ಜಗಳೂರು : ಹಾಲಿ ಶಾಸಕರು ರಸ್ತೆ ವಿಸ್ತರಣೆ ಗೊಂದಲವನ್ನು ಬಗೆಹರಿಸಬೇಕು ಮತ್ತು ಬೇಕು ಜೊತೆಗೆ ರೈತರಿಗೆ ಸಮರ್ಪಕವಾಗಿ ವಿದ್ಯುತ್ ವ್ಯವಸ್ಥೆಯನ್ನು ನೀಡುವಂತಹ ಕೆಲಸ ಮಾಡಬೇಕಾಗಿದೆ ಹಾಗೂ ದಾವಣಗೆರೆ ರಸ್ತೆಯಿಂದ ಕೋರ್ಟ್ ವರೆಗೆ ಏಳು ಕೋಟಿ ರೂ ವೆಚ್ಚದಲ್ಲಿ ನಡೆಯುತ್ತಿರುವ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು ಎಂದು ಮಾಜಿ ಶಾಸಕ ಎಸ್ .ವಿ .ರಾಮಚಂದ್ರ ಶಾಸಕರನ್ನು ಒತ್ತಾಯಿಸಿದ್ದಾರೆ.
ಶನಿವಾರ ಪಟ್ಟಣದ ವಿದ್ಯಾನಗರದಲ್ಲಿರುವ ತಮ್ಮ ನಿವಾಸದಲ್ಲಿ ಬಿಜೆಪಿ ಮಂಡಲದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ತಾಲೂಕಿನಲ್ಲಿ ಉತ್ತಮವಾಗಿ ಮಳೆಯಾಗಿದ್ದು ಕೆರೆಕಟ್ಟೆಗಳಲ್ಲಿ ನೀರು ತುಂಬಿದೆ ಜೊತೆಗೆ ಹೆಚ್ಚಾಗಿ ಮೆಕ್ಕೆಜೋಳ ಬೆಳೆಯನ್ನು ಬೆಳೆಯಲಾಗಿದ್ದು ರೈತರ ಅನುಕೂಲಕ್ಕಾಗಿ ಮೆಕ್ಕೆಜೋಳ ಖರಿದಿ ಕೇಂದ್ರವನ್ನು ತೆರೆಯಬೇಕಾಗಿದೆ. ತಾಲೂಕಿನಲ್ಲಿ 57 ಕೆರೆಗಳಿಗೆ ತುಂಬಿಸುವ ಯೋಜನೆಯಲ್ಲಿ ಕೆರೆಗಳಿಗೆ ನೀರು ಬಂದಿರುವುದರಿಂದ ಅಂತರ್ಜಲ ಹೆಚ್ಚಳವಾಗಿ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ ಈ ವೇಳೆ ಸಮರ್ಪಕವಾಗಿ ವಿದ್ಯುತ್ ವ್ಯವಸ್ಥೆ ಇಲ್ಲದೆ ಇರುವುದರಿಂದ ರೈತರ ಸಂಕಷ್ಟ ಕ್ಕಿಡಾಗಿದ್ದು ಸಮರ್ಪಕವಾದ ವಿದ್ಯುತ್ ವ್ಯವಸ್ಥೆಯನ್ನು ಕಲ್ಪಿಸುವಂತೆ ಒತ್ತಾಯಿಸಿದರು.
ಪಟ್ಟಣದಲ್ಲಿ ನಡೆಯುತ್ತಿರುವ ರಸ್ತೆ ಅಗಲಿ ಕರಣ 35 ಅಡಿ ಗೋ 69 ಅಡಿಗೋ ಎಂಬುದರ ಬಗ್ಗೆ ಸ್ಪಷ್ಟ ಚಿತ್ರಣವನ್ನು ಶಾಸಕರು ನೀಡಬೇಕು ಅಳತೆಯ ಬಗ್ಗೆ ಗೊಂದಲ ಮೂಡಿದ್ದು ಶಾಸಕರು ಗೊಂದಲ ನಿವಾರಣೆ ಮಾಡಬೇಕಾಗಿದೆ ಎಂದರು.
