ಜಗಳೂರು : ರಾಜ್ಯದಲ್ಲಿಯೇ ಇತಿಹಾಸ ಸೃಷ್ಟಿ ಮಾಡುವಂತ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದ್ದು,ಕಂದಾಯ ಗ್ರಾಮಗಳನ್ನಾಗಿ ಮಾಡಿ ಹಕ್ಕು ಪತ್ರಗಳನ್ನು ಸಹ ವಿತರಿ ಸುವಂತಹ ಮಹತ್ಕಾರ್ಯಕ್ಕೆ ಕೈ ಹಾಕಿರುವುದು ಶ್ಲಾಘನೀಯವಾಗಿದೆ ಎಂದು ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಾಟೀಲ್ ಹೇಳಿದರು
ಶನಿವಾರ ತಾಲೂಕಿನ ಮೇಲಿನ ಕೆರೆ ಗ್ರಾಮದಲ್ಲಿ ಹಾವೇರಿಯಲ್ಲಿ ನಡೆಯುವ ಭೂ ಗ್ಯಾರಂಟಿ ಯಡಿ ಸಮರ್ಪಣಾ ಸಮಾವೇಶಕ್ಕೆ ತೆರಳುವ ಬಸ್ ಗೆ ಚಾಲನೆ ನೀಡಿ ಮಾತನಾಡಿದ ಅವರು, ಸುಮಾರು ವರ್ಷಗಳಿಂದ ಸರ್ಕಾರಿ ಮತ್ತು ಖಾಸಗಿ ಜಮೀನುಗಳಲ್ಲಿ ಹಣದ ಕೃತವಾಗಿ ಮನೆಗಳನ್ನು ನಿರ್ಮಿಸಿಕೊಂಡು ಜೀವನ ಸಾಗಿಸುತ್ತಿದ್ದಂತಹ ಬಡ ಜನರಿಗೆ ಸರ್ಕಾರ ದ ವತಿಯಿಂದ ಕಂದಾಯ ಗ್ರಾಮಗಳನ್ನಾಗಿ ಮಾಡಿದ್ದು ಇವರೆಲ್ಲರಿಗೂ ಹಕ್ಕು ಪತ್ರಗಳನ್ನು ನೀಡಲಾಗುತ್ತಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಡವರ ಹಿಂದುಳಿದ ವರ್ಗ ಗಳ ದಲಿತರ ಅಭಿವೃದ್ಧಿಗಾಗಿಯೇ ಜನ್ಮ ತಾಳಿದ್ದಾರೆ ಅವರು ಜಾರಿಗೆ ತರುವಂತ ಪ್ರತಿಯೊಂದು ಯೋಜನೆಗಳು ಬಡವರಿಗೆ ವರದಾನವಾಗುತ್ತಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಮಾಜಿ ಸದಸ್ಯ ಅರ್ಜನ್ ಸೇರಿದಂತೆ ಗ್ರಾಮ ಆಡಳಿತ ಅಧಿಕಾರಿಗಳು, ಫಲಾನುಭವಿಗಳು ಸಿಬ್ಬಂದಿಗಳು ಗ್ರಾಮಸ್ಥರು ಹಾಜರಿದ್ದರು
