ನ್ಯಾಮತಿ: ತಾಳೆ ತೋಟಕ್ಕೆ ಆಕಸ್ಮಿಕವಾಗಿ ಅಗ್ನಿ ಅವಘಡ ಸಂಭವಿಸಿ ರೈತನೊಬ್ಬ ಬೆಂಕಿಗೆ ಆಹುತಿಯಾಗಿರುವ ಘಟನೆ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಕುರುವ ಗ್ರಾಮದಲ್ಲಿ ಬುಧವಾರ ನಡೆದಿದೆ.
ಗ್ರಾಮದ ಈಶ್ವರಪ್ಪ (80 ) ಬೆಂಕಿಗೆ ಆಹುತಿಯಾಗಿರುವ ರೈತ. 2.20 ಎಕರೆ ಜಮೀನಿನ ತೋಟದಲ್ಲಿ ತಾಳೆ ಬೆಳೆದಿದ್ದರು. ಎಂದಿನAತೆ ತೋಟಕ್ಕೆ ಬೆಳಗ್ಗೆ ರೈತ ಈಶ್ವರಪ್ಪ ತೆರಳಿದ್ದರು. ಆಕಸ್ಮಿಕವಾಗಿ ತಗುಲಿದ ಬೆಂಕಿಯ ಕೆನ್ನಾಲಿಗೆಗೆ ರೈತ ಸುಟ್ಟು ಕರಕಲಾಗಿದ್ದಾರೆ ಎಂದು ಹೇಳಲಾಗಿದೆ.
ಬೆಂಕಿಯ ಜ್ವಾಲೆಗೆ 2 ಎಕರೆಯಷ್ಟು ತಾಳೆ ಬೆಳೆ ಸುಟ್ಟು ಕರಕಲಾಗಿದೆ. ಸುದ್ದಿ ತಿಳಿದ ತಕ್ಷಣವೇ ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ.
Read also : ಕ್ರಿಸ್ಮಸ್: ಸಂಭ್ರಮ ಮತ್ತು ಶಾಂತಿಯ ಹಬ್ಬ: ಡಾ. ಡಿ. ಫ್ರಾನ್ಸಿಸ್
ತಹಸೀಲ್ದಾರ್ ಎಂ.ಪಿ.ಕವಿರಾಜ್, ಕಂದಾಯ ಅಧಿಕಾರಿ ಸಂತೋಷ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ರೈತನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ನ್ಯಾಮತಿ ಸಮುದಾಯ ಆರೋಗ್ಯ ಕೇಂದ್ರದ ಶವಾಗಾರದಲ್ಲಿ ಇರಿಸಲಾಗಿದೆ.
