ದಾವಣಗೆರೆ : ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಅಂಗವಾಗಿ ಜಿಲ್ಲಾ ಪೊಲೀಸ್ ಹಾಗೂ ಎಸ್ ಎಸ್ ಕೇರ್ ಟ್ರಸ್ಟ್ ವತಿಯಿಂದ ಡಿಎಆರ್ ಆವರಣದಲ್ಲಿ ಪೊಲೀಸ್ ಅಧಿಕಾರಿ ಸಿಬ್ಬಂದಿಗಳಿಗೆ ಹಾಗೂ ಆಟೋ,ಬಸ್, ಕಾರ್ ಚಾಲಕರುಗಳಿಗೆ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಎಸ್ಪಿ ಉಮಾ ಪ್ರಶಾಂತ್ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ಉತ್ತಮ ಆರೋಗ್ಯ ಪ್ರತಿಯೊಬ್ಬ ವ್ಯಕ್ತಿಗೂ ಅವಶ್ಯಕ, ಅದರಲ್ಲೂ ವಾಹನ ಚಾಲಕರು ಕಡ್ಡಾಯವಾಗಿ ಉತ್ತಮ ಆರೋಗ್ಯ ಕಾಪಡಿಕೊಳ್ಳಬೇಕು. ಉತ್ತಮ ಚಾಲಕನಾಗಲು ಉತ್ತಮ ಆರೋಗ್ಯ ಅವಶ್ಯಕ ಎಂದು ತಿಳಿಸಿದರು.
ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಅಂಗವಾಗಿ ಜಿಲ್ಲಾ ಪೊಲೀಸ್ ಹಾಗೂ ಎಸ್ ಎಸ್ ಕೇರ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿರುವ ಈ ಆರೋಗ್ಯ ತಪಾಸಣಾ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ತಮ್ಮ ಆರೋಗ್ಯವನ್ನು ತಪಾಸಣೆ ಮಾಡಿಕೊಳ್ಳಲು ತಿಳಿಸಿದರು.
ಆರೋಗ್ಯ ತಪಾಸಣಾ ಶಿಬಿರದಲ್ಲಿ ಬಿ ಪಿ & ಶುಗರ್ ತಪಾಸಣೆ, ಇಸಿಜಿ, ಕಣ್ಣು ಪರೀಕ್ಷೆ, ಬಿಎಂಐ, ಚರ್ಮ ಕಾಯಿಲೆ ಸೇರಿದಂತೆ ಇತರೆ ತಪಾಸಣೆಗಳು ಒಳಗೊಂಡಿದ್ದವು.
Read also : ಸಂಧಿವಾತ ನಿರ್ಲಕ್ಷ್ಯಸಿದರೆ ಗಂಭೀರ ಸಮಸ್ಯೆ: ಡಾ.ದೀಪ್ತಿ ಅಗರವಾಲ್
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ ಹೆಗಡೆ ರವರು ಡಿವೈಎಸ್ಪಿಗಳಾದ ಪಿ ಬಿ ಪ್ರಕಾಶ್, ಶರಣಬಸವೇಶ್ವರ ಬಿ, ಸಂಚಾರ ವೃತ್ತ ನಿರೀಕ್ಷಕ ಮಂಜುನಾಥ , ಡಾ. ಧರಣಿಕುಮಾರ್ ಡಾ. ಅನುರೂಪ, ಡಾ. ದಿವ್ಯ ಹಾಗೂ ಸಂಚಾರ ಪಿ ಎಸ್ಗಳಾದ ಶೈಲಜಾ, ಪ್ರಮೀಳಮ್ಮ, ಮಹಾದೇವ ಭತ್ತೆ, ಶಕುಂತಲಾ,ಜಯಶೀಲ ರವರು ಸೇರಿದಂತೆ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು, ಎಸ್ ಎಸ್ ಕೇರ್ ಟ್ರಸ್ಟ್ ನ ಅಧಿಕಾರಿ ಸಿಬ್ಬಂದಿಗಳು, ವೈದ್ಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
