ಹೃದಯದ ಮೂಲಕವೇ ಶರೀರದ ಎಲ್ಲಾ ಧಮನಿಗಳಿಗೆ,ನರನಾಡಿಗಳಿಗೆ ರಕ್ತ ಸರಬರಾಜಾಗುತ್ತದೆ. ಒಂದು ವೇಳೆ ಮನುಷ್ಯ ಮೂಕನಾಗಿದ್ದರೆ ಅಲ್ಲಿ ಅವನ ಹೃದಯದ ಧ್ವನಿ ಅತ್ಯಂತ ಮಹತ್ವ ಪೂರ್ಣದ್ದಾಗು ತ್ತದೆ.
ಹೀಗೆಂದು ಹೇಳಿದ ಅಂಬೇಡ್ಕರ್,ಮಾನವನ ಜ್ಞಾನ ಮತ್ತು ತತ್ವಶಾಸ್ತ್ರದ ಕೇಂದ್ರವೇ ಹೃದಯವೆಂದು ಪ್ರತಿಪಾದಿಸಿ ತಮ್ಮ ಪತ್ರಿಕೆ ‘ಮೂಕನಾಯಕ’ದ ಅಸ್ತಿತ್ವವನ್ನು ದಾಖಲಿಸಿದ್ದಾರೆ.
ಒಬ್ಬ ಪತ್ರಕರ್ತನ ಪತ್ರಿಕೋದ್ಯಮದ ಉದ್ದೇಶ,ರಾಷ್ಟ್ರದ ಪ್ರಗತಿಯೇ ಆಗಿರಬೇಕು.ಅದಕ್ಕೂ ಮೊದಲು ವ್ಯಕ್ತಿಯ ಏಳಿಗೆ ಯಾಗಬೇಕು.ಮುಖ್ಯವಾಗಿ ಯಾವ ವ್ಯಕ್ತಿ ಮತ್ತು ಸಮಾಜದ ಅವನತಿಯಿಂದಾಗಿ ರಾಷ್ಟ್ರದ ಅವನತಿಯಾಗುತ್ತಿದೆಯೋ ಮೊದಲು ಅದರ ಏಳಿಗೆಯಾಗಬೇಕು ಎಂದು ಬಯಸಿದರು.
ಬಹಿಷ್ಕೃತ ಜನರ ಮೇಲಾಗುತ್ತಿರುವ ದೌರ್ಜನ್ಯಗಳು ನಡೆಯದಂತೆ ನೋಡಿಕೊಳ್ಳುವ ಉಪಾಯಗಳನ್ನು ಚರ್ಚಿಸುವ ಮತ್ತು ಉನ್ನತಿಯ ಮಾರ್ಗಗಳ ಹುಡುಕಾಟಕ್ಕಾಗಿ ಮತ್ತು ಆ ಕಾಲದ ಬಾಂಬೆ ಕ್ರಾನಿಕಲ್, ಹರಿಜನ, ಕೇಸರಿ, ಸುಬೋಧ, ವಿಜಯಿ ಮರಾಠಗಳಂತಹ ಪತ್ರಿಕೆಗಳಲ್ಲಿ ಅಸ್ಪೃಶ್ಯರ ಚಿಂತಾಜನಕ ಸ್ಥಿತಿಗಳನ್ನು ಚರ್ಚಿಸಲು ಇರುವ ಕೊರತೆಯನ್ನು ನೀಗಿಸಲು ಖಾಲಿ ಬಿಟ್ಟಿರುವ ಜಾಗಕ್ಕಾಗಿಯೆ ಅಂಬೇಡ್ಕರರು, 1920 ಜನವರಿ ತಿಂಗಳಿನಲ್ಲಿ ‘ಮೂಕನಾಯಕ’ಪತ್ರಿಕೆ ಪ್ರಾರಂಭಸಿದ್ದು,ಐತಿಹಾಸಿಕವಾದ ನಿರ್ಧಾರವಾಗಿತ್ತು.
