ಜಗಳೂರು: ತಾಲೂಕಿನಲ್ಲಿ ಈ ಹಿಂದೆ ನಡೆದಂತ ಘಟನೆಗಳಿಂದ ತಾಲೂಕಿಗೆ ಖರೀದಿ ಕೇಂದ್ರ ನೀಡುವುದಿಲ್ಲ ಎಂದು ಹೇಳಿದ್ದರು. ರಾಜೀನಾಮೆ ನೀಡುತ್ತೇನೆ ಎಂದಾಗ ಮತ್ತೆ ಖರೀದಿ ಕೇಂದ್ರ ಪ್ರಾರಂಭವಾಗಿದೆ ಎಂದು ಶಾಸಕ ಬಿ ದೇವೇಂದ್ರಪ್ಪ ತಿಳಿಸಿದರು.
ಸೋಮವಾರ ಪಟ್ಟಣದ ಎಪಿಎಂಸಿ ಆವರಣದಲ್ಲಿ 2025 – 26 ನೇ ಸಾಲಿನ ರಾಗಿ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದರು.
ರಾಗಿ ತಿಂದೋವನು ನಿರೋಗಿ ಎಂಬ ನಾಣ್ಣುಡಿಯಂತೆ ಇದಕ್ಕೆ ತನ್ನದೇ ಆದ ಮಹತ್ವವಿದೆ. ತೆರೆದ ಮಾರುಕಟ್ಟೆಗಿಂತ ಅಧಿಕ ದರ ನೀಡುತ್ತಿದೆ. ಕಾರಣ ರೈತರ ಬಾಳು ಹಸನಾಗಲಿ ಎಂಬ ಉದ್ದೇಶದಿಂದ ಸರಕಾರ ಖರೀದಿ ಕೇಂದ್ರ ನೀಡಿದೆ ಕಳೆದ ಮೂರು ವರ್ಷಗಳ ಹಿಂದೆ ಕೆಲ ಕೈಗಳು ಕಲಬೇರೆಕೆ ಮಾಡಿ ತಿನ್ನ ಅನ್ನಕ್ಕೆ ವಿಷ ಪ್ರಾಷಣ ಮಾಡುವಂತ ಕೆಲಸವನ್ನು ಮಾಡಿದ್ದರು ಅದಕ್ಕೆ ಪರಿಹಾರ ಕೊಡಿಸಿದ್ದೇನೆ. ಈ ಭಾರಿ ಸಾಕಷ್ಟು ರೈತರು ನೊಂದಾಯಿಸಿಕೊಂಡಿದ್ದಾರೆ.
ರಾಗಿಯ ಬೆಲೆ ಸರಿಸುಮಾರು 5000 ಸಾವಿರರೂ ಇದೆ ಇದರಿಂದ ರೈತರ ಬಾಳು ಹಸನಗಲಿದೆ. ನಿಜವಾದ ರೈತರಿಗೆ ಅನ್ಯಾಯವಾಗಿತ್ತು ಸಂಕಷ್ಟಕ್ಕೆ ಸಿಲುಕಿದ್ದರು. ಹಾಗಾಗಿ ಅಮಾಯಕ ರೈತರು ಬಲಿಯಾಗಿದ್ದರು.
ಈ ವೇಳೆ ಅಧಿವೇಶನ ನಡೆಯುತ್ತಿತ್ತು ನಾಲ್ಕೈದು ಎಂಡಿಗಳು ಬದಲವಾಣೆಯಾಗಿದ್ದರು. ಅದರೂ ಕೂಡ ಸರಕಾರದ ಮೇಲೆ ಒತ್ತಡ ಹಾಕಿದಾಗ ಸರಕಾರ ಕೇಂದ್ರ ಮಂಜೂರು ಮಾಡಿತು. ದೇವರು ಹೊರಕೊಟ್ಟರು ಪೂಜಾರಿ ವರ ಕೊಡಲಿಲ್ಲ ಎಂಬಂತೆ ನಡೆಯಿತು. ಆದರೂ ಸಹ 8 ಕೋಟಿ ಹಣ ತೆಗೆದುಕೊಂಡು ಬಂದೆ ಆಗ ನನ್ನನ್ನು ರೌಡಿ ಎಂಬ ಹಣೆ ಪಟ್ಟಿಕೊಟ್ಟರು. ಇದಾವುದಕ್ಕೂ ಜಗ್ಗುವುದಿಲ್ಲ ಪಾರದರ್ಶಕ ಆಡಳಿತ ನೀಡುವುದೇ ನನ್ನ ಧ್ಯೇಯವಾಗಿದೆ ಎಂದರು.
ತಹಶೀಲ್ದಾರ್ ಸೈಯದ್ ಕಲೀಮಲ್ಲಾ ಮಾತನಾಡಿ, ಯಾವುದೇ ಸಮಸ್ಯೆಗಳು ಇದ್ದರು ಸಹ ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಭಯವಾಗಿ ಸಮಸ್ಯೆಗಳನ್ನು ಎದುರಿಸುವಂತ ಕೆಲಸವನ್ನು ಮಾಡುತ್ತಿದ್ದ ಸೋಲಿಲ್ಲದ ಸರದಾರರಾಗಿದ್ದಾರೆ ಎಂದರು.
