ದಾವಣಗೆರೆ, ಜ.23: ಗಣಿತವು ಕೇವಲ ಪಠ್ಯಕ್ಕೆ ಸೀಮಿತವಲ್ಲ, ಅದು ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಹಾಸುಹೊಕ್ಕಾಗಿದೆ. ವಿದ್ಯಾರ್ಥಿಗಳು ಗಣಿತದ ಮೂಲಕ ಸಮಸ್ಯೆ ಪರಿಹಾರ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು ಎಂದು ದಾವಣಗೆರೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಹಾವೀರ ಎಂ. ಕರೇಣ್ಣವರ ಸಲಹೆ ನೀಡಿದರು.
ಅಮೃತ ವಿದ್ಯಾಲಯದಲ್ಲಿ ಶುಕ್ರವಾರ ಗಣಿತ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.
ವ್ಯವಹಾರ, ವಿದ್ಯಾಭ್ಯಾಸ, ಕಟ್ಟಡ ನಿರ್ಮಾಣ, ಕ್ರೀಡೆ ಹಾಗೂ ವೈಯಕ್ತಿಕ ಬೆಳವಣಿಗೆಗೆ ಗಣಿತ ಅತಿ ಅಗತ್ಯ. ಜೀವನ ನಿರ್ವಹಿಸಲು, ಕುಟುಂಬವನ್ನು ನಡೆಸಲು ಅಥವಾ ದೇಶವನ್ನು ಮುನ್ನಡೆಸಲು ಸರಿಯಾದ ‘ಲೆಕ್ಕಾಚಾರ’ ಇರಲೇಬೇಕು. ಆಗ ಮಾತ್ರ ಸುಗಮ ಜೀವನ ಮತ್ತು ಸದೃಢ ಅರ್ಥವ್ಯವಸ್ಥೆ ಸಾಧ್ಯ” ಎಂದರು.
Read also : ಪಾಲಿಕೆಯಿಂದ ಕುಂದವಾಡ ಕೆರೆಯಲ್ಲಿ ಸ್ವಚ್ಚತಾ ಕಾರ್ಯಕ್ರಮ
ಈ ಪ್ರದರ್ಶನದಲ್ಲಿ ಶಾಲೆಯ ಸುಮಾರು 1500 ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು.
ವಿದ್ಯಾರ್ಥಿಗಳು ಸಿದ್ಧಪಡಿಸಿದ ಗಣಿತದ ವಿವಿಧ ಮಾದರಿಗಳು,ರೇಖಾಗಣಿತದ ವಿನ್ಯಾಸಗಳು ಮತ್ತು ತಾರ್ಕಿಕ ಆಟಗಳು ನೆರೆದಿದ್ದವರ ಗಮನ ಸೆಳೆದವು. ಮಕ್ಕಳ ಜ್ಞಾನ ಮತ್ತು ಸೃಜನಶೀಲತೆಯನ್ನು ಕಂಡು ಅತಿಥಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಲೆಯ ಪ್ರಾಂಶುಪಾಲರಾದ ಪ್ರತಿಭಾ ಎನ್. ಅವರು ವಹಿಸಿದ್ದರು.
ವಿಶೇಷ ಅತಿಥಿಯಾಗಿ ಪಿಯು ಕಾಲೇಜಿನ ಪ್ರಾಂಶುಪಾಲ ಎನ್.ಸಿ. ವಿವೇಕ್ ಹಾಗೂ ಶಾಲೆಯ ಉಪಪ್ರಾಂಶುಪಾಲ ಪ್ರಥೀಕ್ ಎಚ್.ಎಸ್. ಉಪಸ್ಥಿತರಿದ್ದು ವಿದ್ಯಾರ್ಥಿಗಳನ್ನು ಉತ್ತೇಜಿಸಿದರು.
