ಬೆಳಗಾವಿ : ರಾಷ್ಟ್ರೀಯ ಪ್ರತಿಷ್ಠಿತ ಸಂಸ್ಥೆಯಾದ ರಹೆಮಾನ್ ಫೌಂಡೇಶನ್ ನ ಮದರ್ಸಾ ಅರೇಬಿಯಾ ನೋಮೊನಿಯ ಶಾಲೆಯ ಮೈದಾನದಲ್ಲಿ ಸಂಸ್ಥೆಯ ಅಧ್ಯಕ್ಷ ಮೊಹಮ್ಮದ್ ಹನೀಫ್ ಸಿದ್ದಿಕಿ ಅವರ ನೇತೃತ್ವದಲ್ಲಿ 77ನೇ ಗಣರಾಜ್ಯೋತ್ಸವದ ಧ್ವಜಾರೋಹಣ ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಕವಿವಾಣಿ ಸಾಹಿತ್ಯ ಪರಿಷತ್ತು ರಾಜ್ಯ ಘಟಕ ಬೆಂಗಳೂರು ಹಾಗೂ ಜಿಲ್ಲಾ ಘಟಕ ಬೆಳಗಾವಿ ವತಿಯಿಂದ ಅತ್ಯುತ್ತಮ ಸಮಾಜ ಸೇವೆಗಾಗಿ ನೀಡುತ್ತಿರುವ ಸೇವಾ ರತ್ನ ಪ್ರಶಸ್ತಿಯನ್ನು ಮೊಹಮ್ಮದ್ ಹನೀಫ್ ಸಿದ್ದಿಕಿ ಅವರಿಗೆ ಗೌರವದಿಂದ ಪ್ರಶಸ್ತಿ ಪತ್ರ ಮೊಮೆಂಟ್ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಮುಖಂಡರು ಮದರ್ಸಾ ದ ಉಸ್ತಾದರವರು ಹಾಗೂ ಶಾಲೆಯ ಎಲ್ಲ ಶಿಕ್ಷಕ – ಶಿಕ್ಷಕಿರಿಯರು ಹಾಗೂ ಮುದ್ದು ಮಕ್ಕಳು ಹಾಜರಿದ್ದರು.
ಕಾರ್ಯಕ್ರಮ ನಂತರ ಮಕ್ಕಳಿಗೆ ಸಿಹಿ ಹಂಚಲಾಯಿತು.
