ದಾವಣಗೆರೆ : ಭಾರತದಲ್ಲಿ ಲಕ್ಷಾಂತರ ಜನರು ಸಂಧಿವಾತದಿಂದ ಬಳಲುತ್ತಿದ್ದಾರೆ. ಈ ಕಾಯಿಲೆಗೆ ವಯಸ್ಸಿನ ಭೇದವಿಲ್ಲ. ಬಹುಪಾಲು ಜನರು ಇದನ್ನು ವಯಸ್ಸಾದಾಗ ಬರುವ ಸಾಮಾನ್ಯ ನೋವು ಎಂದು ಪರಿಗಣಿಸಿ ತಡವಾಗಿ ಚಿಕಿತ್ಸೆ ಪಡೆಯುವುದರಿಂದ ಸಮಸ್ಯೆ ಗಂಭೀರವಾಗುತ್ತದೆ ಎಂದು ಜೆಜೆಎಂ ವೈದ್ಯಕೀಯ ಕಾಲೇಜಿನ ಮೆಡಿಸಿನನ್ವಿಭಾಗದ ಸಹಾಯಕ ಪ್ರಾಧ್ಯಪಕರಾದ ಡಾ.ದೀಪ್ತಿ ಅಗರವಾಲ್ ತಿಳಿಸಿದ್ದಾರೆ.
ನಗರದ ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಮತ್ತು ಸಂಶೋಧನ ಕೇಂದ್ರ ಸಭಾಂಗಣದಲ್ಲಿ ವಿವೇಕ್ ಪೋಷಕರ ಆರೋಗ್ಯ ಕಾರ್ಯಾಗಾರದ ಅಡಿಯಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಸಂಧಿವಾತ –ಕಾರಣಗಳು , ಚಿಕಿತ್ಸೆ ಮತ್ತು ತಡೆಗಟ್ಟುವಿಕೆ ಎಂಬ ವಿಷಯ ಕುರಿತು ಮಾತನಾಡಿದರು.
ನಮ್ಮ ದೇಹದ ಪ್ರತಿಯೊಂದು ಚಲೆನೆಗೆ ಆಧಾರವೇ ಸಂಧಿಗಳು, ಮಾನವನ ದೇಹದಲ್ಲಿ ಸುಮಾರು 360 ಸಂಧಿಗಳು ಇರುತ್ತವೆ. ಸದೃಡವಾದ ಶರೀರಕ್ಕೆ ಆರೋಗ್ಯವಾದ ಸಂಧಿಗಳು ಅತಿ ಅವಶ್ಯಕ. ಸಂಧಿವಾತ ಎಂದರೆ ದೇಹದ ಸಂಧಿಗಳಲ್ಲಿ ಉರಿಯೂತ, ನೋವು, ಊತ ಮತ್ತು ಗಟ್ಟಿತನ ಉಂಟಾಗುವ ಕಾಯಿಲೆಗಳ ಗುಂಪು. ಸಂಧಿವಾತ ಬಂದಾಗ ಈ ಚಲನೆಗಳಿಗೆ ಅಡಚಣೆ ಉಂಟಾ ಗುತ್ತದೆ. ಸಂಧಿವಾತ ಒಂದೇ ರೀತಿಯ ಕಾಯಿಲೆಯಲ್ಲ; ಇದಕ್ಕೆ ಹಲವು ರೂಪಗಳಿವೆ. ಸಂಧಿವಾತವು ರೂಮಟಾ ಲೋಜಿಕಲ್ ಅಥವಾ ಅಟೋ-ಇಮ್ಮೂನ್ (Rheumatologice of autoimmune) ಕಾಯಿಲೆ ಗಳಲ್ಲಿನ ಸಾಮಾನ್ಯ ಲಕ್ಷಣಗಳಲ್ಲಿ ಒಂದಾಗಿದೆ ಎಂದರು.
Autoimmune ಕಾಯಿಲೆಗಳಲ್ಲಿ ನಮ್ಮದೇ ರೋಗನಿರೋಧಕ ವ್ಯವಸ್ಥೆ (immune system) ದೇಹವನ್ನು ರಕ್ಷಿಸುವ ಬದಲು ದೇಹದ . Rheumatoid arthritis, Lupus, Psoriatic arthritis ಇವು autoimmune ಸಂಧಿವಾತಗಳ ಉದಾಹರಣೆಗಳು. ಇವುಗಳಲ್ಲಿ ಸಂಧಿಗಳ ಜೊತೆಗೆ ಕಣ್ಣು, ಚರ್ಮ, ಶ್ವಾಸಕೋಶ, ಮೂತ್ರಪಿಂಡಗಳೂ ಪರಿಣಾಮಗೊಳ್ಳಬಹುದು ಎಂದು ಮಾಹಿತಿ ನೀಡಿದರು.
