Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ಮಾಧ್ಯಮ ಸಮೂಹವು ವಿಶ್ವಕ್ಕೆ ತನ್ನದೇ ಆದ ಕೊಡುಗೆ ನೀಡಿದೆ : ಆದಿಜಾಂಭವ ಮಠದ ಷಡಕ್ಷರಿ ಮುನಿಸ್ವಾಮಿ
ತಾಜಾ ಸುದ್ದಿ

ಮಾಧ್ಯಮ ಸಮೂಹವು ವಿಶ್ವಕ್ಕೆ ತನ್ನದೇ ಆದ ಕೊಡುಗೆ ನೀಡಿದೆ : ಆದಿಜಾಂಭವ ಮಠದ ಷಡಕ್ಷರಿ ಮುನಿಸ್ವಾಮಿ

Dinamaana Kannada News
Last updated: February 11, 2026 4:08 pm
Dinamaana Kannada News
Share
ದಾವಣಗೆರೆ
SHARE
ಜಗಳೂರು : ಸಮಾಜವನ್ನು ತಿದ್ದುವಂತಹ ಕೆಲಸವನ್ನು ಮಾಧ್ಯಮ ಸಮೂಹವು ಮಾಡುತ್ತಿದ್ದು ಈ ಸಂಘದ ಮೂಲಕ ಅಭಿವೃದ್ಧಿಯಾಗಬೇಕಾಗಿದೆ ಎಂದು ಹಿರಿಯೂರು ಆದಿಜಾಂಭವ ಮಠದ ಷಡಕ್ಷರಿ ಮುನಿಸ್ವಾಮಿಗಳು  ಅಭಿಪ್ರಾಯ ವ್ಯಕ್ತಪಡಿಸಿದರು.
ಬುಧವಾರ ಪಟ್ಟಣದ ವಾಲ್ಮೀಕಿ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಸಂವಿಧಾನದ 3 ಅಂಗಗಳ ಕಾರ್ಯ ವೈಖರಿಗಳನ್ನು ಸಮಾಜಕ್ಕೆ ತಿಳಿಸುವಂತಹ ಕೆಲಸವನ್ನು ಮಾಧ್ಯಮ ಸಮೂಹವು ವಿಶ್ವಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ ದಾರಿ ತಪ್ಪಿದವರನ್ನು ಎಚ್ಚರಿಸುವ ಕಾರ್ಯ ಮಾಡುತ್ತಿದೆ ಪತ್ರಕರ್ತರು ಬುದ್ದಿವಂತರಾಗಿದ್ದಾರೆ ಆದರೆ ಬಂಡವಾಳವಿಲ್ಲದೆ ಸಂಕಷ್ಟದಲ್ಲಿದ್ದು ಸರ್ಕಾರ ನೆರವಾಗಿ ಪ್ರೋತ್ಸಾಹಿಸಬೇಕಿದೆ ಎಂದು ಹೇಳಿದರು.
ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ,ಪತ್ರಕರ್ತರ ಸಂಘದಲ್ಲಿ ಅಧಿಕಾರ ನಿಂತನೀರಾಗದೆ,ಸಮಬಾಳು,ಸಮಪಾಲಿನಡಿ ಹಂಚಿಕೆಯಾಗಬೇಕು.ಸಮಾಜದಲ್ಲಿ ಅಂಕುಡೊಂಕು ಗಳನ್ನು ತಿದ್ದುವಮೂಲಕ ಪತ್ರಿಕಾರಂಗ ಅಂಕುಶವಾಗಿ ಕೆಲಸಮಾಡುತ್ತದೆ. ನಿಲುಗನ್ನಡಿಯಾಗಿ ನಾನು ಸ್ವೀಕರಿಸುವೆ.ನಿಷ್ಠುರ,ಪಾರದರ್ಶಕ ಸುದ್ದಿಗಳನ್ನು ಭಿತ್ತರಿಸಬೇಕು. ನೆನೆಗುದಿಗೆ ಬಿದ್ದಿರುವ ತಾಲ್ಲೂಕು ಪತ್ರಕರ್ತರ ಸಂಘ ಭವನ ಪೂರ್ಣಗೊಳಿಸಲು ವೈಯಕ್ತಿಕವಾಗಿ ರೂ.10‌ಲಕ್ಷ ಒದಗಿಸುವೆ ಭಿನ್ನಾಭಿಪ್ರಾಯ ಬದಿಗೊತ್ತಿ ಒಗ್ಗಟ್ಟಿನಿಂದ ಬಂದು ಸದ್ಬಳಕೆಮಾಡಿ ಕೊಳ್ಳಬೇಕು.ನನ್ನ ತಾಯಿಯ ಸ್ಮರಣಾರ್ಥವಾಗಿ ರೂ.3 ಲಕ್ಷ ದತ್ತಿದೇಣಿಗೆ ನೀಡುವೆ.ಹಂತಹಂತವಾಗಿ ಪತ್ರಕರ್ತರ ಬೇಡಿಕೆ ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.
