ಜಗಳೂರು : 9ನೇ ತರಗತಿ ವಿದ್ಯಾರ್ಥಿ ಮುಜಮಿಲ್ ಹೃದಯಘಾತದಿಂದ ಮೃತಪಟ್ಟಿರುವ ಘಟನೆ ಜರುಗಿದೆ.
ತಾಲೂಕಿನ ಗೋಗುದ್ದು ಗ್ರಾಮದ ಚಮನ್ ಸಾಬ್ ಮತ್ತು ಫಾತೀಮಾರ ಮೂರು ಜನ ಮಕ್ಕಳಲ್ಲಿ ಮುಜಮಿಲ್ ದ್ವಿತೀಯ ಪುತ್ರನಾಗಿದ್ದ ಈ ವಿದ್ಯಾರ್ಥಿಯು ಸೋಮವಾರ ಮುಂಜಾನೆ ಸುಮಾರು ಮೂರು ಗಂಟೆ ವೇಳೆಗೆ ಮೂತ್ರ ವಿಸರ್ಜನೆ ಮಾಡಿ ಮನೆ ಒಳಗೆ ಬಂದು ಕುಸಿದು ಬಿದ್ದಿದ್ದಾನೆ.
ಪೋಷಕರು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯದಲ್ಲಿಯೇ ವಿದ್ಯಾರ್ಥಿಯನ್ನು ಮೃತಪಟ್ಟಿದ್ದಾನೆ.
ತಾಲೂಕಿನ ಹನುಮಂತಪುರ ಗ್ರಾಮದ ರಾಜೀವ್ ಗಾಂಧಿ ವಸತಿ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು,
Read also : ದೇವಸ್ಥಾನದಿಂದ ದಂಪತಿಗೆ ಹೊರಗೆ ಕಳಿಸಿದ ಪ್ರಕರಣ : ತೀವ್ರವಾಗಿ ಖಂಡಿಸಿದ ಡಿಎಸ್ಎಸ್ ಜಿಲ್ಲಾ ಸಂಚಾಲಕ ಡಿ.ಹನುಂಮತಪ್ಪ
ವಿದ್ಯಾರ್ಥಿ ನಿಧನಕ್ಕೆ ಜ್ಞಾನಜ್ಯೋತಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ತಿಪ್ಪೇಸ್ವಾಮಿ ಮತ್ತು ರಾಜೀವ್ ಗಾಂಧಿ ವಸತಿ ಪ್ರೌಢಶಾಲೆಯ ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕರು, ಗೋಗುದ್ದು ಗ್ರಾಮದ ಮುಖಂಡರು ಸಂತಾಪ ಸೂಚಿಸಿದ್ದಾರೆ.
