ದಾವಣಗೆರೆ: ರಾಜ್ಯ ಸರಕಾರ ಒಳಮೀಸಲಾತಿ ಅನ್ವಯವೇ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಮಾಜಿ ಸಚಿವ ಎಚ್.ಅಂಜನೇಯ ಆಗ್ರಹಿಸಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 3 -4 ದಶಕಗಳ ಕಾಲ ಮಾದಿಗ ಸಮುದಾಯ ಒಳಮೀಸಲಾತಿಗಾಗಿ ಹೋರಾಟ ನಡೆಸತ್ತಾ ಬಂದಿದೆ. ಅದರಂತೆ ಸುಪ್ರೀಂ ಕೋರ್ಟ್ ಸಹ ಒಳಮೀಸಲಾತಿ ಕಲ್ಪಿಸಲು ರಾಜ್ಯ ಸರಕಾರಗಳಿಗೆ ಅವಕಾಶವಿದೆ ಎಂದು ಹೇಳಿದೆ. ರಾಜ್ಯದಲ್ಲಿ ಮೇಲ್ಮನೆ ಮತ್ತು ಕೆಳಮನೆಯಲ್ಲೂ ಅಂಗೀಕಾರವಾಗಿ.ಈಗ ರಾಜ್ಯಪಾಲರು ಸಹ ಅಂಕಿತ ಹಾಕಿದ್ದಾರೆ. ಇದರಿಂದ ಒಳಮೀಸಲಾತಿಗೆ ಕಾನೂನು ಬಲ ಬಂದಿದೆ. ಅದ್ದರಿಂದ ರಾಜ್ಯ ಸರಕಾರ ಒಳಮೀಸಲಾತಿ ಅನ್ವಯವೇ ನೇಮಕಾತಿ ಮಾಡಬೇಕು ಎಂದು ಒತ್ತಾಯಿಸಿದರು.
ಒಳಮೀಸಲಾತಿ ಅನ್ವಯವೇ ನೇಮಕಾತಿ ಮಾಡವಂತೆ ಸಮುದಾಯದ ಸಚಿವರು, ಶಾಸಕರ ಜೊತೆ ಮಾ.3 ಅಥವಾ 4 ರಂದು ಮುಖ್ಯಮಂತ್ರಿಗಳನ್ನು ಭೇಟಿ ಮನವರಿಕೆ ಮಾಡಿಕೊಡಲಾಗುವುದು ಎಂದರು.
ಈಗಾಗಾಲೇ ಪರಿಶಿಷ್ಟ ಜಾತಿ ಸಮುದಾಯ ಶೇ 17 ರಷ್ಟು ಮೀಸಲಾತಿ ಇದೆ. ಪರಿಶಿಷ್ಟ ಪಂಗಡಕ್ಕೆ ಶೇ 7 ರಷ್ಟು ಅನ್ವಯದಲ್ಲಿ ಮೀಸಲಾತಿ ಪಡೆಯುತ್ತಿದ್ದಾರೆ. ಈಗ ಪ.ಜಾತಿ ಮತ್ತು ಪಂಗಡಗಳಿಗೆ ಮೀಸಲಾತಿಯನ್ನು ಶೇ 18 ಕ್ಕೆ ಇಳಿಸಿದರೆ ಈ ಸಮುದಾಯಗಳಿಗೆ ಬಾರಿ ಅನ್ಯಾಯವಾಗಲಿದೆ. ಬಿಜೆಪಿ ಅಡಳಿತದ ಅವಧಿಯಲ್ಲಿ ಮೀಸಲಾತಿಯನ್ನು ಶೇ 24 ಕ್ಕೆ ಹೆಚ್ಚಳ ಮಾಡಲಾಗಿತ್ತು. ಕಳೆದ 4 ವರ್ಷಗಳಿಂದ ಇದರ ಅನ್ವಯವೇ ಮೀಸಲಾತಿ ಪಡೆಯುತ್ತಿದ್ದಾರೆ. ಈಗ ಕೋರ್ಟ್ ಕಾರಣ ಹೇಳಿ ಮೀಸಲಾತಿ ಇಳಿಕೆ ಯಾವ ನ್ಯಾಯ ಎಂದು ಪ್ರಶ್ನಿಸಿದರು.