ಮಾಜಿ ಶಾಸಕ ಎಚ್.ಪಿ.ರಾಜೇಶ್ ಮಾತನಾಡಿ,ನನ್ನ ಆಡಳಿತಾವಧಿಯಲ್ಲಿ ಪಟ್ಟಣ ಪಂಚಾಯಿತಿ ಒಳಪಟ್ಟಿದ್ದ ಭವನದ ಕಟ್ಟಡವನ್ನು ಶಾಸಕರ ಅನುದಾನದಲ್ಲಿ ರೂ.12 ವೆಚ್ಚ ಭರಿಸಿ ಅಭಿವೃದ್ದಿಪಡಿಸಿ,ಕಂಪ್ಯೂಟರ್ ಇತರೆ ಮೂಲಸೌಕರ್ಯ ಒದಗಿಸಿದ್ದೆ.ತಾಲ್ಲೂಕಿನಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಹಾಗೂ ಐತಿಹಾಸಿಕ ಸ್ಥಳಗಳನ್ನು ಬರವಣಿಗೆ ಮೂಲಕ  ಗುರುತಿಸಬೇಕು.ಪತ್ರಕರ್ತರ ಜೀವನ ಸಂಕಷ್ಟದಲ್ಲಿದ್ದು ಅವರನ್ನು ಬೆಳೆಸಬೇಕಿದೆ ಎಂದು ತಿಳಿಸಿದರು.
ಕಾನಿಪ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ್ ಏಕಬೋಟಿ ಮಾತನಾಡಿ,ಪತ್ರಿಕಾರಂಗ ಜವಾಬ್ದಾರಿಯುತ ವೃತ್ತಿಯಾಗಿದ್ದು,ವೃತ್ತಿಬದ್ದತೆ ಉಳಿಸಬೇಕು.ಸಂಘದಲ್ಲಿ ಅಧಿಕಾರ ಶಾಶ್ವತವಲ್ಲ , ಸಂಘಕ್ಕೆ ಸ್ಥಳೀಯವಾಗಿ ಲಭ್ಯವಾಗುವ ಅನುದಾನವನ್ನು  ಸದ್ಬಳಕೆ ಮಾಡಿಕೊಳ್ಳಬೇಕು.ನಮ್ಮ ಮನವಿಗೆ ಸ್ಪಂದಿಸಿ ಸರ್ಕಾರ ನಿವೇಶನ ಹಂಚಿಕೆಯಲ್ಲಿ ಶೇ.10 ರಷ್ಟು ಮೀಸಲಿಟ್ಟು ಪತ್ರಕರ್ತರಿಗೆ ನಿವೇಶನ ಒದಗಿಸಲು ಬಜೆಟ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸುವ ಭರವಸೆಯನ್ನು ನೀಡಿದ್ದಾರೆ ಎಂದು ಹೇಳಿದರು.
ಬ್ರಹ್ಮ ಕುಮಾರಿ ಈಶ್ವರಿ ವಿದ್ಯಾಲಯದ ಭಾರತಿ ಅಕ್ಕ  ಮಾತನಾಡಿ,ಪತ್ರಕರ್ತರು ಸುದ್ದಿಯಲ್ಲಿ ಬಳಸುವ ಶಬ್ದಗಳು ಮತ್ತೊಬ್ಬರಿಗೆ ಅಪಮಾನವಾಗದಿರಲಿ,ಪ್ರತಿಯೊಬ್ಬ ಪತ್ರಕರ್ತರೂ ಚಿಂತನಾಶೀಲತೆ ಮೈಗೂಡಿಸಿಕೊಂಡು ಉತ್ತಮ ಬದುಕು ರೂಪಿಸಿಕೊಳ್ಳಿರಿ ಎಂದು ಸಲಹೆ ನೀಡಿದರು.
ಇದನ್ನೂ ಓದಿ : ದಿನಮಾನ ಪುಸ್ತಕ ವಿಮರ್ಶೆ|ಸಂತೆಯಲ್ಲಿ ನಿಂತ ಮುದುಕಿ-ಅಮ್ಮನ ಸ್ಪರ್ಶದ ಬರಹಗಳು
