Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ಸಮಾಜ ಸೇವೆ ಮೊದಲಿನಷ್ಟು ಸುಲಭವಲ್ಲ : ಶಾಸಕ ಟಿ.ರಘುಮೂರ್ತಿ
ತಾಜಾ ಸುದ್ದಿ

ಸಮಾಜ ಸೇವೆ ಮೊದಲಿನಷ್ಟು ಸುಲಭವಲ್ಲ : ಶಾಸಕ ಟಿ.ರಘುಮೂರ್ತಿ

Dinamaana Kannada News
Last updated: February 24, 2026 3:19 am
Dinamaana Kannada News
Share
jagalore
SHARE

ಜಗಳೂರು : ಸಮಾಜ ಸೇವೆ ಮೊದಲಿನಷ್ಟು ಸುಲಭವಲ್ಲ.ಸ್ವಾರ್ಥ ಲಾಲಸೆಗಳೇ ತುಂಬಿದ ಇಂದಿನ ದಿನಮಾನಗಳಲ್ಲಿ ಮಠ ಮಾನ್ಯಗಳು, ರಾಜಕಾರಿಣಿಗಳು, ಯಾವುದೇ ಕ್ಷೇತ್ರದ ಪ್ರಮುಖರು ಪ್ರಾಮಾಣಿಕವಾಗಿ ಜನಸೇವೆ ಮಾಡಲು ಹತ್ತಾರು ಅಡ್ಡಿ ಆತಂಕ ಕಷ್ಟಗಳು ಎದುರಾಗುತ್ತವೆ ಅವುಗಳನ್ನು ಎದುರಿಸಿ ಸೇವೆಕೊಡ ಬೇಕು ಎಂದು ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಅಭಿಪ್ರಾಯಪಟ್ಟರು.

ತಾಲೂಕಿನ ಮುಸ್ಟೂರು ಗ್ರಾಮದ ಶ್ರೀ ಮಠದಲ್ಲಿ ದಕ್ಷಿಣ ಕಾಶಿ ಎನಿಸಿರುವ ತಪೋ ಕ್ಷೇತ್ರದ ಶ್ರೀಮದ್ ಸಾಕ್ಷಾತ್ ಶಿವನ ಅವತಾರಿ ಸದ್ಗುರು ಓಂಕಾರ ಹುಚ್ಚನಾಗಲಿಂಗ ಶಿವಾಚಾರ್ಯ ಶಿವಯೋಗಿಗಳ 66ನೇ ಪುಣ್ಯ ಸ್ಮರಣೋತ್ಸವ ಅಂಗವಾಗಿ ಶ್ರೀ ಓಂಕಾರ ಹುಚ್ಚನಾಗಲಿಂಗ ಮಹಾ ಸ್ವಾಮಿ ಚರಿತೆ ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಹುಚ್ಚಪ್ಪಗಳ ಪರಂಪರೆಯನ್ನು ಹೊಂದಿರುವ ಮುಸ್ಟೂರು ಶ್ರೀ ಓಂಕಾರ ಹುಚ್ಚ ನಾಗಲಿಂಗಸ್ವಾಮಿಗಳ ಆಧ್ಯಾತ್ಮ ಶಕ್ತಿಯಿಂದ ತಪೋಕ್ಷೇತ್ರವಾಗಿದೆ.ನಾನು ಹೈಸ್ಕೂಲು ಓದಿದ್ದು ಮುಸ್ಟೂರಿನ ಶ್ರೀ ಮಠದ ಶಾಲೆಯಲ್ಲಿಯೇ.ಪಕ್ಕದ ಹಳ್ಳಿಯವರಾದ ಎನ್.ಟಿ. ಎರ್ರಿಸ್ವಾಮಿಯವರು ವಿದ್ಯಾರ್ಥಿ ದೆಸೆಯಲ್ಲಿಯೇ ನನಗೆ ಮಾದರಿ ವ್ಯಕ್ತಿಯಾಗಿದ್ದರು. ಬ್ಯಾಂಕಿಂಗ್ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಇವರ ಸಾಧನೆ ಹಿರಿದಾದುದು.ಇಂತಹವರು ರಚಿಸಿರುವ ಓಂಕಾರ ಹುಚ್ಚನಾಗಲಿಂಗಸ್ವಾಮಿಗಳ ಕುರಿತಾದ ಕೃತಿ ಬಹಳ ಅರ್ಥಪೂರ್ಣವಾಗಿ ಮೂಡಿಬಂದಿದೆ ಎಂದರು.