ಸಂಧಿವಾತದ ಸಾಮನ್ಯ ಲಕ್ಷಣಗಳು
- ಧೀರ್ಘಾವಧಿ ಸಂಧಿ ನೋವು ಅಥವಾ ಊತ
- ಬೆಳಿಗ್ಗೆ ಹೊತ್ತು ಕೀಲುಗಳು ಮತ್ತು ಮಾಂಸ ಖಂಡಗಳ ಬಿಗಿತ
- ಬೆನ್ನು, ಕುತ್ತಿಗೆ, ಕೆಳಬೆನ್ನು ನೋವು : ವಿಶೇಷವಾಗಿ ಬೆಳಿಗ್ಗೆ ಹೆಚ್ಚು
- ಮಾಂಸಖಂಡಗಳ (ಸ್ನಾಯು) ನೋವು ಅಥವಾ ದುರ್ಬಲತೆ
- ಸಂಧಿಗಳ ವಕ್ರತೆಗಳು ಅಥವಾ ಚಲನೆ ಕಡಿಮೆಯಾಗಿರುವುದು
- ಚರ್ಮ ಉರಿ ಅಥವಾ ಚರ್ಮದ ಮೇಲೆ ಗುಳ್ಳೆಗಳು
- ಬಾಯಿ ಅಥವಾ ಲೈಂಗಿಕ ಅಂಗಗಳ ಮೇಲೆ ಮತ್ತೆ ಮತ್ತೆ ಹುಣ್ಣು (ಅಲ್ಸರ್) ಆಗುವುದು
- ಸೋಂಕು ಇಲ್ಲದೆ ಕಣ್ಣು ಕೆಂಪಾಗುವುದು ಅಥವಾ ನೋವಾಗುವುದು
- ತಣ್ಣನೆಯ ನೀರು ಅಥವಾ ವಾತಾವರಣದಲ್ಲಿ ಬೆರಳು ಬಿಳಿಯಾಗಿ ಅಥವಾ ನೀಲವಾಗಿ ಮಾರ್ಪಡುವುದು
- ಧೀರ್ಘಾವಧಿ ಜ್ವರ, ತೂಕ ಇಳಿಕೆಯಾಗುವುದು, ಅಥವಾ ಕೂದಲು ಉದುರುವಿಕೆ
- ಕುಟುಂಬದ ಇತರೆ ಸದಸ್ಯರಲ್ಲಿ ಸಂಧಿವಾತ ಅಥವಾ ಆಟೋ ಇಮ್ಯೂನ್ ಕಾಯಿಲೆಗಳು
- ಬಾಯಿ ಒಣಗುವುದು ಅಥವಾ ಕಣ್ಣಿನಲ್ಲಿ ಏನಾದರು ಇದೆ ಎಂಬ ಭಾವನೆ (ಫಾರಿನ್ ಬಾಡಿ ಸೆನ್ಸೆಷನ್)
ಸಂಧಿವಾತ ಹಾಗೂ ರೋಗಗಳು ಏಕೆ ಉಂಟಾಗುತ್ತವೆ? ರೋಗಗಳು ದೇಹದ ಸ್ವಭಾವ (host), ವಂಶದ ಲಕ್ಷಣಗಳು (genetic factors), ಮತ್ತು ಪರಿಸರದ ಪ್ರಭಾವ (environmental factors) ಪರಸ್ಪರ ಕ್ರಿಯೆಯ ಮೂಲಕ ಉಂಟಾಗುತ್ತವೆ. ಯಾವುದೇ ಒಂದೇ ಕಾರಣದಿಂದ ಈ ರೋಗವು ಉಂಟಾಗುವುದಿಲ್ಲ, ಹಾಗಾಗಿ ಯಾರಿಗೆ ಬರಲಿದೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ ಎಂದರು.