ಹಿರಿಯ ಪತ್ರಕರ್ತ ಡಿ.ಶ್ರೀನಿವಾಸ್ ಮಾತನಾಡಿ,ಸ್ಥಳೀಯ ಪತ್ರಕರ್ತರಿಗೆ ಸರ್ಕಾರದ ಸೌಲಭ್ಯಗಳು ಸಿಗಬೇಕಿದೆ.ಜಿಲ್ಲೆಯಲ್ಲಿ ಹೊರಗಿನ ರಾಜ್ಯದವರಿಗೆ,ಹೊರಗಿನ ಜಿಲ್ಲೆಯವರಿಗೆ ವಿಶೇಷ ಸೌಲಭ್ಯ,ನಿವೇಶನ ಕಲ್ಪಿಸಿದ್ದಾರೆ. ಪತ್ರಕರ್ತರಿಗೆ ನಿವೇಶನ,ಸೂರಿಲ್ಲ,ನೆನೆಗುದಿಗೆ ಬಿದ್ದಿರುವ ಪತ್ರಿಕಾಭವನ ಕಟ್ಟಡ ಪೂರ್ಣಗೊಳಿಸಲು ಶಾಸಕ ಬಿ.ದೇವೇಂದ್ರಪ್ಪ ಅವರು ಕೈಜೋಡಿಸಬೇಕು ಎಂದು ಮನವಿಮಾಡಿದರು.
ಕೆಪಿಸಿಸಿ ಎಸ್ ಟಿ ಘಟಕದ ಮಾಜಿ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ,ಬಿಜೆಪಿ ಮುಖಂಡ ಬಿಸ್ತುವಳ್ಳಿ ಬಾಬು,ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಜಿ.ಎಸ್.ಚಿದಾನಂದ,ನೂತನ ತಾಲ್ಲೂಕು ಅಧ್ಯಕ್ಷ ಲೋಕೇಶ್ ಎಂ. ಮಾತನಾಡಿದರು.
ಇದೇ ವೇಳೆ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳು ಪದಗ್ರಹಣ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಕಾನಿಪ ಸಂಘದ ಜಿಲ್ಲಾ ಖಜಾಂಚಿ ವೀರೇಶ್, ಜಿಲ್ಲಾ ಪ್ರಧಾನಕಾರ್ಯದರ್ಶಿ ಬದ್ರಿನಾಥ್, ಚುನಾವಣೆ ಅಧಿಕಾರಿ ಜೈಮುನಿ,ರಾಜ್ಯಪರಿಷತ್ ಸದಸ್ಯ ಚಂದ್ರಣ್ಣ, ಜಿಲ್ಲಾ ಉಪಾಧ್ಯಕ್ಷ ಬಿ.ಪಿ.ಸುಬಾನ್,ವಕೀಲ ಸಂಘದ ತಾಲ್ಲೂಕು ಅಧ್ಯಕ್ಷ ಟಿ.ಬಸವರಾಜ್, ಪತ್ರಕರ್ತ ಕೊಟ್ರೇಶ್,ಕೂಡ್ಲಿಗಿ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹುಡೇಂ ಕೃಷ್ಣ ಮೂರ್ತಿ,ಮುಖಂಡರಾದ ಬಿ.ಮಹೇಶ್ವರಪ್ಪ, ಪೂಜಾರ ಸಿದ್ದಪ್ಪ,ಗುತ್ತಿದುರ್ಗ ರುದ್ರೇಶ್,ಕುಬೇಂದ್ರಪ್ಪ,ಮೋರಾರ್ಜಿ,ಕುಬೇರಪ್ಪ,ಬಸವರಾಜ್, ಸೇರಿದಂತೆ ತಾಲ್ಲೂಕು ಕಾನಿಪ ಸಂಘ ದ ಪದಾಧಿಕಾರಿಗಳು ಇದ್ದರು.
TAGGED:Davanagere Newsdinamaana.comKannada Newsಆದಿಜಾಂಭವ ಮಠದ ಷಡಕ್ಷರಿ ಮುನಿಸ್ವಾಮಿಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article B.Srinivasa ದಿನಮಾನ ಪುಸ್ತಕ ವಿಮರ್ಶೆ|ಸಂತೆಯಲ್ಲಿ ನಿಂತ ಮುದುಕಿ-ಅಮ್ಮನ ಸ್ಪರ್ಶದ ಬರಹಗಳು
Next Article ದಾವಣಗೆರೆ ಕಾನೂನು ವಿರುದ್ದವಾಗಿ ನಡೆದುಕೊಂಡರೆ ಕಠಿಣ ಕ್ರಮ : ಎಸ್ಪಿ ಶೇಖರ್ ಹೆಚ್. ತೆಕ್ಕಣ್ಣನವರ್
Leave a comment

