ದಾವಣಗೆರೆ: ದಾವಣಗೆರೆ ದಕ್ಷಿಣದ ವಿಧಾನಸಭಾ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಆತ್ಮಕ್ಕೆ ಶಾಂತಿ ಕೋರಿ ಅಯೂಬ್ ಪೈಲ್ವಾನ್ ಅವರ ಅಧ್ಯಕ್ಷತೆಯಲ್ಲಿ ನಗರದ ಹರಳಿ ಮರ ವೃತ್ತದಲ್ಲಿ ದಾವಣಗೆರೆ ದಕ್ಷಿಣ ಕಾಂಗ್ರೆಸ್ ವತಿಯಿಂದ ಶ್ರದ್ಧಾಂಜಲಿ ಸಲ್ಲಿಲಾಯಿತು.
ದೂಡ ಅಧ್ಯಕ್ಷ ದಿನೇಶ್ ಕೆ ಶೆಟ್ಟಿ ಅವರು ಮಾತನಾಡಿ, ಶಾಮನೂರು ಶಿವಶಂಕರಪ್ಪ ಅವರು ಎಲ್ಲಾ ಸಮಾಜವನ್ನು ಒಗ್ಗೂಡಿಸಿಕೊಂಡು ಸಮಾಜದ ಏಳಿಗೆಯನ್ನು ಬಯಸಿದವರು. ದಾವಣಗೆರೆಯ ಅಭಿವೃದ್ಧಿಗೆ ಶ್ರಮಿಸಿದ್ದರು ಎಂದರು.
ಅಧ್ಯಕ್ಷ ಅಯೂಬ್ ಪೈಲ್ವಾನ್ ಮಾತನಾಡಿ, ಎಲ್ಲಾ ಸಮಾಜಕ್ಕೆ ಎಲ್ಲಾ ರೀತಿಯ ಸೌಕರ್ಯಗಳು ನೀಡಿ ಕಷ್ಟ ಬಂದಾಗ ನೆರವು ನೀಡಿ ಸಮಸ್ಯೆಗಳನ್ನು ಬಗೆಹರಿಸಿ ನಮ್ಮ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿಯಾಗಿದ್ದ ನಮ್ಮೆಲ್ಲರಿಗೂ ಮಾರ್ಗದರ್ಶಕರಾಗಿದ್ದರು. ಅಂತಹ ಧೀಮಂತ ನಾಯಕರನ್ನು ಕಳೆದುಕೊಂಡು ತಬ್ಬಲಿಗಳ ಆಗಿದ್ದೇವೆ ಎಂದರು.
Read also : ಯುವನಿಧಿ ಸ್ವಯಂ ಘೋಷಣೆ ಮಾಡುವ ಪ್ರಕ್ರಿಯೆ ಡಿಸೆಂಬರ್-2025ರ ತಿಂಗಳಾಂತಕ್ಕೆ ವಿಸ್ತರಣೆ
ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾಬಾಯಿ ಮಾಲತೇಶ್, ಎಸ್ ಮಲ್ಲಿಕಾರ್ಜುನ್, ರಹೀಂ ಸಾಬ್, ಪರಶುರಾಮ್ ತಕ್ಕಡಿ, ಜಾಕಿರ್ ಪಂಡಿತ್ , ಹರೀಶ್, ಲಿಯಾಖತ್ ಆಲಿ, ಇಬ್ರಾಹಿಂ ಕಲೀಲ್, ಸಾಗರ್, ಸಲ್ಮಾ ಭಾನು, ಮಂಜುಳಮ್ಮ, ಮಂಗಳಮ್ಮ , ದಾದಾಪೀರ್, ಮಾರುತಿ ಇತರರು ಇದ್ದರು.