ಇಂದಿನ ಸಮಾಜದಲ್ಲಿ ಸಮಾಜಮುಖಿ ಕೆಲಸ ಮಾಡುವಾಗ ಹಲವಾರು ಅಡೆತಡೆಗಳು ಬರುತ್ತಿದ್ದು. ಅವೆಲ್ಲವನ್ನು ಬದಿಗೆ ಸರಿಸಿ ನಾವು ಸಮಾಜಮುಖಿಗಳಾದಾಗಲೇ ಬದುಕು ಸಾರ್ಥಕ ವಾಗಲಿದೆ ಎಂದು ಹೇಳಿದರು.

ರೇಖಲಗೆರೆಯ ದೇನಾಭಗತ್ ಗುರೂಜಿಯವರು ಮಾತನಾಡಿ ಧಾರ್ಮಿಕ ಕೃತಿಗಳು ಇಂದಿನ ಅಗತ್ಯವಾಗಿದೆ. ಎರ್ರಿ ಸ್ವಾಮಿಯವರು ಶ್ರೀಗಳ ಬಗ್ಗೆ ಬರೆದಿರುವ ಕೃತಿ ಸಾರ್ಥಕವಾದುದು. ಮುಸ್ಟೂರು ಮಠಕ್ಕೆ ತನ್ನದೇ ಆದ ಇತಿಹಾಸವಿದೆ. ಅದು ಮತ್ತೆ ಪ್ರಜ್ವಲಿಸುವಂತಾಗಲಿ ಎಂದು ಆಶಿಸಿದರು.

ಇದನ್ನೂ ಓದಿ : ಜಗಳೂರು|ಬಂಗಾರಿ ಗುಡ್ಡದ ಬಸವೇಶ್ವರ ಸ್ವಾಮಿಯ ನೂತನ ರಥೋತ್ಸವ

ಶ್ರೀ ಷ.ಬ್ರ. ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಶ್ರೀ ಓಂಕಾರ ಹುಚ್ಚನಾಗಲಿಂಗಸ್ವಾಮಿಗಳ 66ನೇ ಸಂಸ್ಮರಣೆ ಕಾರ್ಯಕ್ರಮವು ಹೌದು. ಇಂತಹ ಶುಭಸಂದರ್ಭದಲ್ಲಿ ಏರ‍್ರಿಸ್ವಾಮಿಯವರು ರಚಿಸಿರುವ ಕೃತಿ ಶ್ರೀ ಮಠದಲ್ಲಿಯೇ ಲೋಕಾರ್ಪಣೆಗೊಳ್ಳುತ್ತಿರುವುದು ಮಠದ ಗುರುಪರಂಪರೆಗೆ ಸಲ್ಲಿಸಿದ ಭಕ್ತಿಯಾಗಿದ್ದು ಇದು ಶ್ರೀ ಮಠಕ್ಕೆ ಮತ್ತು ಭಕ್ತರಿಗೆ ಸಂತೋಷವನ್ನುಂಟುಮಾಡಿದೆ ಎಂದರು.

ಕರಿಬಸವೇಶ್ವರ ಗದ್ದುಗೆ ಮಠದ ಪೂಜ್ಯ ಪರಮೇಶ್ವರ ಸ್ವಾಮಿಗಳು, ಹಿರೇಮಠದ ಶ್ರೀ ಷ.ಬ್ರ. ವೀರೇಶ್ವರ ಶಿವಾಚಾರ್ಯರು, ನಿವೃತ್ತ ಉಪನ್ಯಾಸಕರು ಹಾಗೂ ಗ್ರಂಥ ದಾಸೋಹಿಗಳಾದ ಶ್ರೀ ಡಿ.ಸಿ. ಮಲ್ಲಿಕಾರ್ಜುನ ರವರು, ನಿವೃತ್ತ ಪ್ರಾಚಾರ್ಯರಾದ ಕೆ. ಮಂಜು ಲಿಂಗಪ್ಪ, ಮಾಜಿ ಶಾಸಕರಾದ ಹೆಚ್ .ಪಿ.ರಾಜೇಶ್ , ಎಸ್ .ವಿ. ರಾಮಚಂದ್ರ , ವೀರಶೈವ ಲಿಂಗಾಯತ ಮಹಾಸಭಾದ ತಾಲೂಕು ಅಧ್ಯಕ್ಷ ಅಜ್ಜಯ್ಯ ನಾಡಿಗರ್, ರಾಜ್ಯ ಕುಕ್ಕುಟ ಮಹಾ ಮಂಡಳದ ನಿರ್ದೇಶಕ ವೈ.ಎನ್. ಮಂಜುನಾಥ, ಜಿ.ಪಂ ಮಾಜಿ ಅಧ್ಯಕ್ಷ ತುರುವನೂರು ಬಾಬುರೆಡ್ಡಿ ಮತ್ತಿತರರು ಹಾಜರಿದ್ದರು.