ಇದು ದಲಿತ ಲೋಕದ ಮೊಟ್ಟಮೊದಲ ಪಾಕ್ಷಿಕವಾದರೂ ಮೂಕನಾಯಕನ ಆಯುಷ್ಯ ಕೇವಲ ಮೂರೇ ವರ್ಷದ್ದಾದರೂ ಅದು ದಲಿತ ಚಿಂತನೆಗೆ ವೇದಿಕೆ ಒದಗಿಸಿದ ಮಹತ್ವ ಅಪೂರ್ವ ವಾದುದು. ಅದೊಂದು ಚಳುವಳಿಯ ಭಾಗವೇ ಆಗಿಹೋಗಿತ್ತು.
ಈಗ ನಾನು ಸಂಕೋಚ ಪಟ್ಟುಕೊಂಡು ನಾನೇನು ಮಾಡಲಿ,
ನಾನೀಗ ದನಿಯೆತ್ತದೇ ಉಳಿಗಾಲವಿಲ್ಲ .
ದನಿಯಿಲ್ಲದವರ ಪರವಾಗಿ ಈ ಲೋಕದಲ್ಲಿ ಯಾರೂ ದನಿಯೆತ್ತುವುದಿಲ್ಲ.
ಇದು ತಿಳಿದೂ ತಿಳಿದೂ ಮೌನವಾಗಿರುವುದರಲ್ಲಿ ಯಾವ ಅರ್ಥವೂ ಇಲ್ಲ.
ಹೀಗೆಂದು ಹೇಳಿದ ಸಂತ ತುಕಾರಾಮನ ಅಭಂಗದ ಸಾಲುಗಳೇ ಬಹುಷಃ ಅಂಬೇಡ್ಕರರನ್ನು ಪತ್ರಿಕೋದ್ಯಮಕ್ಕೆ ಇಳಿಸಿ ದವೇನೋ. ಅಂಬೇಡ್ಕರ್ ಗೆ ಎರಡೂ ಕೈಯಿಂದ ಬರೆಯುವ ಹವ್ಯಾಸವಿತ್ತು ಎನ್ನುವ ಕುತೂಹಲಕರ ಮಾಹಿತಿಯನ್ನು ತಿಳಿಸುವ ಲೇಖಕರು ,ಅಂಬೇಡ್ಕರ್ ಎನ್ನುವ ಸವ್ಯಸಾಚಿ, ಮೂಕನಾಯಕನ ಸಂಪಾದಕೀಯ ಬರೆಹಗಳ ಮೂಲಕ ತನ್ನ ಮಕ್ಕಳಿಗೆ ಬುದ್ಧಿವಾದ ಹೇಳುವಂತೆ ಅಸ್ಪೃಶ್ಯ ಮತ್ತು ಬಹಿಷ್ಕೃತ ಸಹೋದರರಿಗೆ ಬರೆದ ಹದಿನಾಲ್ಕು ಬರೆಹಗಳಿವೆ.
Read also : ದಿನಮಾನ-ಪುಸ್ತಕ ವಿಮರ್ಶೆ|ಗೌರವಾನ್ವಿತ ಮೂರ್ಖರು: ನರವಿಕಲ್ಪಕ್ಕೆ ತುತ್ತಾದ ದೇಶವೊಂದರ ವಕ್ರ ರೇಖೆಗಳ ಅನಾವರಣ
ಚಾರಿತ್ರಿಕವಾದ ಸಂಪಾದಕೀಯಗಳ ಸಂಕಲನವನ್ನು ಕನ್ನಡಕ್ಕೆ ಕೊಡಮಾಡಿದ ಲೇಖಕರಾದ ರೇಣುಕಾ ನಿಡಗುಂದಿ ಮತ್ತು ರಮೇಶ್ ಅರೋಲಿಯವರಿಗೆ ನಾಡು ಕೃತಜ್ಞವಾಗಿರುತ್ತದೆ.
ಮಾತಿಲ್ಲದವರ ಮರುದನಿಯಾಗಿ .. .ಮೂಕನಾಯಕ
ಹಿಂದಿ ಮೂಲ: ಶ್ಯೊರಾಜ್ ಸಿಂಗ್ ಬೆಚೈನ್
ಅನುವಾದ : ರೇಣುಕಾ ನಿಡಗುಂದಿ
ರಮೇಶ ಅರೋಲಿ
ಅಹರ್ನಿಶಿ ಪ್ರಕಾಶನ , ಶಿವಮೊಗ್ಗ.
