Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ಅಭಿಪ್ರಾಯ > ಇಂಡಿಯಾ ಒಕ್ಕೂಟದಲ್ಲಿ ರಾಜ್ಯಗಳ ಹೆಸರು ಬದಲಾವಣೆ ಸಾಧ್ಯವೇ?
ಅಭಿಪ್ರಾಯ

ಇಂಡಿಯಾ ಒಕ್ಕೂಟದಲ್ಲಿ ರಾಜ್ಯಗಳ ಹೆಸರು ಬದಲಾವಣೆ ಸಾಧ್ಯವೇ?

Dinamaana Kannada News
Last updated: February 26, 2026 1:22 am
Dinamaana Kannada News
Share
ಸಚಿನ್ ಒಕ್ಕಲಿಗ
SHARE

ಹೌದು ಸಾಧ್ಯ, ಮಂಗಳವಾರ ಫೆಬ್ರವರಿ 24, 2026 ಕೇಂದ್ರ ಸಚಿವ ಸಂಪುಟವು ‘ಕೇರಳ’ ರಾಜ್ಯವನ್ನು ‘ಕೇರಳಂ’ ಎಂದು ಮರುನಾಮಕರಣ ಮಾಡಲು ಅನುಮೋದನೆ ನೀಡಿದೆ. ಜೂನ್ 24, 2024 ರಂದು, ಕೇರಳ ವಿಧಾನಸಭೆಯು ಕೇಂದ್ರ ಸರ್ಕಾರವನ್ನು ರಾಜ್ಯಕ್ಕೆ ಮರುನಾಮಕರಣ ಮಾಡುವಂತೆ ಒತ್ತಾಯಿಸುವ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿತು.

ಇನ್ನು ಈ ಹಿಂದೆಯು ಇಂಡಿಯಾ ಒಕ್ಕೂಟ ಕೆಲವು ರಾಜ್ಯಗಳ ಹೆಸರುಗಳನ್ನು ಈಗಾಗಲೇ ಬದಲಾಯಿಸಲಾಗಿದೆ. 2007 ರಲ್ಲಿ, ಉತ್ತರಾಂಚಲ ರಾಜ್ಯದ ಹೆಸರನ್ನು ಉತ್ತರಾಖಂಡ ಎಂದು ಬದಲಾಯಿಸಲಾಯಿತು. 2011 ರಲ್ಲಿ, ಒರಿಸ್ಸಾ ಕಾಯ್ದೆಯ ಮೂಲಕ ಒರಿಸ್ಸಾದ ಹೆಸರನ್ನು ಒಡಿಶಾ ಎಂದು ಬದಲಾವಣೆ ಮಾಡಲಾಗಿದೆ. ಮತ್ತು ಈ ರಾಜ್ಯದ ಭಾಷೆಯ ಹೆಸರನ್ನು ‘ಒರಿಯಾ’ದಿಂದ “ಒಡಿಯಾ” ಎಂದು ಬದಲಾವಣೆ ಮಾಡಿರೋದನ್ನು ನಾವು ಗಮನಿಸಬಹುದು.

ಇಂಡಿಯಾ ಒಕ್ಕೂಟದ ಸಂವಿಧಾನದ “3 ನೇ ವಿಧಿಯ” ಪ್ರಕಾರ, ಸಂಸತ್ತು ಕಾನೂನಿನ ಮೂಲಕ ಯಾವುದೇ ರಾಜ್ಯದ ಹೆಸರನ್ನು ಬದಲಾಯಿಸುವ ಅಧಿಕಾರವನ್ನು ಹೊಂದಿರುತ್ತದೆ.