ಮಾಜಿ ಶಾಸಕ ಎಚ್ ಪಿ ರಾಜೇಶ್ ಮಾತನಾಡಿ ಚುನಾವಣೆಯಲ್ಲಿ ನೀವೇನು ಬೃಹತ್ ಅಂತರದಿಂದ ಗೆದ್ದಿಲ್ಲ ಅಲ್ಪ ಮತಗಳಿಂದ ಗೆದ್ದಿದ್ದೀರಿ ಆದರೂ ಸಹ ನಾವು ನಿಮ್ಮನ್ನು ಒಪ್ಪಿ ಕೊಂಡಿದ್ದೇವೆ. ಆದರೆ ನೀವು ಸಮರ್ಪಕವಾದ ಆಡಳಿತ ನೀಡು ತ್ತಿಲ್ಲ. ರಸ್ತೆ ಅಗಲೀಕರಣ ನೆಪದಲ್ಲಿ ಕೆಲ ಕಟ್ಟಡ ಮಾಲೀಕರಿಂದ ಶಾಸಕರು ಮತ್ತು ಹಿಂಬಾಲಿಕರು ಏನೋ ವಿಶೇಷತೆ ಹೊಂದಿದ್ದಾರೆ. ಇದರ ಬಗ್ಗೆ ಕೆಲ ಕಟ್ಟಡ ಮಾಡಿಕರು ನೇರವಾಗಿ ಹೇಳುತ್ತಾರೆ. ಈ ಹಿಂದೆ ರಾಗಿ ಖರೀದಿ ಕೇಂದ್ರದಲ್ಲಿ 15 ಕೋಟಿ ಹಗರಣವಾಗಿತ್ತು. ಮಧ್ಯವರ್ತಿಗಳೇ ಈ ಹಣವನ್ನೆಲ್ಲ ತಿಂದು ಹಾಕಿದ್ದರು. ಈಗ ರಾಗಿ ಖರೀದಿ ಕೇಂದ್ರ ಪ್ರಾರಂಭವಾಗಿದ್ದು ಅರ್ಹ ರೈತರ ಖಾತೆಗಳಿಗೆ ಹಣೆ ಜಾಮ ವಾಗುವಂತೆ ನೋಡಿಕೊಳ್ಳಬೇಕಾಗಿದೆ ಎಂದರು.
ರಂಗಯ್ಯನದುರ್ಗ ಕೊಂಡ ಕುರಿ ಅರಣ್ಯ ಧಾಮದ ಸಮಯ ಸುತ್ತಲೂ 15 ಗ್ರಾಮಗಳಲ್ಲಿ ರೈತರು ಬೆಳೆದ ಬೆಳೆಗಳನ್ನು ಹಂದಿಗಳು ತಿಂದು ಹಾಕುತ್ತಿದ್ದು ಅರಣ್ಯ ಇಲಾಖೆಯಿಂದ ರೈತರಿಗೆ 1000 ಪರಿಹಾರ ನೀಡುತ್ತಿದೆ. ಶಾಸಕರು ಇತ್ತ ಗಮನಹರಿಸಿ ರೈತರಿಗೆ ಹೆಚ್ಚಿನ ಪರಿಹಾರ ನೀಡುವ ಕೆಲಸ ಮಾಡಬೇಕು ಎಂದು ಹೇಳಿದರು.