ಸರಳವಾಗಿ ಹೇಳುವುದಾದರೆ, ಒಬ್ಬ ಪೋಷಕನು ಈ ರೋಗದಿಂದ ಬಾಧಿತರಾದರೆ ಮಕ್ಕಳಿಗೆ ಸಾಧ್ಯತೆಯು ಹೆಚ್ಚಾಗಿರಬಹುದು, ಆದರೆ ಖಚಿತವಾಗಿಯೂ ಬರಬೇಕೆಂದು ಎಂದಿಗೂ ಇಲ್ಲ. ನಿಯಮಿತ ವೈದ್ಯ ಕೀಯ ತಪಾಸಣೆ ಮತ್ತು ಆರೋಗ್ಯಕರ ಜೀವನ ಶೈಲಿಯನ್ನು ಅನುಸರಿಸುವುದು ಅವಶ್ಯಕ. ಸಂಧಿವಾತವನ್ನು ಸರಿಯಾದ ಸಮಯಕ್ಕೆ ಪತ್ತೆಹಚ್ಚಿ ಚಿಕಿತ್ಸೆ ನೀಡದಿದ್ದರೆ, ಸಂಧಿಗಳು ಶಾಶ್ವತವಾಗಿ ಹಾನಿಗೊಳಗಾಗ ಬಹುದು. ಕೈಕಾಲುಗಳ ವಿಕೃತಿ, ದಿನನಿತ್ಯದ ಕೆಲಸಗಳಲ್ಲಿ ಅಸಹಾಯಕತೆ, ಕೆಲಸ ಮಾಡುವ ಸಾಮರ್ಥ್ಯ ಕಳೆದುಕೊಳ್ಳುವ ಸಾಧ್ಯತೆ ಇದೆ. ಆದರೆ ಪ್ರಾರಂಭಿಕ ಹಂತದಲ್ಲೇ ಚಿಕಿತ್ಸೆ ಆರಂಭಿಸಿದರೆ ನೋವನ್ನು ನಿಯಂತ್ರಿಸಬಹುದು, ಸಂಧಿ ವಿಕೃತಿಯನ್ನು ತಡೆಯಬಹುದು ಮತ್ತು ಉತ್ತಮ ಜೀವನಮಟ್ಟವನ್ನು ಕಾಪಾಡಿಕೊಳ್ಳಬಹುದು ಎಂದು ವಿವರಿಸಿದರು.
ಸಂಧಿವಾತಕ್ಕೆ ಶಾಶ್ವತ ಚಿಕಿತ್ಸೆ ಇದೆಯೇ?
ಈ ಕಾಯಿಲೆಗಳನ್ನು ಸಂಪೂರ್ಣವಾಗಿ “ಗುಣಪಡಿಸುವುದು” ಎಂದರೆ ಕಷ್ಟಕರ. ಆದರೆ ಸರಿಯಾದ ಔಷಧೋಪಚಾರದಿಂದ ಅವುಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು. ಚಿಕಿತ್ಸೆ ಮೂಲಕ ರೋಗ ನಿಯಂತ್ರಣ (remission) ಸಾಧಿಸಿದ ನಂತರ, ಸಾಮಾನ್ಯವಾಗಿ 3-5 ವರ್ಷಗಳಲ್ಲಿ ನಿಧಾನವಾಗಿ ಔಷಧಗಳ ಪ್ರಮಾಣವನ್ನು ಕಡಿಮೆ ಮಾಡುವ ಪ್ರಯತ್ನ ಮಾಡಲಾಗುತ್ತದೆ. ವೈದ್ಯರ ಮೇಲ್ವಿ ಚಾರಣೆ ಯಲ್ಲೇ. ಬಹುಪಾಲು ಸಂಧಿವಾತಗಳು ಸಂಪೂರ್ಣವಾಗಿ ಒಂದೇ ಬಾರಿ ಗುಣವಾಗುವ” ಕಾಯಿಲೆಗಳಲ್ಲ.ಆದರೆ ಸರಿಯಾದ ಮತ್ತು ಸಮಯಕ್ಕೆ ಚಿಕಿತ್ಸೆ ಪಡೆದರೆ ಅವುಗಳನ್ನು ಬಹಳ ಪರಿಣಾಮ ಕಾರಿಯಾಗಿ ನಿಯಂತ್ರಿಸಬಹುದು. Rheumatoid arthritis ಮುಂತಾದ autoimmune ಕಾಯಿಲೆಗಳಲ್ಲಿ, ಆರಂಭಿಕ ಹಂತದಲ್ಲೇ ಚಿಕಿತ್ಸೆ ನೀಡಿದರೆ ನೋವು, ಊತ ಮತ್ತು ಸಂಧಿ ಹಾನಿಯನ್ನು ತಡೆಯಲು ಸಾಧ್ಯ. ಅನೇಕ ರೋಗಿಗಳು ಸಾಮಾನ್ಯ ಜೀವನ ನಡೆಸುತ್ತಿದ್ದಾರೆ. ಸೂಕ್ತ ಸಮಯಕ್ಕೆ ಚಿಕಿತ್ಸೆ ಪಡೆದ ವ್ಯಕ್ತಿಗಳು ಆರೋಗ್ಯವಾದ ಜೀವನ ನಡೆಸುತ್ತಾರೆ ಎಂದು ತಿಳಿಸಿದರು.
