ಬೆಂಗಳೂರು : ಪಾಸ್ ವಿಥೌಟ್ ಹಿಂದಿ ಕಾನೂನು ಜಾರಿಗೆ ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ಮುಖಂಡರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಮುಖ್ಯ ಕಾರ್ಯದರ್ಶಿ ರಶ್ಮಿ ಮಹೇಶ್ ಅವರನ್ನು ಭೇಟಿ ಮಾಡಿ ಎಚ್ಚರಿಕೆ ಪತ್ರ ನೀಡಿದರು.
ತದನಂತರ ಸಚಿವ ಮಧು ಬಂಗಾರಪ್ಪ ಅವರ ಆಪ್ತ ವಲಯಕ್ಕೆ ಮನವಿ ಸಲ್ಲಿಸಿ, ಎಚ್ಚರಿಸಲಾಯಿತು. 2-3 ದಿನಗಳಲ್ಲಿ ತುರ್ತಾಗಿ ಸಚಿವರ ಸಮ್ಮುಖದಲ್ಲಿ ಸಭೆ ಕರೆಯುವ ಭರವಸೆ ದೊರೆಯಿತು.
ಕರ್ನಾಟಕದಲ್ಲಿ ಪ್ರತಿ ವರ್ಷ ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೂರನೇ ಭಾಷೆ ಹಿಂದಿಯಲ್ಲಿ ಅನುತ್ತೀರ್ಣರಾಗುತಿದ್ದಾರೆ, ಅನುತ್ತೀರ್ಣರಾದವರ ವಿದ್ಯಾಭ್ಯಾಸ ಕುಂಠಿತವಾಗುತ್ತಿದೆ. ಹಾಗಾಗಿ ಈ ವರ್ಷ ಪಾಸ್ ವಿಥೌಟ್ ಹಿಂದಿ ಕಾನೂನು ಜಾರಿಗೆ ತರಲೇಬೇಕು,ಇಲ್ಲವಾದಲ್ಲಿ ಮಾರ್ಚ್ 30ರಂದು ನಡೆಯುವ ಹಿಂದಿ ಪರೀಕ್ಷೆಯ ಕೊಠಡಿಗಳಿಗೆ ಕನ್ನಡಪರ ಹೋರಾಟಗಾರರು ಮತ್ತು ಜನರು ನುಗ್ಗಿ ಹಿಂದಿ ಪ್ರಶ್ನೆ ಪತ್ರಿಕೆ ಹರಿದು ಹಾಕಬೇಕಾದ ಸಂದರ್ಭ ಉಂಟಾಗುತ್ತದೆಂದು ಶಾಲಾ ಶಿಕ್ಷಣ ಇಲಾಖೆಗೆ ಮತ್ತೊಮ್ಮೆ ಎಚ್ಚರಿಕೆ ನೀಡಲಾಯಿತು.
Read also : Accident|ದೇವಿಕೆರೆ ಬಳಿ ಬೈಕ್ ಮತ್ತು ಆಟೋ ಡಿಕ್ಕಿ,ಓರ್ವ ವ್ಯಕ್ತಿ ಸಾವು
ದ್ರಾವಿಡ ಕನ್ನಡಿಗರು ಅಭಿ ಒಕ್ಕಲಿಗ, ಜೈ ಶಂಕರ್ , ಆನಂದ್ ಬುದ್ಧಿಸ್ಟ್, ಕನ್ನಡ ಪರ ಹೋರಾಟಗಾರರಾದ ಶಂಕರೇಗೌಡ, ಅಶ್ವಥ್,ಮಂಜು ಗಣಪತಿಪುರ , ಸಂವಿಧಾನ ಸೇನೆ ಡಾ.ಲೋಕೇಶ್ ಮೌರ್ಯ, ನರಸಿಂಹಮೂರ್ತಿ, ಸಿದ್ದರಾಮು, ವಕೀಲರಾದ ಚರಣ್ ಗೌಡ, ಸಚಿನ್ ಮತ್ತಿತರರು ಭಾಗವಹಿಸಿದ್ದರು.