ಜಂಟಿ ನಿರ್ದೇಶಕ ಮಧುಸೂಧನ್ ಮಾತನಾಡಿ, ಈ ಬಾರಿ ಸರಕಾರ ಇದರ ದರವನ್ನು ಹೆಚ್ಚಿಸಿದ್ದು ಇದು ಆರೋಗ್ಯಕ್ಕೆ ಅತೀ ಉಪಯುಕ್ತ ಆಹಾರವಾಗಿದ್ದು 2013 ರಲ್ಲಿ ನಡೆದ ಕಹಿ ಘಟನೆ ನಡೆದಿತ್ತು. ಶಾಸಕರ ಸಹಕಾರದಿಂದ ದೂರವಾಯಿತು. ನೊಂದಾಯಿಸಿಕೊಂಡ ರೈತರಿಗೆ ವೇಳಾ ಪಟ್ಟಿ ನೀಡಿ ದೂರವಾಣಿ ಕರೆಯ ಮೂಲಕ ಸಂಪರ್ಕಿಸಲಾಗುವುದು ಪ್ರಥಮವಾಗಿ ಯಾರೋ ನೊಂದವಣೆ ಮಾಡಿಸಿಕೊಂಡಿದ್ದಾರೋ ಅವರಿಗೆ ಪ್ರಥಮ ಆದ್ಯತೆ ಎಂದರು.
ಜಿಲ್ಲಾ ವ್ಯವಸ್ಥಾಪಕ ನಾಗರಾಜ್ ಮಾತನಾಡಿ, ಕನಿಷ್ಟ ಬೆಂಬಲ ಯೋಜನೆಯಡಿ ನಿಗಮ ಮತ್ತು ಜಿಲ್ಲಾಡಳಿತದ ಪರವಾಗಿ ಇಲ್ಲಿ ಖರೀದಿ ಕೇಂದ್ರ ತೆರೆಯಲಾಗಿದೆ. ಈ ವರ್ಷ ದರವನ್ನು ಹೆಚ್ಚಳ ಮಾಡಲಾಗಿದ್ದು, ಕ್ವಿಂಟಲ್ ಗೆ 1500 ವ್ಯತ್ಯಾಸ ಕಾಣುತ್ತೇವೆ. ಕಳೆದ ಬಾರಿ ಉತ್ತಮ ಗುಣ ಮಟ್ಟದ ರಾಗಿಯನ್ನು ನೀಡಿದ್ದಿರಿ. ಈ ಭಾರಿಯು ಸಹ ಕಲ್ಲು,ಧೂಳು,ಮಣ್ಣು ಇಲ್ಲದಂತ ರಾಗಿಯನ್ನು ನೀಡಬೇಕು ಎಂದರು.
ಗೋದಾಮು ವ್ಯವಸ್ಥಾಪಕ ಮನು ಮಾತನಾಡಿ,, 2025 -26 ನೇ ಸಾಲಿನ ರಾಗಿ ಖರೀದಿಗಾಗಿ ನೋಂದಣಿ ನೋಂದಣಿಯನ್ನು ಅಕ್ಟೋಬರ್ ನಿಂದ ಡಿಸೆಂಬರ್ ವರೆಗೆ ಅವಕಾಶ ಮಾಡಿಕೊಡಲಾಗಿತು.್ತ ಈ ವೇಳೆ 3149 ರೈತರು ನೊಂದಾಯಿಸಿಕೊಂಡಿದ್ದು 89441 ಕ್ವಿಂಟಲ್ ರಾಗಿ ಖರಿದಿ ಗುರಿಯನ್ನು ಹೊಂದಲಾಗಿದೆ ಎಂದರು.
ಖರೀದಿಯನ್ನು 2026ರ ಜನವರಿಯಿಂದ ಮಾರ್ಚ್ ವರೆಗೆ ಖರೀದಿ ಮಾಡಲಾಗುವುದು ಪ್ರತಿ ಎಕರೆಗೆ 10 ಕ್ವಿಂಟಲ್ ರಂತೆ ರೈತರಿಂದ ಗರಿಷ್ಠ 50 ಕ್ಕಿಂತ ರಾಗಿಯನ್ನು ಖರೀದಿ ಮಾಡಲಾಗುವುದು ಸರ್ಕಾರವು ರಾಗಿಯನ್ನು ಕ್ವಿಂಟಲ್ ಗೆ 4,886 ದರ ನಿಗದಿ ಮಾಡಲಾಗಿದೆ ಎಂದರು.
Read also : ಜಯಂತಿ ಆಚರಣೆ ಮಾಡದೇ ಅಗೌರವ, ಬಂಜಾರ ಸಂಘದಿಂದ ಪ್ರತಿಭಟನೆ
ಎಪಿಎಂಸಿ ಕಾರ್ಯದರ್ಶಿ ಶಿವಕುಮಾರ್, ಆಹಾರ ನಿರೀಕ್ಷಕರಾದ ಶಿವಪ್ರಕಾಶ್, ಶ್ರೀನಿವಾಸ್, ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ತಾಲೂಕು ಅಧ್ಯಕ್ಷ ಓಮಣ್ಣ , ಗ್ಯಾರಂಟಿ ಸಮಿತಿ ಅಧ್ಯಕ್ಷ ಷಂಷೀರ್ ಅಹಮದ್ , ಕಾಂಗ್ರೇಸ್ ಎಸ್ಸಿ ಘಟಕದ ತಾಲೂಕು ಮಹೇಶ್ವರಪ್ಪ , ರೈತ ಸಂಘದ ತಾಲೂಕು ಅಧ್ಯಕ್ಣ ಅಕನೂರು ನಿಂಗಪ್ಪ , ಮುಖಂಡರಾದ ರಸೂಲ್ ಸಾಬ್, ವೆಂಕಟೇಶ್,ಪ್ರಕಾಶ್ ರೆಡ್ಡಿ ನಾಗೇಂದ್ರ ರೆಡ್ಡಿ, ಅಜ್ಜಪ್ಪ, ಶೇಖರಪ್ಪ ಸೇರಿದಂತೆ ಮತ್ತಿತರರು ಹಾಜರಿದ್ದರು.
