ಜಗಳೂರು:ಮುಂಗಾರು ಹಂಗಾಮಿನಲ್ಲಿ ರಾಗಿಯ ನಂತರ ಶೇಂಗಾ ಬೆಳೆಗೆ ಒತ್ತು ನೀಡಿದ ರೈತರು ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ನಳ ನಳಿಸುತ್ತಿರುವ ಶೇಂಗಾ ಬೆಳೆ. ಈ ಹಿಂದೆ ಹಿಂಗಾರು ಹಂಗಾಮಿನಲ್ಲಿ ಕಡಲೆ, ಊಟದ ಜೋಳ ಬೆಳೆಯನ್ನು ಬೆಳೆಯುತ್ತಿ ದ್ದರು.
ಬೇಸಿಗೆಯಲ್ಲಿ ಅಲ್ಪಸ್ವಲ್ಪ ರಾಗಿಯನ್ನು ಬಿತ್ತನೆ ಮಾಡುತ್ತಿದ್ದರು.ರಾಗಿಗೆ ಬೆಂಬಲ ಬೆಲೆ ದೊರೆತ ಮೇಲೆ ತಾಲೂಕಿನ ರೈತರು 8,000ಕ್ಕೂ ಅಧಿಕ ಹೆಕ್ಟರ್ ಪ್ರದೇಶದಲ್ಲಿ ರಾಗಿ ಯನ್ನು ಬಿತ್ತನೆ ಮಾಡಿ ಈಗಾಗಲೇ ಕಟಾವಿನ ಹಂತ ತಲುಪಿದೆ.
ರಾಗಿಯ ನಂತರ ರೈತರು ಶೇಂಗಾ ಬೆಳೆಗೆ ಒತ್ತು ನೀಡುತ್ತಿದ್ದು ತಾಲೂಕಿನ ಕಸಬಾ ಬಿಳಿಚೋಡು, ಸೊಕ್ಕೆ ಹೋಬಳಿಗಳ ವ್ಯಾಪ್ತಿಗಳಲ್ಲಿ ನೂರಕ್ಕೂ ಅಧಿಕ ಹೆಕ್ಟರ್ ಪ್ರದೇಶದಲ್ಲಿ ಶೇಂಗಾವನ್ನು ಬಿತ್ತನೆ ಮಾಡಿದ್ದು, ಶೇಂಗಾ ಬೆಳೆ ಇನ್ನೇನು ಕಾಯಿ ಕಟ್ಟುವ ಅಂತ ತಲುಪಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಕಾರಣ ಮುಂಗಾರು ಹಂಗಾಮಿನಲ್ಲಿ ಹೆಚ್ಚಿನರೈತರು ಶೇಂಗಾ ಬಿತ್ತನೆಮಾಡಿದ್ದರು.
ಇರುವುದರಿಂದ ದರ ಕಡಿಮೆಯಾಗುತ್ತೆ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಪ್ರದೇಶ ಕಡಿಮೆಯಾಗಿರುವುದರಿಂದ ರೈತರು ಬಿತ್ತನೆಗೆ ಮುಂದಾಗಿದ್ದು ಶೇಂಗಾವನ್ನು ಬಿತ್ತನೆ ಮಾಡಿದ್ದಾರೆ.
ಹಸಿ ಶೇಂಗಾಕ್ಕೆ ಡಿಮ್ಯಾಂಡ್ : ರೈತರು ಕಿತ್ತೂ ಒಣಗಿಸಿ ಮಾರುಕಟ್ಟೆಗೆ ಹಾಕುವುದಕ್ಕಿಂತ ಅಸಿ ಶೇಂಗವನ್ನೇ ಮಾರಾಟ ಮಾಡಿದರೆ ಉತ್ತಮ ಆದಾಯ ಗಳಿಸುತ್ತಾರೆ ಕೆ ಜಿ ಗೆ ನೂರು ರೂಪಾಯಿ ದರ ದೊರೆಯಲಿದ್ದು, ಖರೀದಿದಾರರು ಜಮೀನುಗಳ ಹತ್ತಿರ ಬಂದು ಹಸಿ ಶೇಂಗವನ್ನು ಖರೀದಿ ಮಾಡುವವರ ಕಡೆ ಖರೀದಿ ಮಾಡುವಾಗ ಸಂಖ್ಯೆ ಜಾಸ್ತಿಯಾಗಿದ್ದು ಹಸಿ ಶೇಂಗಕ್ಕೆ ಬೇಡಿಕೆ ಹೆಚ್ಚಾಗಿದೆ.
ಬಡವರ ಬಾದಾಮಿ ಎಂದೇ ಖ್ಯಾತಿಯಾಗಿರುವ ಶೇಂಗಾ ಬೆಳೆಯು ಪ್ರಸ್ತುತ ಮಾರುಕಟ್ಟೆಯಲ್ಲಿ ದರ ಹೆಚ್ಚಳವಾಗಿದ್ದು ಬೇಸಿಗೆಯಲ್ಲಿ ಶೇಂಗಾ ಬೆಳೆಯನ್ನು ಬೆಳೆಯಲು ರೈತರು ಮುಂದಾಗಿದ್ದಾರೆ.
ರಾಜನ ಹಟ್ಟಿ ರಾಜು
ರೈತ ಸಂಘದ ಪ್ರಧಾನ ಕಾರ್ಯದರ್ಶಿ
ಇನ್ನೇನು ಕೆಲವೇ ದಿನಗಳಲ್ಲಿ ರಜೆ ಬಿಡುವುದರಿಂದ ವಿದ್ಯಾರ್ಥಿಗಳು ಚಿಕ್ಕ ಮಕ್ಕಳು ಪಾರ್ಕ್ ,ಮಾಲ್ ಮತ್ತು ಬಟ್ಟೆ ಅಂಗಡಿಗಳ ಮುಂಭಾಗದಲ್ಲಿ ಜನ ಸಂದಣಿ ಅಧಿಕವಾಗಿರುವುದರಿಂದ ವ್ಯಾಪಾರ ವಹಿವಾಟು ಉತ್ತಮವಾಗಿ ನಡೆಯಲಿದೆ.
ಶೇಂಗಾ ವ್ಯಾಪಾರಿ, ಮಹಾಂತೇಶ್ .