ಇನ್ನು ರಾಜ್ಯ ವಿಧಾನಸಭೆಯು ಮೊದಲು ಹೆಸರು ಬದಲಾವಣೆಗಾಗಿ ನಿರ್ಣಯವನ್ನು ಅಂಗೀಕರಿಸಿ ಗೃಹ ಸಚಿವಾಲಯಕ್ಕೆ (MHA) ಕಳುಹಿಸುತ್ತದೆ. ನಂತರ ಅದನ್ನು ರಾಷ್ಟ್ರಪತಿಗಳ ಶಿಫಾರಸಿಗಾಗಿ ಸಂಸತ್ತಿಗೆ ಕಳುಹಿಸಲಾಗುತ್ತದೆ. ರಾಷ್ಟ್ರಪತಿಗಳು ಶಿಫಾರಸು ಮಾಡಿದ ನಂತರವೇ ಅಂತಹ ಮಸೂದೆಯನ್ನು ಸಂಸತ್ತಿನಲ್ಲಿ ಪರಿಚಯಿಸಲು ಸಾಧ್ಯ ಆಗುತ್ತದೆ. ನಂತರ ಮಸೂದೆಯನ್ನು ಲೋಕಸಭೆ (ಕೆಳಮನೆ) or  ರಾಜ್ಯಸಭೆ (ಮೇಲ್ಮನೆ) ಯಲ್ಲಿ ಪರಿಚಯಿಸುವುದು ಮತ್ತು ಸರಳ ಬಹುಮತದಿಂದ ಅಂಗೀಕರಿಸಲ್ಪಡಬೇಕು, ಅಂದರೆ 50% ಕ್ಕಿಂತ ಹೆಚ್ಚು ಸದಸ್ಯರು ಯಾವುದೇ ಸದನದಲ್ಲಿ ಹಾಜರಿರಬೇಕು ಮತ್ತು ಮತವನ್ನು ಚಲಾಯಿಸಬೇಕು.

ಸಂಸತ್ತಿನಲ್ಲಿ ಅಂಗೀಕಾರವಾದ ನಂತರ, ಮಸೂದೆಯು ಅಂತಿಮ ಸಹಿಗಾಗಿ ರಾಷ್ಟ್ರಪತಿಗಳಿಗೆ ಹಿಂತಿರುಗುತ್ತದೆ. ರಾಷ್ಟ್ರಪತಿಗಳು  ಸಹಿ ಹಾಕಿದ ನಂತರ, ಅದು ಕಾಯಿದೆ ಆಗುತ್ತದೆ ಹಾಗೂ ಸಂವಿಧಾನದ ಮೊದಲ ಮತ್ತು ನಾಲ್ಕನೇ ವೇಳಾಪಟ್ಟಿಗಳಲ್ಲಿ ಅಧಿಕೃತವಾಗಿ ರಾಜ್ಯದ ಹೆಸರು ಬದಲಾವಣೆಯಾಗುತ್ತದೆ.

Read also:ಫಲಪುಷ್ಪ ಪ್ರದರ್ಶನ -2026:ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಚಾಲನೆ

ಒಟ್ಟಾರೆಯಾಗಿ ಒಂದು ರಾಜ್ಯದ ಹೆಸರನ್ನು ಬದಲಾವಣೆ ಮಾಡಲು ಈ ಮೇಲಿನ ಕ್ರಮವನ್ನು ಅನುಸರಿಸಬೇಕಾಗಿರುತ್ತದೆ. ನೋಡೋಣ ಕರ್ನಾಟಕದ ಹೆಸರನ್ನು “ಕನ್ನಡ ನಾಡು” ಎಂದು ಬದಲಾಯಿಸಬೇಕೆಂದು ಸುಮಾರು ವರ್ಷಗಳಿಂದ ಜನರ ಕೂಗಿದೆ, ಆದ್ರೆ ಜನಪ್ರತಿನಿಧಿಗಳು ಈ ಕೂಗನ್ನು ಕೆಳಿಸಿಕೊಳ್ಳುವ ಮನಸ್ಥಿತಿಯಲ್ಲಿ ಇಲ್ಲ. ಯಾವಾಗ ಜನರ ಅಪೇಕ್ಷೆಯನ್ನು ಕೇಳಿಸಿಕೊಂಡು ಕರ್ನಾಟಕವನ್ನು ಕನ್ನಡನಾಡು ಎಂದು ಹೆಸರು ಬದಲಾಯಿಸುತ್ತಾರೂ ಕಾದು ನೋಡಬೇಕಾಗಿದೆ. ಇದಕ್ಕಾಗಿ ಜನರು ಜನಪ್ರತಿನಿಧಿಗಳಿಗೆ ಇನ್ನಷ್ಟು ಒತ್ತಡ ಹಾಗೂ ತಿಳುವಳಿಕೆಯನ್ನು ತರಬೇಕಾಗಿದೆ….