TAGGED:Davanagere Newsdinamaana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂಶಾಸಕ ಟಿ.ರಘುಮೂರ್ತಿ
Share This Article
Twitter Email Copy Link Print
Previous Article jagalore ಜಗಳೂರು|ಬಂಗಾರಿ ಗುಡ್ಡದ ಬಸವೇಶ್ವರ ಸ್ವಾಮಿಯ ನೂತನ ರಥೋತ್ಸವ
Next Article jagalore ಮಡ್ರಳ್ಳಿ ಚೌಡಮ್ಮ ದೇವಿಯ ಗಡ್ಡೆ ತೇರಿನ  ರಥೋತ್ಸವಕ್ಕೆ ಸಕಲ ಸಿದ್ಧತೆಗೆ ಸೈಯದ್ ಕಲೀಂ ಉಲ್ಲಾ  ಸೂಚನೆ
Leave a comment

Leave a Reply Cancel reply

You must be logged in to post a comment.

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

Political analysis | ಚಕ್ರವ್ಯೂಹದಿಂದ ಪಾರಾದರಾ ಸಿಎಂ ಸಿದ್ದು?

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಳೆದ ವಾರ ಕರ್ನಾಟಕಕ್ಕೆ ಬಂದರು.ಹೀಗೆ ಬಂದವರು ಸಿಎಂ ಸಿದ್ಧರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ…

By Dinamaana Kannada News

ಅಂತರಾಷ್ಟ್ರೀಯ ಯೋಗ ದಿನಾಚರಣೆ : 5 ರಿಂದ 6 ಸಾವಿರ ಜನರು ಭಾಗಿ

ದಾವಣಗೆರೆ .ಜೂ.19    : ಸ್ವಂತ ಮತ್ತು ಸಮಾಜಕ್ಕಾಗಿ ಯೋಗ ಎಂಬ ಘೋಷವಾಕ್ಯದಡಿ ಜೂನ್ 21 ರಂದು ಅಂತರಾಷ್ಟ್ರೀಯ ಯೋಗ…

By Dinamaana Kannada News

ತಂಬಾಕು ಸೇವನೆ ಇಲ್ಲವಾಗಿಸುವುದು ಇಂದಿನ ಅತ್ಯಗತ್ಯ  : ನ್ಯಾ. ರಾಜೇಶ್ವರಿ  ಎನ್. ಹೆಗಡೆ

ದಾವಣಗೆರೆ:  ಮಾನವಾಭಿವೃದ್ಧಿಗೆ ಕಂಟಕವಾಗಿರುವ ತಂಬಾಕು ಸೇವನೆಯ ಪಿಡುಗನ್ನು ಸಂಪೂರ್ಣವಾಗಿ ಇಲ್ಲವಾಗಿಸಿವುದು ಇಂದಿನ ಅತ್ಯಗತ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ…

By Dinamaana Kannada News

You Might Also Like

Dr. B. Shivakumar
ಆರೋಗ್ಯ

ಹಿಮ್ಮಡಿ ನೋವು ಬರಲು ಕಾರಣ ಮತ್ತು ಆಯುರ್ವೇದ ಚಿಕಿತ್ಸೆ : ಡಾ.ಬಿ.ಶಿವಕುಮಾರ್

By ಡಾ.ಬಿ. ಶಿವಕುಮಾರ್
jagalore
ತಾಜಾ ಸುದ್ದಿ

ಮಡ್ರಳ್ಳಿ ಚೌಡಮ್ಮ ದೇವಿಯ ಗಡ್ಡೆ ತೇರಿನ  ರಥೋತ್ಸವಕ್ಕೆ ಸಕಲ ಸಿದ್ಧತೆಗೆ ಸೈಯದ್ ಕಲೀಂ ಉಲ್ಲಾ  ಸೂಚನೆ

By Dinamaana Kannada News
jagalore
ತಾಜಾ ಸುದ್ದಿ

ಜಗಳೂರು|ಬಂಗಾರಿ ಗುಡ್ಡದ ಬಸವೇಶ್ವರ ಸ್ವಾಮಿಯ ನೂತನ ರಥೋತ್ಸವ

By Dinamaana Kannada News
Davanagere
ತಾಜಾ ಸುದ್ದಿ

ಕೆರೆಯನ್ನು ಮಕ್ಕಳಂತೆ ರಕ್ಷಿಸಿ : ಉಜ್ಜಯಿನಿ ಪೀಠದ ಶ್ರೀಮದ್ ಉಜ್ಜಯಿನಿ ಶ್ರೀಗಳು

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?