Read also : ಪ್ರತಿಭೆ ಅನಾವರಣಕ್ಕೆ ವಾರ್ಷಿಕೋತ್ಸವ ವೇದಿಕೆ : ಶಾಸಕ ಬಿ.ಪಿ. ಹರೀಶ್
ಶಾಸಕರಿಗೆ ಸಚಿವ ಸತೀಶ್ ಜಾರಕಿಹೊಳಿ ಆಪ್ತರಾಗಿದ್ದು ರಿಂಗ್ ರೋಡ್ ಅನ್ನು ಮಂಜೂರು ಮಾಡಿಸಿಕೊಂಡು ಬಂದರೆ ವಾಹನ ಸಂಚಾರಕ್ಕೆ ಅನುಕೂಲವಾಗಲಿದೆ. ಇದರ ಬಗ್ಗೆ ಶಾಸಕರು ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ಮಂಡಲ ಉಪಾಧ್ಯಕ್ಷ ತುಪ್ಪದಲ್ಲಿ ಪೂಜಾರ್ ಸಿದ್ದಪ್ಪ, ಪ್ರಧಾನ ಕಾರ್ಯದರ್ಶಿ ಧರ್ಮ ನಾಯ್ಕ, ಕಾರ್ಯದರ್ಶಿ ಶಿವಕುಮಾರ್, ಜಿಪಂ ಮಾಜಿ ಸದಸ್ಯ ಸೊಕ್ಕೆ ನಾಗರಾಜ್, ಅಧ್ಯಕ್ಷ ಪಲ್ಲಾಗಟ್ಟೆ ಮಹೇಶ್, ಮಾಜಿ ಪ್ರಧಾನ ಕಾರ್ಯದರ್ಶಿ ಜೆ. ವಿ. ನಾಗರಾಜ್ , ದೇವಿಕೆರೆ ಶಿವಕುಮಾರ ಸ್ವಾಮೀ ಇತರರು ಇದ್ದರು.
ರಾಜ್ಯ ಸರ್ಕಾರವು ಭದ್ರಾ ಮೇಲ್ದಂಡೆ ಯೋಜನೆಗೆ ಸಮರ್ಪಕವಾದ ರೂಪುರೇಷೆಯ ಕಡತವನ್ನು ಸಲ್ಲಿಸದೇ ಇರುವುದರಿಂದ ಕೇಂದ್ರದಿಂದ ಬರುವಂತಹ ಅನುದಾನ ಬಂದಿಲ್ಲ ಜೊತೆಗೆ ಕೇಂದ್ರ ಸರ್ಕಾರವು ಈ ಬಾರಿಯ ಬಜೆಟ್ ನಲ್ಲಿ ರಾಜ್ಯಕ್ಕೆ ಕೊಡುಗೆ ನೀಡದಿರುವುದು ಅಸಮಾಧಾನಕ್ಕೆ ಕಾರಣವಾಗಿದೆ
ಎಸ್. ವಿ .ರಾಮಚಂದ್ರ
ಮಾಜಿ ಶಾಸಕತಾಪಂ ಮಳೆಗೆ ಹರಾಜು ಪ್ರಕ್ರಿಯೆಯನ್ನು ಪ್ರಾರಂಭಿಸಿ ಮತ್ತೆ ಸ್ಥಗಿತಗೊಳಿಸಿರುವುದರ ಹಿಂದೆ ಏನೋ ಒಪ್ಪಂದ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಮಳಿಗೆಗಳನ್ನು ಈ ಕೂಡಲೇ ಹರಾಜು ಮಾಡಬೇಕು ಇಲ್ಲದಿದ್ದರೆ ಹೋರಾಟ ಮಾಡೋದು ಅನಿವಾರ್ಯವಾಗಿದೆ.
ಎಚ್ .ಪಿ .ರಾಜೇಶ್
ಮಾಜಿ ಶಾಸಕರಸ್ತೆಯ ಅಗಲೀಕರಣವು ಅಂಬೇಡ್ಕರ್ ಸರ್ಕಾರದಿಂದ ಚಳ್ಳಕೆರೆ ವೃತ್ತದವರೆಗೂ ಮಾಡಬೇಕು. ಆದರೆ ಶಾಸಕರು ಧರ್ಮದ ಆಧಾರದ ಮೇಲೆ ರಸ್ತೆ ಅಗಲಿಕರಣ ಮಾಡುತ್ತಿರುವುದು ಸರಿಯಲ್ಲ
ಎ. ಎಮ್. ಮರುಳಾರಾಧ್ಯ
ಬಿಜೆಪಿ ಮಂಡಲ ಅಧ್ಯಕ್ಷರು
