ದಾವಣಗೆರೆ, ಜ. 7: ಪ್ರಾಥಮಿಕ ಹಂತದಲ್ಲೇ ಪೋಷಕರು ಹೆಚ್ಚಿನದಾಗಿ ಕಾಳಜಿ ವಹಿಸಿ ಯುವಕರ ಆರೋಗ್ಯ ಮತ್ತು ಉತ್ತಮ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರವಿರುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಗಳಾದ ಮಹಾವೀರ ಎಂ. ಕರೆಣ್ಣನವರ್ ಎಂದು ತಿಳಿಸಿದರು.
ಬುಧುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಬಕಾರಿ ಇಲಾಖೆ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ವತಿಯಿಂದ ದಾವಣಗೆರೆ ಜಿಲ್ಲಾ ಅಬಕಾರಿ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯವರಿಗೆ ಕೋಟ್ಪಾ-2003 ರ ಕಾಯ್ದೆಯ ಕುರಿತು ಒಂದು ದಿನದ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ಅಬಕಾರಿ ಇಲಾಖೆ ವ್ಯಾಪ್ತಿಯ ಎಲ್ಲಾ ಸನ್ನದುಗಳಲ್ಲಿ ಕೋಟ್ಪಾ-2003 ಮತ್ತು ಈ-ಸಿಗರೇಟ್ ಕಾಯ್ದೆಯನ್ನು ಪರಿಣಾಮಕಾರಿ ಅನುಷ್ಠಾನಗೊಳಿಸಲು ಹಾಗೂ ಸದೃಡ ಭಾರತ ನಿರ್ಮಾಣ ಮಾಡಲು ಇಂದಿನ ಯುವ ಪೀಳಿಗೆಯು ಮಾದಕ ವ್ಯಸನಕ್ಕೆ ಬಲಿಯಾಗಲು ತಂಬಾಕು ಉತ್ಪನ್ನಗಳ ಬಳಕೆ ಮೂಲ ಕಾರಣವಾಗಿದೆ ಎಂದು ಹೇಳಿದರು.
ಅಬಕಾರಿ ಜಂಟಿ ಆಯುಕ್ತ ಅಶ್ವಿನಿ ಬಿ.ಎಮ್. ಮಾತನಾಡಿ, ಅಬಕಾರಿ, ಕಾನೂನಾತ್ಮಕವಾಗಿ ಬಾರ್ ಅಂಡ್ ರೆಸ್ಟೋರೆಂಟ್ಗಳಲ್ಲಿ 30 ಕ್ಕಿಂತ ಹೆಚ್ಚು ಆಸನಗಳಿದ್ದರೆ ಧೂಮಪಾನ ವಲಯ ಕಡ್ಡಾಯವಾಗಿ ನಿರ್ಮಿಸಿರಬೇಕು ಹಾಗೂ ಸನ್ನದುಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿAದ ಯಾವುದೇ ರೀತಿಯ ತಂಬಾಕು ಉತ್ಪನ್ನಗಳನ್ನು ಮಾರಾಟ ಹಾಗೂ ತಂದು ಕೊಡದಂತೆ ಕ್ರಮವಹಿಸಿ ದಾವಣಗೆರೆ ಜಿಲ್ಲೆಯ ಬಾರ್ ರೆಸ್ಟೋರೆಂಟ್ಗಳು ಧೂಮಪಾನ ಮುಕ್ತಗೊಳಿಸಲು ಜಂಟಿ ಆಯುಕ್ತರ ಕರೆ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಷಣ್ಮುಖಪ್ಪ ಎಸ್. ತಂಬಾಕು ಸೇವನೆಯಿಂದ ದೇಹದ ಮೇಲಾಗುವ ಪ್ರತಿಯೊಂದು ಕ್ಯಾನ್ಸರ್ಗೂ ತಂಬಾಕು ಮೂಲ ಕಾರಣ ಭಾರತದಾದ್ಯಂತ ವರ್ಷಕ್ಕೆ 15 ಲಕ್ಷ ಜನ ತಂಬಾಕು ಸೇವನೆಯಿಂದ ಬಲಿಯಾಗುತ್ತಿದಾರೆ. ಆದ್ದರಿಂದ ಮಾಹಿತಿ ಶಿಕ್ಷಣ, ಸಂವಹನ ಮೂಲಕ ಯುವಕರನ್ನು ಜಾಗೃತಗೊಳಿಸೋಣ ಎಂದು ತಿಳಿಸಿದರು.
ತರಬೇತಿಯಲ್ಲಿ ಜಿಲ್ಲಾ ಜಾರಿ ಅಧಿಕಾರಿಗಳು ಹಾಗೂ ಕಾರ್ಯಕ್ರಮ ಅನುಷ್ಠಾನ ಅಧಿಕಾರಿ ಡಾ. ರುದ್ರಸ್ವಾಮಿ, ಅಬಕಾರಿ ಅಧೀಕ್ಷಕರದ ಸುರೇಶ್ ಪಿ.ಎಸ್, ರಾಜ್ಯ ತಂಬಾಕು ನಿಯಂತ್ರಣ ಘಟಕ ವಿಭಾಗೀಯ ಸಂಯೋಜಕ ಮಹಾಂತೇಶ್ ಬಿ. ಉಳ್ಳಾಗಡ್ಡಿ, ಜಿಲ್ಲಾ ಸಲಹೆಗಾರ-ಸತೀಶ್ ಕಲಹಾಳ್, ಸಮಾಜ ಕಾರ್ಯಕರ್ತರಾದ-ಶೈಲಾ ಶಾಮನೂರು, ಮತ್ತು ಜಿಲ್ಲೆಯ ಎಲ್ಲಾ ಅಬಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ಭಾಗವಹಿಸಿದ್ದರು.