ಸಚಿನ್ ಒಕ್ಕಲಿಗ 
ಕಾನೂನು ವಿಧ್ಯಾರ್ಥಿ , 7483235060
ನಾವು Dravida ಕನ್ನಡಿಗರು ಚಳುವಳಿ 
 ವಿದ್ಯಾರ್ಥಿ ಮುಖಂಡ

TAGGED:dinamaana.comKannada Newsಇಂಡಿಯಾ ಒಕ್ಕೂಟದಿನಮಾನ.ಕಾಂನಾವು Dravida ಕನ್ನಡಿಗರು ಚಳುವಳಿ
Share This Article
Twitter Email Copy Link Print
Previous Article Davanagere ಫಲಪುಷ್ಪ ಪ್ರದರ್ಶನ -2026:ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಚಾಲನೆ
Leave a comment

Leave a Reply Cancel reply

You must be logged in to post a comment.

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ಖಾತೆ ಸೀಜ್ ಮಾಡಿರುವುದು ಸರ್ವಾಧಿಕಾರಿ ಧೋರಣೆ : ಸಿಎಂ

ಬೆಂಗಳೂರು ಮಾ 22: ಸೋಲಿನ ಭಯದಲ್ಲಿ ಕಾಂಗ್ರೆಸ್ ಬ್ಯಾಂಕ್ ಖಾತೆಗಳನ್ನು ಬಿಜೆಪಿ ಸೀಜ್ ಮಾಡಿದೆ. ಈ ಬಾರಿ ಬಿಜೆಪಿಯನ್ನು ದೇಶದ…

By Dinamaana Kannada News

ದಾವಣಗೆರೆ: ಸುಪ್ರೀಂ ಪೀಠಕ್ಕೆ ಶೂ ಎಸೆದಿರುವುದು ಖಂಡಿಸಿ ಮನವಿ

ದಾವಣಗೆರೆ: ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರಗಳಾದ ಬಿ.ಆರ್ ಗವಾಯಿಯವರ ಮೇಲೆ ಶೂ ಎಸೆದಿರುವ ಘಟನೆ ಖಂಡಿಸಿ ದಾವಣಗೆರೆ ಜಿಲ್ಲಾ ವಕೀಲರ ಸಂಘದಿಂದ ಕೈಗೆ ಕೆಂಪು ಪಟ್ಟಿ ಧರಿಸಿ…

By Dinamaana Kannada News

ಯುವತಿಯ ಜೀವ ಉಳಿಸಿದ ನಂಜಪ್ಪ ಲೈಫ್‌ಕೇರ್‌ನ ತಜ್ಞರು: ಮೆದುಳಿನ ರಕ್ತಸ್ರಾವ ತಪ್ಪಿಸಿದ ಸುಧಾರಿತ ಚಿಕಿತ್ಸೆ

ದಾವಣಗೆರೆ: 21 ವರ್ಷದ ಯುವತಿಯೊಬ್ಬಳು ತೀವ್ರ ತಲೆನೋವಿನಿಂದ ಬಳಲುತ್ತಿದ್ದಾಗ, ನಂಜಪ್ಪ ಲೈಫ್‌ಕೇರ್ ಆಸ್ಪತ್ರೆಯ ತಜ್ಞ ವೈದ್ಯರು ಆಕೆಯ ಜೀವವನ್ನು ಆಧುನಿಕ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ಫಲಪುಷ್ಪ ಪ್ರದರ್ಶನ -2026:ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಚಾಲನೆ

By Dinamaana Kannada News
jagalore
ತಾಜಾ ಸುದ್ದಿ

ಸಮರ್ಪಕ ವಿದ್ಯುತ್ ಪೂರೈಕೆಗಾಗಿ ಆಗ್ರಹಿಸಿ ರೈತರಿಂದ ಬೆಸ್ಕಾಂಗೆ ಮುತ್ತಿಗೆ

By Dinamaana Kannada News
jagalore
ತಾಜಾ ಸುದ್ದಿ

ಸುಖ,ನೆಮ್ಮದಿ,ಶಾಂತಿ,ಆರೋಗ್ಯಗಳು ಕ್ಷೀಣ : ಕಣ್ವಕುಪ್ಪೆ ಶ್ರೀ

By Dinamaana Kannada News
maize
ತಾಜಾ ಸುದ್ದಿ

ಮೆಕ್ಕೆಜೋಳ ಬೆಳೆಗೆ ಸಮರ್ಪಕವಾದ ಬೆಲೆ ದೊರೆಯುತ್ತಿಲ್ಲ  ರೈತರ ಕೂಗು

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?