ದಾವಣಗೆರೆ : ದಾವಣಗೆರೆ ಜಿಲ್ಲಾ ಮುಸ್ಲಿಂ ಯುವಕರ ವೇದಿಕೆ ವತಿಯಿಂದ ನಗರದ ತಾಜ್ ಪ್ಯಾಲೆಸ್ ನಲ್ಲಿ ಎಸ್ ಐ ಆರ್ ( S I R) ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ , ಬೇರಡೆ ರಾಜ್ಯ ಗಳಲ್ಲಿ ಎಸ್‌ಐ ಆರ್ ಪರಿಣಾಮ ನೋಡಿದ್ದೇವೆ. ತಮಿಳನಾಡಿನಲ್ಲಿ 97 ಲಕ್ಷ ಮತದಾರರನ್ನು, ಗುಜರಾತ ಮತ್ತು ಪಶ್ಚಿಮ ಬಂಗಾಳದಲ್ಲಿ 52ಲಕ್ಷ ಸಂಶಯಾಸ್ಪದ ಮತದಾರರು ಗುರುತಿಸಿದ್ದಾರೆ. ಇತರೆ ಅನ್ಯ ರಾಜ್ಯಗಳಲ್ಲಿ 2 ನೇ ಹಂತದ ಎಸ್‌ಐ ಆರ್ ಅಲ್ಲಿ ವಿಶೇಷವಾಗಿ ದಲಿತ ಮತ್ತು ಅಲ್ಪಸಂಖ್ಯಾತ, ಹಿಂದುಳಿದ ಮತದಾರರಿಗೆ ಪರಿಣಾಮ ಬೀರುವ ಸಾಧ್ಯತೆಯಿದೆ. ರಾಜ್ಯದಲ್ಲಿ ನಮ್ಮ ಅಲ್ಪಸಂಖ್ಯಾತ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ದಾವಣಗೆರೆ ನಗರದಲ್ಲಿ ಈ ಕಾರ್ಯಕ್ರಮ ಮಾಡಲಾಗಿದೆ. ಬಹಳ ಉತ್ತಮ ಕಾರ್ಯಕ್ರಮವಾಗಿದೆ ಎಂದರು.
ಈ ಬಾರಿ ದಕ್ಷಿಣದಲ್ಲಿ ಅಲ್ಪಸಂಖ್ಯಾತರಿಗೆ ಅವಕಾಶ ನೀಡಿ
ಅಲ್ಪಸಂಖ್ಯಾತ ಸಮುದಾಯ ಕಳೆದ 6 ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬೆಂಬಲಿಸಿಕೊಂಡ ಬಂದಿದೆ. ಮುಸ್ಲಿಂ ಸಮುದಾಯದ ಮತಗಳು ಹೆಚ್ಚು ಇರುವುದರಿಂದ ಈ ಬಾರಿಯ ಚುನಾವಣೆಯಲ್ಲಿ ಸಮುದಾಯಕ್ಕೆ ಅವಕಾಶ ಕೊಡಬೇಕು ಎನ್ನುವ ಮಾತಗಳು ಸಭೆಯಲ್ಲಿ ಕೇಳಿ ಬಂದವು. ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಲ್ಲಿಕಾರ್ಜುನ್ ಹಾಗೂ ಕಾಂಗ್ರೆಸ್ ಪಕ್ಷದಲ್ಲಿ ಮನವಿ ಸಲ್ಲಿಸಲು ನಿರ್ಧಾರ ಮಾಡಲಾಯಿತು.
Read also : ಬಾಲ್ಯ ವಿವಾಹ ಮತ್ತು ಶಾಲೆಯಿಂದ ಮಕ್ಕಳು ಹೊರಗುಳಿಯದಂತೆ ಕ್ರಮವಹಿಸಿ :ಅಪರ್ಣಾ ಎಂ ಕೊಳ್ಳಾ
ಇದೇ ವೇಳೆ ಮುಸ್ಲಿಂ ಸಮುದಾಯದ ಮುಖಂಡರು ತಮ್ಮ ನಡುವಿನ ಮನಸ್ತಾಪ ಬಿಟ್ಟು ಒಂದಾಗಿ ಹೋಗುವ ನಿರ್ಧಾರ ಕೈಗೊಂಡರು.
ಈ ವೇಳೆ ಪ್ರೋ. ಯೂಸುಫ್, SDPI ರಾಜ್ಯ ಸಮಿತಿ ಸದಸ್ಯ ಫಯಾಜ್ ಅಹಮದ್ ಅರಿಹಂತ್ , ವಕೀಲ ರಜ್ವಿ ಖಾನ್ ಸಾಬ್ ಎಸ್‌ಐಆರ್ (SIR) ನ ವಿಸ್ತೃತವಾಗಿ ಮಾತನಾಡಿದರು,
ಅಂಜುಮನ್ ಎ ಇಸ್ಲಾಮಿಯಾ ಅಧ್ಯಕ್ಷ ದಾದು ಸೇಠ್, ವಕ್ಪ್ ಬೋರ್ಡ್ ಮಾಜಿ ಛೇರ್ಮನ್ ಸಿರಾಜ್ ಸಾಬ್, ಮಾಜಿ ಅಧ್ಯಕ್ಷರು ದೂಡ ಅಯೂಬ್ ಪೈಲ್ವಾನ್ , ರಾಜ್ಯ ವಖ್ಫ್ ಸದಸ್ಯ ತಾಹಿರ್ ಘನಿ ಸಾಬ್, ಹಲವಾರು ಪಕ್ಷಗಳ ಪದಾಧಿಕಾರಿಗಳು, ಉಲೇಮಾಗಳು, ಮುಖಂಡರು ಮತ್ತು ಇತರರು ಉಪಸ್ಥಿತರಿದ್ದರು.
