ಜಗಳೂರು: ಇದೇ ಪ್ರಥಮಬಾರಿಗೆ ತಾಲೂಕಿನ ಬಂಗಾರಿ ಗುಡ್ಡದ ಬಸವೇಶ್ವರ ಸ್ವಾಮಿಯ ನೂತನ ರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಜರುಗಿತು.
ತಾಲೂಕಿನ ಬಂಗಾರಿ ಗುಡ್ಡದ ಸಮೀಪ ಶ್ರೀ ಬಸವೇಶ್ವರ ಸ್ವಾಮಿಯ ರಥಕ್ಕೆ ವಿವಿಧ ಪುಷ್ಪಗಳಿಂದ ಅಲಂಕಾರಗಳನ್ನು ಮಾಡಲಾಗಿತ್ತು. ಪೂಜಾರಪ್ಪರು ರಥಕ್ಕೆ ವಿವಿಧ ಪೂಜಾ ಕಾರ್ಯಗಳನ್ನು ನೆರವೇರಿಸಿದ ನಂತರ ರಥದ ಗಾಳಿಗೆ ಕಾಯಿ ಒಡೆದು ಪೂಜೆ ನೆರವೇರಿಸಿದರು.
ನಂತರ ಸ್ವಾಮಿಯ ಮುಕ್ತಿ ಪಟವನ್ನು ಸದರಿ ಗ್ರಾಮದ ತಿಪ್ಪೇಸ್ವಾಮಿ 70 ಸಾವಿರ ರೂಗೆ ತೆಗೆದುಕೊಂಡರು.
ನಂತರ ನಡೆದಿದ್ದ ಭಕ್ತರು ಬಾಳೆಹಣ್ಣು ಇಷುದರ ಮೂಲಕ ಮತ್ತು ಕಾಯನ್ನು ಹೊಡೆಯುವುದರ ಮೂಲಕ ಭಕ್ತಿ ಸಮರ್ಪಿಸಿದರು. ನಡೆದಿದ್ದ ಸಾಗರ ಭಕ್ತರು ರಥವನ್ನು ಎಳೆದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಎಸ್ಟಿ ಘಟಕದ ಪ್ರಧಾನ ಕಾರ್ಯದರ್ಶಿ ಕುಮಾರ್ , ಜಿ.ಪಂ ಸದಸ್ಯ ಕೆ.ಪಿ. ಪಾಲಯ್ಯ , ಮಾಜಿ ಶಾಸಕರುಗಳಾದ ಹೆಚ್. ಪಿ.ರಾಜೇಶ್ , ಎಸ್.ವಿ. ರಾಮಚಂದ್ರ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಸ್ಥರು ಹಾಜರಿದ್ದರು.