ಅಸ್ಥಿ ಸಂಧಿವಾತ, ರುಮಟುಯ್ಡ್ ಸಂಧಿವಾತ, ಗೌಟ್, ಆಂಕೈಲೋಸಿಂಗ್ ಸ್ಪಾಂಡಿಲೈಟಿಸ್ , ಸೋರಿಯಾಟಿಕ್ ಸಂಧಿವಾತ ಸೇರಿದಂತೆ 100 ಕ್ಕೂ ಹೆಚ್ಚು ವಿವಿಧ ರೀತಿಯ ಸಂಧಿವಾತಗಳಿವೆ ಎಂದು ಮಾಹಿತಿ ನೀಡಿದರು.
ಔಷಧೋಪಚಾರದ ಜೊತೆಗೆ ಜೀವನಶೈಲಿಯೂ ಬಹಳ ಮುಖ್ಯ
ನಿಯಮಿತ ಲಘು ವ್ಯಾಯಾಮ (ನಡೆಯುವುದು, stretching) ತೂಕ ನಿಯಂತ್ರಣ (ಅಧಿಕ ತೂಕ ಸಂಧಿಗಳ ಮೇಲೆ ಒತ್ತಡ ಹೆಚ್ಚಿಸುತ್ತದೆ) ಸಮತೋಲನ ಆಹಾರ, ಧೂಮಪಾನ ಮತ್ತು ಮದ್ಯಪಾನ ತ್ಯಜಿಸು ವುದು ವೈದ್ಯರ ಸಲಹೆ ಇಲ್ಲದೆ ನೋವು ನಾಶಕ ಮಾತ್ರೆಗಳನ್ನು (Painkiller) ಧೀರ್ಘಕಾಲ ಸೇವಿಸಬಾರದು, ಸಂಧಿವಾತ ‘ಸಹಿಸಿ ಕೊಳ್ಳಲೇಬೇಕಾದ ನೋವು” ಅಲ್ಲ. ಇದು ವೈದ್ಯಕೀಯ ಚಿಕಿತ್ಸೆಯಿಂದ ನಿಯಂತ್ರಿ ಸಬಹುದಾದ ಕಾಯಿಲೆ. ಸಂಧಿಗಳ ನೋವು ಅಥವಾ ಗಟ್ಟಿತನ ದೀರ್ಘಕಾಲ ಮುಂದುವರಿದರೆ ತಕ್ಷಣ ತಜ್ಞ ವೈದ್ಯರನ್ನು ಸಂಪರ್ಕಿಸುವುದು ಅತ್ಯಂತ ಮುಖ್ಯ. ಸಮಯಕ್ಕೆ ಚಿಕಿತ್ಸೆ ಪಡೆಯುವುದೇ ಚಲನೆಯುಕ್ತ, ಸ್ವಾವಲಂಬಿ ಜೀವನದ ಗುಟ್ಟು ಎಂದರು.
Read also : ಕುಷ್ಠರೋಗ ಮುಕ್ತ ಜಿಲ್ಲೆಯನ್ನಾಗಿಸಲು ಅಗತ್ಯ ಕ್ರಮವಹಿಸಿ : ಸಿಇಒ ಗಿತ್ತೆ ಮಾಧವ ವಿಠಲರಾವ್
ಮಕ್ಕಳ ಆಸ್ಪತ್ರೆಯ ನಿರ್ದೇಶಕರಾದ ಡಾ. ಜಿ. ಗುರುಪ್ರಸಾದ್, ಆಸ್ಪತ್ರೆಯ ವ್ಯವಸ್ಥಾಪಕರಾದ ಸಿದ್ದೇಶರ ಗುಬ್ಬಿ, ಡಾ. ಕೌಜಲಗಿ, ಡಾ. ಮೃತ್ಯುಂಜಯ, ಡಾ. ರೇವಪ್ಪ, ಡಾ. ನಾಗಮಣಿ ಅಗರವಾಲ್, ಜಯದೇವಪ್ಪ, ಪೋಷಕರು, ನರ್ಸಿಂಗ್ ವಿದ್ಯಾರ್ಥಿಗಳು ಹಾಗೂ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.
