಕರು ಉರುಳು ಸೇವೆ