Leave a Reply Cancel reply

You must be logged in to post a comment.

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

Harihara | ಹರಿಹರ ಶಾಖಾ ಗ್ರಂಥಾಲಯದಲ್ಲಿ  76ನೇ ಗಣರಾಜ್ಯೋತ್ಸವ ಆಚರಣೆ

ಹರಿಹರ (Harihara): ಹರಿಹರ ಶಾಖಾ ಗ್ರಂಥಾಲಯದಲ್ಲಿ  76ನೇ ಗಣರಾಜ್ಯೋತ್ಸವ ಆಚರಿಸಲಾಯಿತು. ಡಾ. ಬಿ. ಆರ್. ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧೀಜಿಯವರ…

By Dinamaana Kannada News

ದಾವಣಗೆರೆ | ಅಂಧ ಹಾಗೂ ಶ್ರವಣದೋಷವುಳ್ಳ ಮಕ್ಕಳಿಗೆ ಉಚಿತ ಡಿ.ಎಡ್ ತರಬೇತಿ

ದಾವಣಗೆರೆ : ರಾಜ್ಯ ಸರ್ಕಾರದಿಂದ ಅಂಧ ಹಾಗೂ ಶ್ರವಣದೋಷವುಳ್ಳ ಮಕ್ಕಳ ಶಿಕ್ಷಕರ ತರಬೇತಿ ಕೇಂದ್ರ, ಮೈಸೂರು ಇಲ್ಲಿ ಉಚಿತವಾಗಿ ಅಂಧ…

By Dinamaana Kannada News

ಪರಿಸರ ಕ್ಷೀಣಿಸಿದರೆ ಭೂಮಿ ಮೇಲಿನ ಜೀವಿಗಳು ನಾಶ : ನ್ಯಾ. ರಾಜೇಶ್ವರಿ.ಎನ್.ಹೆಗಡೆ

ದಾವಣಗೆರೆ ಜೂ 5 : ಪರಿಸರ ದಿನಾಚರಣೆ ದಿನ ಗಿಡ ನೆಡುವುದು ಮುಖ್ಯವಲ್ಲ, ಜೊತೆಗೆ ಗಿಡಗಳನ್ನು ಪೋಷಣೆ  ಮಾಡುವುದು ಮುಖ್ಯ…

By Dinamaana Kannada News

You Might Also Like

jagalore
ತಾಜಾ ಸುದ್ದಿ

ಬಡ ಕೂಲಿ ಕಾರ್ಮಿಕರ ತತ್ತಿನ ಚೀಲ ಕಸಿದ ಕೇಂದ್ರ : ಶಾಸಕ ಬಿ.ದೇವೇಂದ್ರಪ್ಪ

By Dinamaana Kannada News
ದಾವಣಗೆರೆ
ತಾಜಾ ಸುದ್ದಿ

ಕಾನೂನು ವಿರುದ್ದವಾಗಿ ನಡೆದುಕೊಂಡರೆ ಕಠಿಣ ಕ್ರಮ : ಎಸ್ಪಿ ಶೇಖರ್ ಹೆಚ್. ತೆಕ್ಕಣ್ಣನವರ್

By Dinamaana Kannada News
Jagalore
ತಾಜಾ ಸುದ್ದಿ

ಯುವಕರು ಮೊಬೈಲ್ ಬಿಟ್ಟು ಗ್ರಂಥಾಲಯದ ಕಡೆ ಬನ್ನಿ: ಶಾಸಕ ಬಿ.ದೇವೇಂದ್ರಪ್ಪ ಕರೆ

By Dinamaana Kannada News
Davanagere
ತಾಜಾ ಸುದ್ದಿ

ಬಜೆಟ್ ನಲ್ಲಿ ದಲಿತರ ಜನಸಂಖ್ಯೆ ಅನುಗುಣವಾಗಿ ಶೇ. 24.1ರಷ್ಟು ಅನುದಾನ ಮೀಸಲಿರಿಸಿ : ದಲಿತ ಸಂಘರ್ಷ ಸಮಿತಿ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?