ಶೇ 24 ಮೀಸಲಾತಿಯಂತೆ ಹಾಗೂ ಒಳಮೀಸಲಾತಿಯಿಂತೆ ಹುದ್ದೆಗಳ ನೇಮಕಾತಿ ನಡೆಯಬೇಕು. 56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಎಸ್ಸಿ ಎಸ್ಟಿ ಸಮುದಾಯಗಳಿಗೆ ಮೀಸಲು ಪ್ರತ್ಯೇಕಗೊಳಿಸಿ ಉಳಿದ ಸಮುದಾಯಗಳಿಗೆ ನೇಮಕಾತಿ ಅದರಡಿ ನೇಮಕಾತಿ ಮಾಡಬೇಕು. ಹಳೇ ಮೀಸಲಾತಿಯಂತೆ ನೇಮಕಾತಿ ನಡೆದರೆ ಎಸ್ಸಿ-ಎಸ್ಟಿ ಸಮುದಾಯಗಳಿಗೆ ಅನ್ಯಾಯವಾಗಲಿದೆ. ಒಳಮೀಸಲಾತಿ ಇಲ್ಲದೇ ನೇಮಕಾತಿಗಳು ನಡೆದರೆ ಮಾದಿಗ ಸಮುದಾಯಕ್ಕೆ ಘೋರ ಅನ್ಯಾಯ ಆಗಲಿದೆ. ಅದ್ದರಿಂದ ಮುಖ್ಯಮಂತ್ರಿಗಳು ಯಾವುದೇ ಶಕ್ತಿಗಳಿಗೆ ಹೆದರದರೆ ರಾಜಕೀಯ ಇಚ್ಚಾಶಕ್ತಿ ತೋರಬೇಕು. ಸಾಮಾಜಿಕ ನ್ಯಾಯದಡಿ ನಮಗೆ ನ್ಯಾಯಕೊಡಿಸಬೇಕು ಎಂದರು.
ಮಾದಿಗ ಸಮುದಾಯ ಆತಂಕ ಪಡುವ ಅಗತ್ಯವಿಲ್ಲ. ನಾನು, ಆಗ ಸಮುದಾಯದ ಇಬ್ಬರು ಮಂತ್ರಿಗಳು ಹಾಗೂ ಶಾಸಕರು ಮುಖ್ಯಮಂತ್ರಿಗಳ ಬಳಿ ಒಳಮೀಸಲಾತಿಯಡಿ ಹುದ್ದೆಗಳ ಭರ್ತಿಗೆ ತುಂಬಲು ಒತ್ತಾಯ ತರಲಾಗುವುದು. ಸದಾಶಿವ ಆಯೋಗ ,ನಾಗಮೋಹನದಾಸ ಆಯೋಗ ಮಾದಿಗ ಸಮುದಾಯಗಳಿಗೆ ಶೇ 6 ರಷ್ಟು ಮೀಸಲಾತಿ ನೀಡುವಂತೆ ಹೇಳಿವೆ. ಅಲ್ಲದೇ ಅಲೆಮಾರಿಗಳಿಗೆ ಶೇ 1 ರಷ್ಟು ಜನಸಂಖ್ಯೆಗೆ ಅನುಗುಣವಾಗಿ ನೀಡುವಂತೆ ಹೇಳಿದೆ. ಇದು ಸಾಮಾಜಿಕ ನ್ಯಾಯವಾಗಿದೆ. ಅದರೆ, ಇದನ್ನು ವೈಜ್ಞಾನಿಕವಾಗಿ ಮತ್ತು ಸಂವಿಧಾನದತ್ತವಾಗಿದೆ. ಇದನ್ನು ವಿರೋಧಿಸುವವರು ಸಂವಿಧಾನ ವಿರೋಧಿಗಳು ಎಂದರು.
Read also : ಮಾದಕ ವಸ್ತುಗಳ ಅಕ್ರಮ ದಂಧೆ : ಸಂತೇಬೆನ್ನೂರಿನ ಜಾಕೀರ್ ಬಂಧನ,ಜೈಲಿಗೆ
ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಅಹಿಂದ ಸಮುದಾಯಗಳಿಗೆ ಟೀಕೆಟ್ ಕುರಿತು ಮಾತನಾಡಿದ ಅವರು ಕಾಂಗ್ರೆಸ್ ಪಕ್ಷದ ಹೈಕಮಾಂಡ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್. ಮಲ್ಲಿಕಾರ್ಜುನ್ ಅವರನ್ನು ವಿಶ್ವಾಸಕ್ಕೆ ಪಡೆದು ನಿರ್ಧಾರ ಮಾಡಲಿದೆ. ಕಾಂಗ್ರೆಸ್ ಪಕ್ಷದಲ್ಲಿ ಎಲ್ಲ ಧರ್ಮಿಯರಿಗೂ ಅವಕಾಶ ನೀಡುವ ಪಕ್ಷ ಕಾಂಗ್ರೆಸ್ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಬಸವಂತಪ್ಪ, ಎಸ್ .ಮಲ್ಲಿಕಾರ್ಜುನ್, ಎಸ್.ಎನ್.ಬಾಲಾಜಿ ಸೇರಿದಂತೆ ಇತರರು ಇದ್ದರು.
